ಬಿಜೂರು: ವಜ್ರದುಂಬಿ ಯಕ್ಷ ಷಷ್ಠಿಮಹೋತ್ಸವ  2020;  ಗ್ರಾಮದ ಸನ್ಮಾನ ಹಾಗು ಆರ್ಥಿಕ ಧನ ಸಹಾಯ 

ಬಿಜೂರು: ವಜ್ರದುಂಬಿ (ರಿ.) ಬಿಜೂರ್ ರವರ ವತಿಯಿಂದ ಜರುಗಿದ ಯಕ್ಷ ಷಷ್ಠಿ -  2020 ರ ವೇಧಿಕೆಯಲ್ಲಿ, ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಾದ 79ವಯಸ್ಸಿನ , ನದಿ ಹಾಗು ಬೆಂಕಿ  ಅವಘಡಗಳಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಂಡು ಜೀವರಕ್ಷರಾಗಿ ಸಾಧನೆ ಮಾಡಿದ ಬಿಜೂರಿನ ಸಂಪ್ರೇ ಶೇಶಣ್ಣ ರೆಂದು ಕರೆಯುವ ಶೇಷಯ ಶೇರುಗಾರ್ ರವರನ್ನು ಗುರುತಿಸಿ ಸನ್ಮಾನಿಸಲಾಯಿತು .   

ಹುಟ್ಟಿನಿಂದಲೂ ಕಿವಿಕೇಳದ ಮಾತನಾಡಲು ಬಾರದ ಉಪ್ಪುಂದ ಅಮ್ಮನವರ ತೊಪ್ಪಲು ಭಾಗದ 7 ವರ್ಷದ ಹೆಣ್ಣುಮಗುವಿಗೆ  ಕಿವಿ ಕೇಳಲು ಸಾಧನವನ್ನು ಅಳವಡಿಸಲು ಸುಮಾರು 3 ಲಕ್ಷ ಅವಶ್ಯಕತೆ ಇದ್ದು; ಪೋಷಕರ ಮನವಿಯ ಮೇರೆಗೆ ಆರ್ಥಿಕ ಧನಸಹಾಯವನ್ನು ವೇದಿಕೆಯಲ್ಲಿ ಉಪಸ್ಥಿರಿದ್ದ ಬೈಂದೂರ್ ಪೊಲೀಸ್ ಠಾಣಾಧಿಕಾರಿಯಾದ ಸಂಗೀತ ರವರು ಹಸ್ತಾಂತರಿಸರಿದರು.

ಸಂಸ್ಥೆಯ ಗೌರವದ್ಯಕ್ಷರಾದ  ಲಕ್ಷ್ಮಿಕಾಂತ್ ಬೆಸ್ಕೂರ್, ರಾಘವೇಂದ್ರ ಬೈಟು,ಸುಧಾಕರ್ ನಾರಂಬಳ್ಳಿ, ಗಣೇಶ್ ಪೂಜಾರಿ ಗರಡಿ, ರಾಘವೇಂದ್ರ ಶೆಟ್ಟಿ ಹೇರಂಜಾಲ್ ಉಪಸ್ಥಿತರಿದ್ದರು .

ಹಿರಿಯರಾದ ಗೋವಿಂದ ಮಾಸ್ಟರ್ ನಾಯಕನಕಟ್ಟೆ ಕಾರ್ಯಕ್ರಮ ನಿರೂಪಿಸಿದರು .


Share