ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರ್ ಆಯ್ಕೆ

Byndoor: Mrs.Priyadharshini Beskoor has been nominated as President of Mahila Morcha Byndoor Assebly Constituency.

ಬೈಂದೂರು : ಭಾರತೀಯ ಜನತಾ ಪಾರ್ಟಿ ಬೈಂದೂರು ಕ್ಷೇತ್ರದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ಪ್ರಧಾನ ಕಾರ್ಯದರ್ಶಿಗಳಾಗಿ ದೀಪಕ್ ಕುಮಾರ್ ಶೆಟ್ಟಿ, ಬಾಲಚಂದ್ರ ಭಟ್, ಉಪಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ಶೆಟ್ಟಿ ಕೊಡ್ಲಾಡಿ, ವೆಂಕಟ್ ಪೂಜಾರಿ, ಚಂದ್ರಯ್ಯ ಆಚಾರ್ಯ, ಹರೀಶ್ ಮೇಸ್ತ, ಸುಶೀಲ, ರಾಮಪ್ಪ ಖಾರ್ವಿ, ಕಾರ್ಯದರ್ಶಿಗಳಾಗಿ ಜಗನ್ನಾಥ ಮೊಗವೀರ, ಮಂಜಯ್ಯ ಪೂಜಾರಿ, ಸುಜಾತ ಶೆಟ್ಟಿ, ಮಾಲತಿ ಬಿ. ನಾಯ್ಕ, ಪಾರ್ವತಿ ಕುಲಾಲ್, ಜಯಂತಿ ಪೂಜಾರಿ, ಕೋಶಾಧ್ಯಕ್ಷರಾಗಿ ಬಿ.ಎಸ್. ಸುರೇಶ್ ಶೆಟ್ಟಿ, ವಕ್ತಾರರಾಗಿ ಚಿಟ್ಟೆ ರಾಜಗೋಪಾಲ ಹೆಗ್ಡೆ ಆಯ್ಕೆಯಾಗಿದ್ದಾರೆ.

ರೈತ ಮೋರ್ಚಾದ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ, ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಪ್ರಿಯದರ್ಶಿನಿ ಬೆಸ್ಕೂರ್, ಯುವ ಮೋರ್ಚಾದ ಅಧ್ಯಕ್ಷರಾಗಿ ಶರತ್ ಶೆಟ್ಟಿ, ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷರಾಗಿ ಗಣೇಶ ಪೂಜಾರಿ, ಎಸ್.ಸಿ. ಮೋರ್ಚಾದ ಅಧ್ಯಕ್ಷರಾಗಿ ನಾರಾಯಣ ಕೆ. ಗುಜ್ಜಾಡಿ, ಎಸ್.ಟಿ. ಮೋರ್ಚಾದ ಅಧ್ಯಕ್ಷರಾಗಿ ಉದಯ ಹಳ್ಳಿಬೇರು, ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷರಾಗಿ ಅಬ್ದುಲ್ ಮುತಾಲಿಕ್ ಅವರನ್ನು ನೇಮಕ ಮಾಡಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಬೈಂದೂರು ಕ್ಷೇತ್ರದ ಸದಾನಂದ ಶೇರುಗಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Share