ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕಲಾತ್ಮಕ ಚಿತ್ರ ಚೌಕಿ(ರಂಗಿನ ಮನೆ)

ಮಂಗಳೂರು: ಅವಕಾಶಕ್ಕಾಗಿ ಕಾಯುವ ಬದಲು ತಾವೇ ಅವಕಾಶವನ್ನು ಸೃಷ್ಟಿಸಬೇಕೆಂದು ಹೊರಟ ಹೊಸಬರ ತಂಡ ಯುವ ನಿರ್ದೇಶಕ ಜಯಪ್ರಕಾಶ್ ಸಿ.ಎಸ್ ಮತ್ತು ತಂಡದ ಒಂದು ಸಣ್ಣ ಪ್ರಯತ್ನವೇ ಚೌಕಿ .

ಕಲಾವಿದನ ಮೂಲ ವ್ಯಕ್ತಿತ್ವ ಮತ್ತು ರಂಗದಲ್ಲಿ ನಿರ್ವಹಿಸುವ ಪಾತ್ರದ ಪರಕಾಯ ಪ್ರವೇಶದ ನಡುವೆನ ಕಾದಾಟ ಮಾನಸಿಕ ಗೊಂದಲವೇ ಚಿತ್ರದ ಕಥಾವಸ್ತು, 

ಯಕ್ಷಗಾನದ ಕಲಾವಿದನ ಕಥೆಯನ್ನು ಪ್ರಮುಖವಾಗಿಟ್ಟು ಚಿತ್ರವನ್ನು ಸಿದ್ಧಪಡಿಸಲಾಗಿದ್ದು; ದೇರಳಕಟ್ಟೆ ಸುರೇಶ್ ಚಿತ್ರಕ್ಕೆ ಪರಿಕಲ್ಪನೆ ಮಾಡಿದ್ದು ಅದಕ್ಕೆ ಛಾಯಾಗ್ರಹಣದೊಂದಿಗೆ ಸಂಬಾಷಣೆಯನ್ನು ಬರೆದಿರುತ್ತಾರೆ. 

ಚಿತ್ರದಲ್ಲಿ ಐದು ಹಾಡುಗಳಿದ್ದು ಶಕೀಲ್ ಅಹಮ್ಮದ್ ಸಂಗೀತಕ್ಕೆ ವಿಜೇಶ್ ದೇವಾಡಿಗ ಮಂಗಳಾದೇವಿ ಮೂರು ಮತ್ತು ನಿಶ್ಚಲ್ ದಂಬೆಕೋಡಿ ಒಂದು ಹಾಡು ಮತ್ತೊಂದು ಹಾಡನ್ನು ಇಬ್ಬರು ಒಟ್ಟಾಗಿ ಬರೆದಿದ್ದಾರೆ. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅನುರಾಧ ಭಟ್ ದ್ವನಿಯೊಂದಿಗೆ ಹೊಸ ಗಾಯಕರಾದ ಚೇತನ್ ರಾಮ್ ಮತ್ತು ಪ್ರಿಯಾ ಯಾದವ್ ಹಾಡಿದ್ದಾರೆ. ಹಾಡುಗಳ ಬಿಡುಗಡೆ ಸದ್ಯದಲ್ಲೇ ನೆರವೇರಲಿದೆ.

ಅನೇಕ ಕಲಾತ್ಮಕ ಚಿತ್ರಗಳಿಗೆ ಸಂಕಲನ ಮಾಡಿ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಿದ ಸಂಕಲನಕಾರ m.n ಸ್ವಾಮಿ ಸಂಕಲನ ಮಾಡಿದ್ದು ಸುಹಾಸ್ ಅವರೊಂದಿಗೆ ಸಹಾಯಕರಾಗಿದ್ದಾರೆ.

ಅಪ್ಪಟ್ಟ ಕನ್ನಡ ಸೊಗಡಿನ ಕಲಾತ್ಮಕ ಚಲನಚಿತ್ರ ಇದಾಗಿದ್ದು ಅತಿಶೀಘ್ರದಲ್ಲಿ ಬಿಡುಗಡೆ ಸಿದ್ದತೆ ನಡೆಯುತ್ತಿದೆ.

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕಲಾತ್ಮಕ ಚಿತ್ರ ಚೌಕಿ(ರಂಗಿನ ಮನೆ) ( ಟೀಸರ್)
 


Share