ಪ್ರಕೃತಿಯ ಮಡಿಲಲ್ಲಿ ಪ್ರತಿಷ್ಠಾಪನೆಗಾಗಿ ಸಜ್ಜಾಗಿರುತ್ತಿರುವ ಬಾರಕೂರು ಶ್ರೀ ಏಕನಾಥೇಶ್ವರೀ ದೇವಾಸ್ಥಾನ (History & Pics)

 

ದೇವಾಡಿಗ ಸಮಾಜದ ಶ್ರೀ ಏಕನಾಥೇಶ್ವರೀ ದೇವಸ್ಥಾನ, ಬಾರ್ಕೂರು

(Under Construction 2017)

ದೇವಾಡಿಗ ಸಮಾಜದ ಶ್ರೀ ಏಕನಾಥೇಶ್ವರೀ ದೇವಸ್ಥಾನ, ಬಾರ್ಕೂರು ಮಯೂರ ವರ್ಮನ ಕಾಲದಲ್ಲಿ : ಪ್ರಾಚೀನ ಕರ್ನಾಟಕದ ಇತಿಹಾಸದ ಪ್ರಕಾರ ಕದಂಬ ವಂಶದ ಸ್ಥಾಪಕ ಮಯೂರ ವರ್ಮ ತನ್ನ ಸಾಮ್ರಾಜ್ಯದಲ್ಲಿ ಸಾವಿರಾರು ದೇವಸ್ಥಾನಗಳನ್ನು ಕಟ್ಟಿಸಿ ದೇವರ ಪೂಜೆಗೆ ಬ್ರಾಹ್ಮಣರನ್ನು ನೇಮಕ ಮಾಡಿದ. ಅದೇ ರೀತಿ ದೇಗುಲಗಳನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳು ದೇವಾಡಿಗರನ್ನು ನಿಯೋಜಿಸಿದ. ನಾಗಸ್ವರ ಸೇರಿದಂತೆ ಸಂಗೀತದ ಮೂಲಕ ದೇವರನ್ನು ಆರಾಧಿಸುವ ಹೊಣೆಯನ್ನು ಈ ಸಮುದಾಯದವರಿಗೆ ಮಯೂರ ವರ್ಮನೇ ವಹಿಸಿದ ಎಂದು ದಾಖಲೆಗಳು ಹೇಳುತ್ತವೆ. ಕ್ರಿ.ಶ 450ರಲ್ಲಿ ರಚಿತವಾದ ಅಮರ ಕೋಶದಲ್ಲೂ ಈ ಸಮಾಜದ ಬಗ್ಗೆ ಉಲ್ಲೇಖ ಇದೆ. ಆ ಪದ ಕ್ರಮೇಣ ಶೇರಿಗಾರ ಆಗಿರಬಹುದು, ಸ್ವರರಾಗ ಎಂದರೆ ವಾದ್ಯ ಪರಿಕರಗಳ ಮೂಲಕ ಸ್ವರ ಹೊರಡಿಸಿ ದೇವರ ಸೇವೆ ಮಾಡುವವ ಎಂದರ್ಥ. ಅದೇ ರೀತಿ ದೇವರ ಅಡಿಯಾಳಾಗಿ ಹಗಲು-ರಾತ್ರಿ ದುಡಿಯುತ್ತಿದ್ದವರು ದೇವಾಡಿಗ ಆಗಿರಬಹುದು, ಅಂತೆಯೇ ದೇಗುಲಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದವರು ಮೈಲಿಗಳಾಗಿರಬಹುದು ಎಂಬುದು ಅವರ ವಿವರಣೆ.

ಇನ್ನು ತುಳು ಪಾಡ್ದನದಲ್ಲಿ ಎಣ್ಣೆಗಾಣದ ಕೆಲಸ ಮಾಡುವ ಇವರನ್ನು ಗಾಣಿಗರು ಎಂದು ಕರೆಯಲಾಗಿದೆ. ಹಾಗೆಯೇ ವಿಕ್ರಮಾದಿತ್ಯನ ಚರಿತ್ರೆಯಲ್ಲಿ ದೇವಾಡಿಗರ ಬಗ್ಗೆ ಉಲ್ಲೇಖವಿದೆ. ಆತ್ಮ ವಿಶ್ವಾಸ ಮತ್ತು ತಾಳ್ಮೆ:ದೇವಾಡಿಗರು ದೃಢಕಾಯದವರು, ವಾಶಾಲವಾದ ಹಣೆ, ಅಗಲವಾದ ಎದೆ, ಶಕ್ತಿಯುತ ತೋಳು ಮತ್ತು ಕಾಲುಗಳನ್ನು ಹೊಂದಿದವರು. ಈ ಸಮುದಾಯದಲ್ಲಿ ಮಹಿಳೆಯರೂ ಪುರುಷರಂತೆ ದುಡುಯುವವರು ಎಂಬುದು ಆಂಗ್ಲ ಇತೆಹಾಸಕಾರರ ವಿಶ್ಲೇಷಣೆ.

ತಿರುಪತಿ ತಿಮ್ಮಪ್ಪನ ಭಕ್ತರಾದ ಇವರು ಶೃಂಗೇರಿ ಶಾರದಾಂಬೆಯನ್ನು ಪೂಜಿಸುವವರು, ಭೂತರಾದನೆಯಲ್ಲಿ ನಂಬಿಕೆ ಉಳ್ಳವರು. ಧಾರ್ಮಿಕ ಮನೋಭಾವದ ಜೊತೆಗೆ ಆತ್ಮವಿಶ್ವಾಸ, ತಾಳ್ಮೆ ಇವರ ಎನ್ನೊಂದು ಗುಣ.

ಸಮುದಾಯದವರ ಮೂಲ ದೇವರು ಯಾವುದು? ಎಂಬ ಪ್ರಶ್ನೆ ಇತ್ತೀಚೆಗೆ ಕೇಳಿಬಂತು, ಹಿಗಾಗಿ ಅಷ್ಟಮಂಗಳ ಪ್ರಶ್ನೆ ಹಾಕಿ ಕೇಳಿದಾಗ ಏಕನಾಥೇಶ್ವರೀ ಹೆಸರು ಬಂದಿದೆ. ಬಾರ್ಕೂರು, ಅಮರಕೋಡಿಯ ಈಶ್ವರ ಮತ್ತು ಕಲ್ಯಾಣಪುರದ ಕೆಂಚಮ್ಮ ದೇವಾಲಯಗಳಲ್ಲಿ ದೇವಾಡಿಗರೇ ಅರ್ಚಕರಾಗಿದ್ದಾರೆ ಎಂಬುದು ಮತೊಂದು ವಿಶೇಷ.

ಸಮಾಜದ ಅಸ್ತಿತ್ವ :ಸರ್ಕಾರದ ಜಾತಿ ಪಟ್ಟಿ ಪ್ರಕಾರ ಹಿಂದುಳಿದ ವರ್ಗದಲ್ಲಿ 2ಎ ಗುಂಪಿಗೆ ಸೇರಿರುವ ದೇವಾಡಿಗರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅಷ್ಟೇನೂ ಪ್ರಭಾವಶಾಲಿಗಳಾಗಿಲ್ಲ. ಶ್ರೀ ವೀರಪ್ಪ ಮೈಲಿಯವರು ರಾಜ್ಯದ ಮುಖ್ಯಮಂತ್ರಿಗಳಾಗಿ ಕೇಂದ್ರದಲ್ಲಿ ಸಚಿವರಾಗಿದ್ದರು. ಅವರನ್ನು ಹೊರತುಪಡಿಸಿದರೆ ಸಮುದಾಯದಲ್ಲಿ ರಾಜಕೀಯವಾಗಿ ಮೆಲೆ ಬಂದವರು ಯಾರೂ ಇಲ್ಲ. ಎಲ್ಲರೂ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದಲ್ಲೇ ಇದ್ದಾರೆ. ಅವಕಾಶಗಳ ಕೊರತೆಯು ಇದಕ್ಕೆ ಕಾರಣ ಇರಬಹುದು. ಆದರೆ, ಕೆಲವರು ಉದ್ಯಮಿಗಳಾಗಿ ಹೆಸರು ಮಾಡಿದ್ದಾರೆ. ದೇಶ, ವಿದೇಶಗಳಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿದ್ದಾರೆ. ಇನ್ನು ಉನ್ನತ ಹುದೆಗಳಲ್ಲಿ ಇರುವವರ ಸಂಖ್ಯೆಯೂ ಬಹಳ ಕಡಿಮೆ. ತುಳು/ಕನ್ನಡ, ದೇವಾಡಿಗರ ಮಾತೃ ಭಾಷೆ.ಪ್ರಪಂಚದಲ್ಲಿ, ಭಾರತದಲ್ಲಿ, ಕರ್ನಾಟಕದಲ್ಲಿ ಅತೀ ಕಡಿಮೆ ಜನಸಂಖ್ಯೆ ಇರುವ ಜನಾಂಗಗಳಲ್ಲಿ ಅದು ದೆವಾಡಿಗ ಸಮುದಾಯವು ಸೇರಿದೆ. ಇವರಲ್ಲಿ ಶಿಕ್ಷಣ ಪಡೆದವರು ಕಡಿಮೆ ಹಾಗಾಗಿ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ. ಮೊದಲು ಕರಾವಳಿಯಲ್ಲಿ ಇದ್ದ ಈ ಜನಾಣಗ ಜೀವನೋಪಾಯಕ್ಕಾಗಿ ದೇಶ, ವಿದೇಶಗಳಿಗೆ ವಲಸೆ ಹೋಗಿರುತ್ತಾರೆ.

ಭಕ್ತರಿಗೆ ದೇವರ ದರ್ಶನ ಆಗಬೇಕು ಎಂದರೆ ಈ ಸಮುದಾಯದವರಿಂದ ಸ್ವರ ಸೇವೆ ಜರುಗಲೇಬೇಕು. ಜೊತೆಗೆ ದೇವರ ಸಂಸಾದವರು ಎಂಬ ಹೆಗ್ಗಳಿಕೆಯೂ ಈ ಸಮಾಜದವರಿಗಿದೆ. ದೇವಾಲಯದಲ್ಲಿ ಇವರ ಗರ್ಭಗುಡಿವರೆಗೆ ಪ್ರವೇಶವಿದೆ.ಅರ್ಚಕರನ್ನು  ಹೊರತುಪಡಿಸಿದರೆ ದೇವಸ್ಥಾನಗಳಲ್ಲಿ ನಂತರದ ಸ್ಥಾನ ಇವರ್ದೇ. ವಾದ್ಯ ಸೇವೆ ಇರಲೇಬೇಕು. ದೇವರು ಗರ್ಭಗುಡಿಯಿಂದ ಹೊರಗೆ ಬರಬೇಕು, ಮೆರವಣಿಗೆ ಹೊರಡಬೇಕು ಎಂದರೆ ದೇವಾಡಿಗರ ವಾದ್ಯ ಸೇವೆ ಇರಲೇಬೇಕು. ಮೆರವಣಿಗೆ ಸಂದರ್ಭ ದೀವಟಿಗೆ ಹಿಡಿಯುವ, ನಗಾರಿ, ಕೊಂಬು ಕಹಳೆ ಮೊಳಗಿಸುವ, ಚಂಡೆ ಮತ್ತು ಮದ್ದಳೆ ಬಾರಿಸುವುದು ದೇವಾಡಿಗರ ಕುಲ ಕಸುಬು. ಮೆರವಣಿಗೆ ವೇಳೆ ದೇವರ ಮುಂದೆ ದೇವಾಡಿಗರು, ಹಿಂದೆ ಬ್ರಾಹ್ಮಣರು ನಡೆದು ಬರುವ ಸಂಪ್ರದಾಯವಿದೆ. ಈ ಸಮಾಜದವರಿಗೆ ಮ್ಯೊಲಿ, ಶೇರಿಗಾರ ಎಂಬ ಹೆಸರೂ ಇದೆ.

ಒಟ್ಟಿನಲ್ಲಿ ದೇವಸ್ಥಾನದ ಕೆಲಸ ಮತ್ತು ಕಾರ್ಯಗಳಿಗೆ ಸೀಮಿತ ಆದ ಜನ ಇವರು. ಕೃಷಿ ಇವರ ಮತ್ತೊಂದು ಕಸುಬು. ಚರಿತ್ರೆಯ ಪ್ರಕಾರ ಎಂಬ ರಾಜನು ಆಳುತ್ತಿದ್ದ ಕಾಲದಲ್ಲಿ ಶ್ರೀ ಏಕನಾಥೇಶ್ವರೀ ದೇವಿಯನ್ನು ದೇವಾಡಿಗರು ಆರಾಧಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇದು ಬರಿ ನಂಬಿಕೆಯಲ್ಲ ಕೆಲವು ಸರಕಾರಿ ದಾಖಲೆಗಳು ಕೂಡಾ ಇದನ್ನು ದೃಢಪಡಿಸಿವೆ. ಅಲ್ಲದೇ ದೇವಸ್ಥಾನ ಉಂಬಳಿಗಾಗಿ 11.56 ಎಕ್ರೆ ಭೂಮಿಯಿದ್ದು ಕಾರಣಾಂತರಗಳಿಂದ ಭೂಮಿಯನ್ನು ನಮ್ಮವರು ಪರಭಾರೆ ಮಾಡಿದ್ದು ತಿಳಿದು ಬಂದಿದೆ. ಇವತ್ತಿಗೂ ಇದನ್ನು ದೃಡೀಕರಿಸುವ ಮಾತ್ರವಲ್ಲದೇ ತಮ್ಮ ಹೆಸರಿನ ಪ್ರಾರಂಭದಲ್ಲಿ ಏಕನಾಥೀಯನ್ನು ಸೇರಿಸಿಕೊಂಡ ವ್ಯಕ್ತಿಗಳು ಇದ್ದರು ಎಂಬುದು ದೃಢಪಟ್ಟಿದೆ.

ಅಲ್ಲದೇ ಸರ್ಕಾರದಿಂದ ದೇವಸ್ಥಾನಕ್ಕೆ ತಸ್ತೀಕು ಹಣ ಬರುತ್ತಿದ್ದ ಬಗ್ಗೆಯೂ ಉಲ್ಲೇಖವಿದೆ. ನಂತರದ ದಿನಗಳಲ್ಲಿ ದೇವಸ್ಥಾನದ ಭೂಮಿಯೆಲ್ಲವೂ ಪರಭಾರೆಯಾಗಿ ದೇನಸ್ಥಾನಕ್ಕೆ ಸರ್ಕಾರದಿಂದ ಬರುತ್ತಿದ್ದ ತಸ್ತೀಕು ಹಣವೂ ಬಾರದಿದ್ದಾಗ ದೇವಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆ ಪುನಸ್ಕಾರಗಳು ನಿಂತು ಹೋಗಿದೆ. ಬಡತನ, ಅನಕ್ಷರತೆ, ಮುಗ್ದತೆಯಿಂದಾಗಿ ಎಲ್ಲವೂ ಕೈತಪ್ಪಿ ಹೋಗಿರುವುದು ತಿಳಿದು ಬರುತ್ತದೆ.

ಯಾರಿಗೂ ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ಇವುಗಳು ದೃಢಪಟ್ಟಿದೆ. ಹಾಗಾಗಿ ಭಕ್ತರ ಒಂದು ಗುಂಪು ಸಂಪೂರ್ಣವಾಗಿ “ಏಕನಾಥೇಶ್ವರೀ ದೇವಿ”ಯ   ದೇವಸ್ಥಾನವನ್ನು ನಿರ್ಮಿಸಬೇಕೆನ್ನುವ ತೀರ್ಮಾನವನ್ನು ತೆಗೆದುಕೊಂಡದ್ದಲ್ಲದೇ ಅದಕ್ಕಾಗಿ ಸೂಕ್ತವಾದ ಸ್ಥಳವನ್ನು ಖರೀದಿಸಿ ಕಾರ್ಯಕ್ರಮವನ್ನು ದೇವಸ್ಥಾನ ಕಟ್ಟುವ ಸ್ಥಳದಲ್ಲಿ ನಡೆಸಿದೆ. ಆ ಒಂದು ಕಾರ್ಯಕ್ರಮಕ್ಕೆ ಎಲ್ಲಾ ಊರುಗಳಲ್ಲಿರುವ ನಮ್ಮ ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ದೇವಸ್ಥಾನವು ಆದಷ್ಟು ಶೀಘ್ರವೇ ಆಗಬೇಕೆನ್ನುವ ದೃಷ್ಟಿಯಿಂದ ಮುಷ್ಟಿಕಣಿಕೆಯನ್ನು ಕೂಡಾ ಅರ್ಪಿಸುರುತ್ತಾರೆ. ಆ ನಂತರ ಪರಿಹಾರ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆಗಳನ್ನು ನಿರಂತರವಾಗಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿರುತ್ತಾರೆ. ಶ್ರೀ ದೇವಸ್ಥಾನದ ಶಿಲಾನ್ಯಾಸವು 21.01.2016 ರಂದು ಪಲಿಮಾರು ಮಠ ಉಡುಪಿಯ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ನೆರವೇರಿಸಲಾಗಿತ್ತು.

ಪಬ್ಲಿಕ್ ಟ್ರಸ್ಟ್ ಕಾನೂನು ಪ್ರಕಾರ ಭಕ್ತಾದಿಗಳ ಗುಂಪು ಟ್ರಸ್ಟ ಒಂದನ್ನು ರಚಿಸಿದ್ದು ಟ್ರಸ್ಟ್ ಮುಖಾಂತರವೇ ದೇವಸ್ಥಾನ ನಿರ್ಮಾಣ ಅಮಿತಿಯನ್ನು ರಚನೆ ಮಾಡಿದ್ದು ಈ ಸಮಿತಿಯನ್ನು ಧನಸಹಾಯ ಸಂಗ್ರಹೆಸುವುದಕ್ಕಾಗಿ ಮತ್ತು ದೇವಸ್ಥಾನ ನಿರ್ಮಾಣದ ನರ್ವಹಣೆಯನ್ನು ಮಾಡುವುದಕ್ಕಾಗಿ ನೇಮಿಸಲಾಗಿದೆ. ದೇವಸ್ಥಾನ ನಿರ್ಮಿಸಲು ಒಟ್ಟು ವೆಚ್ಚ ಸುಮಾರು 6 ಕೋಟಿ ಎಂದು ಅಂದಾಜಿಸಲಾಗಿದೆ.

ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ ( ರೀ.), ಬಾರ್ಕೂರು ಇದರ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾಗಿ ಶ್ರೀ ಅಣ್ಣಯ್ಯ ಶೇರಿಗಾರ್ ಪುಣೆ, ಗೌರವ ಕಾರ್ಯದರ್ಶಿಯಾಗಿ ಶ್ರೀ ನರಸಿಂಹ ಬಿ. ದೇವಾಡಿಗ ಉಡುಪಿ, ಗೌರವ ಕೋಶಾಧಿಕಾರಿಯಾಗಿ ಶ್ರೀ ಬಿ. ಜರ್ನಾಧನ ದೇವಾಡಿಗ ಬಾರ್ಕೂರು, ದೇವಸ್ಥಾನ ನಿರ್ಮಾಣ ಸಮಿತಿ ಗೌರವ ಅಧ್ಯಕ್ಷರಾಗಿ ಶ್ರೀ ಧರ್ಮಪಾಲ್ ಯು. ದೇವಾಡಿಗ ಮುಂಬೈ, ಮುಖ್ಯ ಸಂಚಾಲಕರಾಗಿ ಶ್ರೀ ಹಿರಿಯಡ್ಕ ಮೋಹನ್‍ದಾಸ್, ವಿಶ್ವಸ್ಥರಾಗಿ ಶ್ರೀ ಸುರೇಶ ಡಿ. ಪಡುಕೋಣೆ ಮುಂಬೈ, ಶ್ರೀ ಹರೀಶ್ ಶೇರಿಗಾರ್ ದುಬೈ, ಶ್ರೀ ನಾರಾಯಣ ಎಂ. ದೇವಾಡಿಗ ದುಬೈ, ಶ್ರೀ ದಿನೇಶ್ ಸಿ. ದೇವಾಡಿಗ ದುಬೈ, ಶ್ರೀ ಜನಾರ್ಧನ ಎಸ್. ದೇವಾಡಿಗ ಮುಂಬೈ, ಶ್ರೀ ಎನ್. ರಘುರಾಮ ದೇವಾಡಿಗ ಶಿವಮೊಗ್ಗ ಇವರ ನೇತೃತ್ವದಲ್ಲಿ ಸಮಸ್ತ ದೇವಾಡಿಗ ಸಂಘಟನೆಗಳ ಸದಸ್ಯರು ಹಾಗೂ ದೇವಾಡಿಗ ಬಂಧುಗಳೆಲ್ಲರೂ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕವು ಇದೇ ಫೆಬ್ರವರಿ ತಿಂಗಳ 19 ರಿಂದ 22ರ ವರೆಗೆ ಅತೀ ವೈಭವದಿಂದ ಜರಗಲಿದೆ. 

BELOW ARE Photographs Taken on Monday 12th Feb 2017, A week before BrahmakumbabhishEk

 

 

 

 

 

 

 

 

 

 

 


Share