ದೇವಾಡಿಗ ಸಂಘ ಮುಂಬಯಿ - ಪ್ರಾದೇಶಿಕ ಸಮನ್ವಯ ಸಮಿತಿ ಠಾಣೆ ವತಿಯಿಂದ ‘ಆಟಿ ಡ್ ಒಂಜಿ ದಿನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ’

 

ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಠಾಣೆ ವತಿಯಿಂದ "ಆಟಿ ಡ್ ಒಂಜಿ ದಿನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ "

ರವಿವಾರ ಆಗಸ್ಟ್ 13 ರಂದು ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಠಾಣೆ ಇವರ ಠಾಣೆ ಬಂಟ್ಸ್ ಅಸೋಸಿಯೇಶನ್ ಇಲ್ಲಿ "ಆಟಿ ಡ್ ಒಂಜಿ" ದಿನ ಹಾಗೂ SSಅ ಮತ್ತು ಊSಅ, 2016-2017 ರ ಸಾಲಿನಲ್ಲಿ ಶೇಕಡ 80%+ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನದ ಕಾರ್ಯಕ್ರಮವು ಕಾರ್ಯಾಧ್ಯಕ್ಷ ಶ್ರೀ ಅಶೋಕ್ ದೇವಾಡಿಗ ಇವರ ಅದ್ಕಕ್ಷತೆಯಲಿ ನಡೆಯಿತು. ಉಪಾಧ್ಯಕ್ಷ ಶ್ರೀ ಡಾ.ರಾಜು ದೇವಾಡಿಗ,  ಶ್ರೀ ಪ್ರವೀಣ ಸಾಲಿಯಾನ್, ಕಾರ್ಯದರ್ಶಿ  ಶ್ರೀ ಮಂಜುನಾಥ್ ದೇವಾಡಿಗ, ಖಜಾಂಚಿ  ಶ್ರೀ ಯಾದವ ದೇವಾಡಿಗ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಶ್ರೀ ಗೋಪಾಲ ಶೇರಿಗಾರ್ ಇವರ ಪ್ರಾರ್ಥನೆಯೊoದಿಗೆ ಪ್ರಾರಂಭಗೊಂಡಿತು. ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗರು ದೀಪ ಪ್ರಜ್ಞಲನ ಮಾಡಿದರು. ಇವರೊಂದಿಗೆ ಗೌ. ಜೊತೆ ಕಾರ್ಯದರ್ಶಿಗಳಾದ ಶ್ರೀ ಗಣೇಶ ಶೇರಿಗಾರ ಮತ್ತು ಶ್ರೀಮತಿ ಮಾಲತಿ ಮೊಯ್ಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಮೊಯ್ಲಿ, ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ರಂಜಿನಿ ಮೊಯ್ಲಿ, ಶ್ರೀಮತಿ ಸುರೇಖ ದೇವಾಡಿಗ ಹಾಗೂ ಠಾಣೆ ವಲಯದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಮಮತಾ ದೇವಾಡಿಗ, ಉಪ- ಕಾರ್ಯಾಧ್ಯಕ್ಷೆ ಶ್ರೀಮತಿ ಕವಿತಾ ದೇವಾಡಿಗ, ಕಾರ್ಯದರ್ಶಿ ಶ್ರೀಮತಿ ಉಷಾ ದೇವಾಡಿಗ, ಶ್ರೀಮತಿ ಜಯಶ್ರೀ ಅಶೋಕ ದೇವಾಡಿಗ ಇವರು  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಮಮತಾ ದೇವಾಡಿಗರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು, ಉಪ ಸಮಿತಿಯ ಸದಸ್ಯರು, ಎಲ್ಲಾ ಸಮನ್ವಯ ಸಮಿತಿ ಪಧಾಧಿಕಾರಿಗಳು, ಯುವ ವಿಭಾಗದವರು  ಹಾಗೂ ಮಹಿಳಾ ಸದಸ್ಯರನ್ನು ಸ್ವಾಗತಿಸಿದರು. 
ಶ್ರೀ ಆನಂದ ದೇವಾಡಿಗರು ಠಾಣೆ ವಲಯದಲ್ಲಿಯ ಸನ್ಮಾನ ಸ್ವೀಕರಿಸುವ ಪ್ರತಿಭಾವಂತ ವಿದ್ಯಾರ್ಥಿಳಾದ ಕುಮಾರಿ ಮೈತ್ರಿ ದೇವಾಡಿಗ , ಕುಮಾರಿ ಕಾವ್ಯಶ್ರೀ ದೇವಾಡಿಗ, ಮಾಸ್ಟರ್ ಓಜಸ್ ದೇವಾಡಿಗ, ಕುಮಾರಿ ರಿದ್ದಿ ದೇವಾಡಿಗ, ಕುಮಾರಿ ಯಶಿಕಾ ದೇವಾಡಿಗ, ಮಾಸ್ಟರ್ ಜಿತು ದೇವಾಡಿಗ ಇವರುಗಳಿಗೆಲ್ಲಾ ನಗದು ಬಹುಮಾನ ಪ್ರಾಯೋಜಕರಾದ ಶ್ರೀ ಜಗನ್ನಾಥ ದೇವಾಡಿಗ, ಶ್ರೀ ಸುರೇಶ್ ರಾವ್, ಶ್ರೀ ಜಯ ದೇವಾಡಿಗ, ಶ್ರೀ ಅಶೋಕ್ ದೇವಾಡಿಗ ಶ್ರೀ ಎ. ಆರ್. ಆರೆಭೈಲ್ ಹಾಗೂ ಶ್ರೀ ಗೋಪಾಲ ಶೇರಿಗಾರ್ ಇವರುಗಳಿಂದ ಸನ್ಮಾನಿಸಿದರು

ಠಾಣೆ ವಲಯದಲ್ಲಿಯ ಯುವ ವಿಭಾಗದ ಶ್ರದ್ದಾ ಆನಂದ ದೇವಾಡಿಗ, ಡಾ. ರಶ್ಮಿ ರಾಜು ದೇವಾಡಿಗ, ಶ್ರಿಶಾಂತ ಶ್ರೀಧರ ದೇವಾಡಿಗ, ನಿತೇಶ್ ನಾಗೇಶ ದೇವಾಡಿಗ, ವಿಶ್ವನಾಥ್ ದೇವಾಡಿಗ, ಇವರೆಲ್ಲಾ ವಿದ್ಯಾರ್ಥಿಗಳಿಗೆ "ಶಿಕ್ಷಣ ವೃತ್ತಿ ಮಾರ್ಗದರ್ಶನ"ದ ಬಗ್ಗ ಕೆಲವು ಮಾಹಿತಿಯನ್ನು ನೀಡಿದರು. 
ದೇವಾಡಿಗ ಸಂಘದ ;ಮುಂಬೈ 2016-2019 ರ ನೂತನ ಅದ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗ ಹಾಗು ಶ್ರೀಮತಿ ಜಯಂತಿ ಮೊಯ್ಲಿ ಇವರನ್ನು ಹೂಗುಚ್ಚ ಹಾಗೂ ಶಾಲು ಹೊದಿಸಿ ಸತ್ಕರಿಸಲಾಯಿತು. ಈ ಸಂಧರ್ಭದಲ್ಲಿ ಶ್ರೀ ರವಿ ಎಸ್ ದೇವಾಡಿಗರು ಅಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ನೆರೆದಿದ್ದನ್ನು ಕಂಡು ಸಂತೋಷ ವ್ಯಕ್ತಪಡಿಸಿದರು ಹಾಗೂ ಜಾತಿ ಭಾಂಧವರ ನೂತನ ಸದಸ್ಯತನ ಮತ್ತು ವೈದ್ಯಕೀಯ ನಿಧಿ ಸಂಗ್ರಹ಼ದ ಬಗ್ಗೆ ಸಹಕಾರ ನೀಡುವಂತೆ ಸಂಘದ ಸದಸ್ಯರಲ್ಲಿ ವಿನಂತಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು .
ಈ ಸಂದರ್ಭದಲ್ಲಿ 12ವರ್ಷಗಳಿಂದ ಪೋಲೀಸ್ ಖಾತೆಯಲ್ಲಿ (Sಣಚಿಣisಣiಛಿಚಿಟ bಡಿಚಿಟಿಛಿh, ಅಡಿime bಡಿಚಿಟಿಛಿh ಖಿhಚಿಟಿe) ಸರ್ವಿಸ್ ಮಾಡುತ್ತಿರುವ ಶ್ರೀಮತಿ ಸುಮಂಗಳ ಶ್ರೀನಿವಾಸ ಶೇರಿಗಾರ - ವುಮೆನ್ ಪೋಲಿಸ್ ನಾಯಕ್ ಇವರನ್ನು ಸತ್ಕರಿಸಲಾಯಿತು. ಇವರು ಕಮಿಶನರ್  ಆಫ್  ಪೋಲಿಸ್, ಠಾಣೆ ಇವರಿಂದ hಣಣಠಿs://im.ಡಿeಜiಜಿಜಿ.ಛಿom/ಚಿರಿಚಿxಠಿಡಿism/ಠಿix/gಡಿಚಿಥಿbಟoಛಿಞ.giಜಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ.

ಅತಿಥಿಗಣ್ಯರ ಸಾಲಿನಲ್ಲಿದ್ದ ನವಿಮುoಬಯಿ ಪ್ರಾದೇಶಿಕ ಸಮನ್ವಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀ ಪಿವಿಎಸ್ ಮೊಯ್ಲಿ, ಭಾoಡುಪ ಹಾಗೂ ಸಿಟಿ ವವಲಯದ ಕಾರ್ಯಾಧ್ಯಕ್ಷರುಗಳಾದ ಶ್ರೀ ವಿಶ್ವನಾಥ್ ದೇವಾಡಿಗ, ಶ್ರೀ ಹೇಮನಾಥ ದೇವಾಡಿಗ, ಹಾಗೂ ಶ್ರೀಮತಿ ಮಾಲತಿ ಮೊಯ್ಲಿ, ಶ್ರೀಮತಿ ಜಯಂತಿ ಮೊಯ್ಲಿ, ಶ್ರೀಮತಿ ರಂಜಿನಿ ಮೊಯ್ಲಿ, ಶ್ರೀಮತಿ ಸುರೇಖ ದೇವಾಡಿಗ, ಶ್ರೀ ನಿತೇಶ್ ದೇವಾಡಿಗ ಇವರುಗಳು ಸಂದರ್ಭೊಚಿತವಾಗಿ ಮಾತನಾಡಿದರು. ಯುವಕರಿಗೆ ವಿವಿಧ ರೀತಿಯಲ್ಲಿ ಮಾರ್ಗದರ್ಶಕವಾಗುವ ಕೆಲವು ಕಾರ್ಯಕ್ರಮವನ್ನು ಇತರ ವಲಯಗಳು ಹಮ್ಮಿ ಕೊಂಡಿರುವ ಬಗ್ಗೆ ಯುವ ವಿಭಾಗದ ಮಾರ್ಗದರ್ಶಕ ಶ್ರೀ ನರೇಶ ದೇವಾಡಿಗರು ಮಾಹಿತಿ ನೀಡಿದರು. 
ಊರಿನಲ್ಲಿ ಆಟಿ ತಿoಗಳಲ್ಲಿ ಜನರು ಮಾಡುವ  ಕೆಲಸ- ಕಾರ್ಯ, ಆಟಿ ಕಳಿoಜ ದ ಕೆಲವು ಮಾಹಿತಿಯನ್ನು ನೀಡಿ ಹಾಗು ತುಳುನಾಡಿನ ಒಗಟುಗಳ ಪ್ರಶ್ನಾವಳಿಯನ್ನು ಮಹಿಳಾ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಮೀಳ ಶೇರಿಗಾರ್ ಎರ್ಪಡಿಸಿದರೆ ಅದರ ಬಹುಮಾನಗಳ ಪ್ರಾಯೋಜಕತ್ವ ಶ್ರೀಮತಿ ಮಮತಾ ದೇವಾಡಿಗರು ವಹಿಸಿದರು. ಶ್ರೀಮತಿ ಸುಜಾತ ಶೇರಿಗಾರ್ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಿದರೆ, ಮಾಸ್ಟರ್ ಶ್ರೀಧಿತ ದೇವಾಡಿಗ, ಕುಮಾರಿ ಪ್ರಾಚಿ ದೇವಾಡಿಗ, ಕುಮಾರಿ ಗೌರವಿ ಶೇರಿಗಾರ್,  ಶ್ರೀಮತಿ ಗೀತಾ ದೇವಾಡಿಗ, ಶ್ರೀಮತಿ ನಯನ ದೇವಾಡಿಗ, ಶ್ರೀಮತಿ ಕವಿತಾ ದೇವಾಡಿಗ, ಶ್ರೀಮತಿ ರಂಜಿನಿ ಮೊಯ್ಲಿ ಇವರು ತುಳು ಜಾನಪದ ಮತ್ತು ಭಾವ ಗೀತೆಗಳನ್ನು ಹಾಡಿ ಸಭೆಯ ಮನ ರಂಜಿಸಿದರು.

ಮಹಿಳಾ ಸದಸ್ಯರುಗಳು ಆಟಿ ತಿಂಗಳಲ್ಲಿ ಮಾಡುವಂಥ ವಿವಿಧ ರುಚಿಕರ ವ್ಯಂಜನಗಳ ಪಾಕ ವಿಶೇಷತೆಯನ್ನು ಮೆರೆದಿದ್ದು ಎಲ್ಲರಪ್ರಶಂಸೆಗೆ ಪಾತ್ರರಾದರು. ಹಾಗು ಮಹಿಳಾ ಸದಸ್ಯರಿಗೆ ಅವರ ರುಚಿಕರವಾದ ಆಹಾರಕ್ಕಾಗಿ ಮೆಚ್ಚುಗೆಯನ್ನು ನೀಡಿ ಉಡುಗೊರೆ ನೀಡಲಾಯಿತು

ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಪ್ರಮಿಳಾ ಶೇರಿಗಾರ್ ನಿರೂಪಿಸಿದರೆ, ಜೊತೆ ಕಾರ್ಯದರ್ಶಿ ಶ್ರೀಮತಿ ಸೀಮಾ ದೇವಾಡಿಗರು ಧನ್ಯವಾದ ಅರ್ಪಿಸಿದರು. ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಜರುಗಿತು.
 


Share