ದೇವಾಡಿಗ ಸುಧಾರಕ ಸಂಘ (ರಿ) ಎಲ್ಲೂರು: ಶಾಸಕ ಶ್ರೀ ವಿನಯಕುಮಾರ್ ಸೊರಕೆಯವರಿಂದ ನೂತನ ಸಭಾಭವನದ ಶಿಲಾನ್ಯಾಸ

ಎಲ್ಲೂರು: ದೇವಾಡಿಗ ಸುಧಾರಕ ಸಂಘ (ರಿ) ಎಲ್ಲೂರು ಇದರ ವನ್ನು ಕರ್ನಾಟಕ ಸರ್ಕಾರದ ಮಾಜಿ ಸಚಿವ ಕಾಪು ವಿದಾನ ಸಭಾ ಕ್ಷೇತ್ರದ ಶಾಸಕ ಶ್ರೀ ವಿನಯಕುಮಾರ್ ಸೊರಕೆ ಅವರು ನೆರವೇರಿಸಿದರು.
ಬೆಳಿಗ್ಗೆ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ವಿದ್ದು ನಂತರ ಸಭಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಶಾಸಕರು 20 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿದ್ದು 5 ಲಕ್ಷ ರೂಪಾಯಿಗಳನ್ನು ತನ್ನ ಶಾಸಕ ನಿಧಿಯಿಂದ, ವಿದಾನ ಪರಿಷತ್ತಿನ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರ ನಿಧಿಯಿಂದ 5 ಕೊಡಿಸುದಾಗಿ ತಿಳಿಸಿದರು. ಅಲ್ಲದೆ ದೇವಾಡಿಗ ಸಮಾಜದ ದಾರ್ಮಿಕ ಸೇವೆಯನ್ನು ಹೊಗಳಿ ಸ್ಮರಿಸಿದರು ಹಾಗೂ ದೇವಾಡಿಗರು ಒಗ್ಗಟ್ಟಾಗಬೇಕೆಂದು ಕರೆ ನೀಡಿದರು.
ನಂತರ ಮಾತಾಡಿದ UPಅಐ ಸಂಸ್ಥೆಯ ಜಂಟಿ ನಿರ್ದೇಶಕ ಕಿಶೋರ್ ಆಳ್ವ ರವರು ಮಾತನಾಡುತ್ತಾ ತಮ್ಮ ಸಂಸ್ಥೆಯಿಂದ 10 ಲಕ್ಷ ರೂಪಾಯಿಗಳ ಮೊತ್ತ ನೀಡುವುದಾಗಿ ಘೋಷಿಸಿದರು ದೇವಾಡಿಗ ಸಮಾಜದ ವೀರಪ್ಪ ಮೊಯಿಲಿ ಯವರು ತಮ್ಮ ವಿದ್ಯಾಭ್ಯಾಸ ದ ಸಂದರ್ಭದಲ್ಲಿ ಮಾಡಿದ ಸಹಾಯವನ್ನು ಸ್ಮರಿಸಿದರು.
ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಬಾರಕೂರು ಇದರ ಅಧ್ಯಕ್ಷ ರಾದ ಅಣ್ಣಯ್ಯ ಸೇರಿಗಾರ್ ಬರುವ ವರ್ಷ ಸಂಘದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಊತನ ಸಭಾಭವನ ನಿರ್ಮಾಣ ಆಗಲಿ ಎಂದು ಹಾರೈಸಿದರು. ಏಕನಾಥೇಶ್ವರಿ ದೇವಸ್ಥಾನ ದ ವಿಶ್ವಸ್ಥರಾದ ಮೋಹನ ದಾಸ ಹಿರಿಯಡ್ಕ ಮಾತನಾಡಿ ಸಮುದಾಯದ ಜನರಿಗೆ ಸವಲತ್ತು ದೊರೆಯುವಂತಾಗಲಿ ಎಂದು ಹರಸಿದರು.
ದೇವಾಡಿಗ ಸೇವಾ ಸಂಘ ಉಡುಪಿ ಇದರ ಅಧ್ಯಕ್ಷ ರಾದ ಸೀತಾರಾಮ ದೇವಾಡಿಗ ಮಾತನಾಡಿ ಕಟ್ಟಡ ನಿರ್ಮಾಣ ಮಾಡುವಲ್ಲಿ ತಮ್ಮ ಸಂಪೂರ್ಣ ಸಹಕಾರವಿರುವುದಾಗಿ ತಿಳಿಸಿದರು. ಉಡುಪಿ ಸಂಘದ ಮಾಜಿ ಅಧ್ಯಕ್ಷ ರಾದ ಗಣೇಶ ದೇವಾಡಿಗ ಬ್ರಹ್ಮಗಿರಿ ಮಾತನಾಡಿ ತಾಯಿ ಏಕನಾಥೇಶ್ವರಿ ಯು ಶೀಘ್ರವಾಗಿ ಸಮುದಾಯ ಭವನ ನಿರ್ಮಾಣ ಆಗುವಂತೆ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
ಸಂಘದ ಅಧ್ಯಕ್ಷ ಯೋಗೀಶ ದೇವಾಡಿಗರು ಮಾತನಾಡಿ ತೆವಳುತ್ತಿದ್ದ ಸಂಘವನ್ನು ನಡೆಯುವಂತೆ ಮಾಡಿದ ಎಲ್ಲರನ್ನೂ ಸ್ಮರಿಸಿದರು. ತಾನು ಆಕಸ್ಮಿಕವಾಗಿ ಅಧ್ಯಕ್ಷ ನಾದುದನ್ನು ಹೇಳುತ್ತಾ ಈ ಸಂಘದ ಹೆಚ್ಚಿನ ಪದಾಧಿಕಾರಿಗಳು 35 ವರ್ಷಕ್ಕಿಂತ ಕೆಳಗಿನವರು. ಯೋಜನೆಯಲ್ಲಿ ಹಲವಾರು ರೀತಿಯ ವ್ಯತ್ಯಾಸಗಳು ತಪ್ಪು ಗಳು ಆಗಿರಬಹುದು. ಆದರೆ ಹಿರಿಯರೆಲ್ಲ ಸೂಕ್ತ ಮಾರ್ಗದರ್ಶನ ನೀಡಿ ಸಹಕರಿಸಬೇಕೆಂದರು.
ಎಲ್ಲೂರು ದೇವಾಡಿಗ ಸಂಘದ ಸ್ಥಾಪಕ ಗುರುವ ದೇವಾಡಿಗ, ಗೌರವ ಅಧ್ಯಕ್ಷ ವಾಸುದೇವಾಡಿಗ ಮಾಣಿಯೂರು, ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಸುವರ್ಣ, ತಾಲೂಕು ಪಂಚಾಯತ್ ಸದಸ್ಯ ಕೇಶವ ಮೊಯಿಲಿ, ಎಲ್ಲೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ವಸಂತಿ ಮದ್ವರಾಜ್, ಎಲ್ಲೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಯಶವಂತ ಶೆಟ್ಟಿ, ದೇವಾಡಿಗ ಸುಧಾರಕ ಸಂಘ ಎಲ್ಲೂರು ಇದರ ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ದೇವಾಡಿಗ ಉಪಸ್ಥಿತರಿದ್ದರು.
ಪ್ರವೀಣ್ ಕುಮಾರ್ ಕೆಮುಂಡೇಲು ಅತಿಥಿಗಳನ್ನು ಸ್ವಾಗತಿಸಿದರು. ಸತೀಶ ದೇವಾಡಿಗ ಮಾಣಿಯೂರು ಕಾರ್ಯಕ್ರಮ ನಿರ್ವಹಿಸಿದರು.ಅಮಿತಾ ದೇವಾಡಿಗರು ವಂದಿಸಿದರು.


Share