ದೇವಾಡಿಗ ಸಂಘ ಮುಂಬೈ – ಪ್ರಾದೇಶಿಕ ಸಮನ್ವಯ ಸಮಿತಿ ಡೊಂಬಿವಿಲಿ ವತಿಯಿಂದ ದೇವಾಡಿಗ ಫುಟ್ಬಾಲ್ ಲೀಗ್ 2017 -ಡೊಂಬಿವಿಲಿ ಟಿeಮ್ ಚಾಂಪಿಯನ್

 

ದೇವಾಡಿಗ ಫುಟ್ಬಾಲ್ ಲೀಗ್ 2017 - ಡೊಂಬಿವಿಲಿ oಟಿe ಚಾಂಪಿಯನ್


ರವಿವಾರ ದಿನಾಕ 1.10.2017 ರಂದು ದೇವಾಡಿಗ ಸಂಘ ಮುಂಬಯಿ - ಪ್ರಾದೇಶಿಕ ಸಮನ್ವಯ ಸಮಿತಿ ಡೊಂಬಿವಲಿ ವತಿಯಿಂದ ದೇವಾಡಿಗ ಫುಟ್ಬಾಲ್ ಲೀಗ್ 2017 ನ್ನು ಡೊಂಬಿವಿಲಿ ಪೂರ್ವದ ಪಲವ ಫುಟ್ಬಾಲ್ ಗ್ರೌಂಡ್ ನಲ್ಲಿ ಆಯೋಜಿಸಲಾಯಿತು. ಈ ಪಂದ್ಯಾವಳಿಯು ದೇವಾಡಿಗ ಸಂಘ ಮುಂಬಯಿ ಏರ್ಪಡಿಸಿದ ಪ್ರಥಮ ಫುಟ್ಬಾಲ್ ಪಂದ್ಯಾಟವಾಗಿತ್ತು.

ಪಂದ್ಯವನ್ನು ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗರು, ಮಾಜಿ ಅಧ್ಯಕ್ಷ ಶ್ರೀ ಹಿರಿಯಡ್ಕ ಮೋಹನ್ದಾಸ್, ಪ್ರಾದೇಶಿಕ ಸಮಿತಿ ಡೊಂಬಿವಿಲಿಯ ಕಾರ್ಯಾಧ್ಯಕ್ಷ ಶ್ರೀ ಹೇಮಾನಂದ್ ದೇವಾಡಿಗ, ಸಂಘದ ಗೌ. ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ಮಾಜಿ ಗೌ. ಪ್ರಧಾನ ಕಾರ್ಯದರ್ಶಿ ಪದ್ಮನಾಭ ದೇವಾಡಿಗ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ ದೇವಾಡಿಗ ಆಡಳಿತ ಸಮಿತಿಯ ನರೇಶ್ ದೇವಾಡಿಗ ಯೂತ್ ಮೆಂಟರ್ ಗಿರೀಶ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ದೇವಾಡಿಗ, ಡೊಂಬಿವಿಲಿ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ನಳಿನಿ ದೇವಾಡಿಗ, ಉಪ ಕಾರ್ಯಾಧ್ಯಕ್ಷರುಗಳಾದ ಶ್ರೀ ಸುರೇಶ್ ದೇವಾಡಿಗ ಮತ್ತು ಶ್ರೀ ಅಶೋಕ್ ದೇವಾಡಿಗ ಇವರ ಉಪಸ್ತಿತಿಯಲ್ಲಿ ಉದ್ಘಾಟಿಸಿ ಪಂದ್ಯಕ್ಕೆ ಚಾಲನೆಯಿತ್ಟರು. 
ಈ ಪಂದ್ಯದಲ್ಲಿ ಪ್ರಾದೇಶಿಕ ಸಮನ್ವಯ ಸಮಿತಿ ಡೊಂಬಿವಿಲಿಯ 2 ತಂಡಗಳು ಡೊಂಬಿವಿಲಿ ಮತ್ತು ಡೊಂಬಿವಿಲಿ oಟಿe, ಸಿಟಿ ವಲಯ, ಬೊರಿವಿಲಿ, ಠಾಣೆ, ಭಾಂಡುಪ್, ಜೋಗೇಶ್ವರಿ ಮತ್ತು ನವಿಮುಂಬೈ ತಂಡಗಳು ಪಾಲ್ಗೊಂಡು ಸಿಟಿ ವಲಯ ರನ್ನರ್ ಅಪ್ ಮತ್ತು ಡೊಂಬಿವಿಲಿ oಟಿe ತಂಡವು ವಿಜಯ ಶಾಲಿಯಾದರು. ಸಿಟಿ ವಲಯದ ಕ್ಯಾಪ್ಟನ್ ವಿಶಾಲ್ ದೇವಾಡಿಗ ತನ್ನ ತಂಡದೊಂದಿಗೆ ರನ್ನರ್ ತೋಫಿ ಪಡೆದು, ಡೊಂಬಿವಿಲಿ oಟಿe ಕ್ಯಾಪ್ಟನ್ ದಿನೇಶ್ ದೇವಾಡಿಗ ತನ್ನ ತಂಡದೊಂದಿಗೆ ವಿನ್ನರ್ ಟ್ರೋಫಿ ಗೆಲುವನ್ನು ಆಚರಿಸಿದರು. ಪಂದ್ಯಾವಳಿಯ ಟಾಪ್ ಸ್ಕೋರರ್ ಯಶ್ ದೇವಾಡಿಗ ಠಾಣೆ ವಲಯ, ಬೆಸ್ಟ್ ಡೆಫೆಂಡರ್ ದಿನೇಶ್ ದೇವಾಡಿಗ - ಡೊಂಬಿವಿಲಿ ವಲಯ, ಬೆಸ್ಟ್ ಗೋಲ್ ಕೀಪರ್ ಅಭಿಜಿತ್ ದೇವಾಡಿಗ ಡೊಂಬಿವಿಲಿ, ಬೆಸ್ಟ್ ಪ್ಲೇಯರ್ ವಿಶಾಲ್ ದೇವಾಡಿಗ, ಸಿಟಿ ವಲಯ ಇವರು ಟ್ರೋಫೀ ಗಳಿಸಿದರು. 
ಸಮಾರೋಪ ಸಮಾರಂಭದಲ್ಲಿ, ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗ, ನಿಕಟ ಪೂರ್ವ ಅಧ್ಯಕ್ಷ ಶ್ರೀ ವಾಸು ಎಸ್ ದೇವಾಡಿಗ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಕೃಷ್ಣ ಬಿ ದೇವಾಡಿಗ, ಶ್ರೀ ನರೇಶ್ ದೇವಾಡಿಗ, ಶ್ರೀ ಪದ್ಮನಾಭ ದೇವಾಡಿಗ, ಶ್ರೀ ಹೇಮಂತ್ ಶೆಟ್ಟಿ, ಅಧ್ಯಕ್ಷರು ತುಳುಕೂಟ ಡೊಂಬಿವಿಲಿ ಹಾಗೂ ಮಾಲಕರು ಹೋಟೆಲ್ ರಾಯಲ್ ಗಾರ್ಡನ್ ಇವರು ಉಪಸ್ತಿತರಿದ್ದರು. 
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ಸ್ ಅಥ್ಲೀಟ್ ಶ್ರೀಮತಿ ಜಯಂತಿ ಎಂ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ಅಲ್ಲದೆ ಹೇಮಂತ್ ಶೆಟ್ಟಿ ಹಾಗೂ ಜಗದಂಬಾ ಮಂದಿರದ ಪೂಜಾ ಸಮಿತಿಯ ಅಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ ಶೃಂಗೇರಿ ಇವರನ್ನೂ ಸನ್ಮಾನಿಸಲಾಯಿತು.
ಡೊಂಬಿವಿಲಿ ವಲಯದ ಯುವ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಪ್ರಸಾದ್ ದೇವಾಡಿಗ, ಕಾರ್ಯದರ್ಶಿ ಕು. ಜ್ಯೋತ್ಸ್ನಾ ದೇವಾಡಿಗ ಸದಸ್ಯ ಶ್ರೀ ವಿಜ್ನೇಶ್ ದೇವಾಡಿಗ ಮತ್ತು ಯುವ ಸಮಿತಿಯ ಸದಸ್ಯರ ಅತೀವ ಸಹಕಾರದೊಂದಿಗೆ ದೇವಾಡಿಗ ಫುಟ್ಬಾಲ್ ಲೀಗ್ 2017 ಅತೀ ಯಶಸ್ವಿಯಾಗಿ ಜರಗಲು ಶ್ರಮಿಸಿದರು.  ಶ್ರೀ ಸಚಿನ್ ದೇವಾಡಿಗ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಹೇಮನಂದ್ ದೇವಾಡಿಗ ಪಂದ್ಯಾವಳಿಯ ಯಶಸ್ಸಿಗೆ ಧನ ಸಹಯಾವಿತ್ತು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದವಿತ್ತರು. ವಿಶೇಷವಾಗಿ ಶ್ರೀ ಹೇಮಂತ್ ಶೆಟ್ಟಿ, ಶ್ರೀ ನಿತ್ಯಾನಂದ ಭಂಡಾರಿ, ಶ್ರೀ ಸುರೇಶ್ಶೆಟ್ಟಿ ಶೃಂಗೇರಿ ಹಾಗೂ ಡೊಂಬಿವಿಲಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಇವರೆಲ್ಲರಿಗೂ ಧನ್ಯವಾದ ಕೋರಿದರು.


Share