ಸುವರ್ಣನ್ಯೂಸ್ನ ಕವರ್ ಸ್ಟೋರಿ ಖ್ಯಾತಿಯ ವಿಜಯಲಕ್ಷ್ಮಿ ಶಿಬರೂರು ಅವರಿಗೆ ಪ್ರತಿಷ್ಠಿತ ವೀರ ಮಾತೆ ಅಕ್ಕನಾಗಮ್ಮ ಪುರಸ್ಕಾರ

ಬೀದರ್(ಫೆ.21): ಪ್ರತಿಷ್ಠಿತ ವೀರ ಮಾತೆ ಅಕ್ಕನಾಗಮ್ಮ ಪುರಸ್ಕಾರವನ್ನು ಸುವರ್ಣನ್ಯೂಸ್ನ ಕವರ್ ಸ್ಟೋರಿ ಖ್ಯಾತಿಯ ವಿಜಯಲಕ್ಷ್ಮಿ ಶಿಬರೂರು ಅವರಿಗೆ ನೀಡಿ ಗೌರವಿಸಲಾಗಿದೆ.

ಬೀದರ್ನ ಬಸವ ಸೇವಾ ಪ್ರತಿಷ್ಠಾನ ಪ್ರತಿ ವರ್ಷ ವಚನ ವಿಜಯೋತ್ಸವ ನಿಮಿತ್ತ ನೀಡುವ ರಾಷ್ಟ್ರ ಮಟ್ಟದ ವಿವಿಧ ಕ್ಷೇತ್ರಗಳ ಸಾಧಕರ ಪುರಸ್ಕಾರ ಇದಾಗಿದೆ. ಇವತ್ತು ಬೀದರ್ನ ಬಸವಗಿರಿಯಲ್ಲಿ ನಡೆಯುತ್ತಿರುವ ವಚನ ವಿಜಯೋತ್ಸವದ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಯ್ತು.

ಕಾರ್ಯಕ್ರಮದಲ್ಲಿ ಹಿರಿಯ ನಟಿ ತಾರಾ, ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ, ಡಾ.ನಿಲಾಂಬಿಕೆ ಸೇರಿದಂತೆ ಹಲವು ಮಹಿಳಾ ಸಾಧಕರು ಇದ್ದರು.


Share