ದೇವಾಡಿಗರ ಕುಲದೇವಿ ಎಂದು ಬಿಂಬಿತವಾಗಿರುವ ಏಕನಾಥೇಶ್ವರಿ ದೇವಳ ಲೋಕಾರ್ಪಣೆಗೆ ಸಜ್ಜು

ಬಾರಕೂರು: ಸಮಸ್ತ ದೇವಾಡಿಗ ಕುಲದೇವಿ ಏಕನಾಥೇಶ್ವರಿ ದೇಗುಲ ಪುನರ್ ನಿರ್ಮಾಣ ಕಾರ್ಯ ಅಂತಿಮ ಘಟ್ಟ ತಲುಪಿದ್ದು ಲೋಕಾರ್ಪಣೆಗೆ ಸಜ್ಜುಗೊಂಡಿದೆ.

ದೇಗುಲಗಳ ನಗರಿ ಬಾರಕೂರು ಐತಿಹಾಸಿಕ ಹಿನ್ನಲೆಯ ಊರು. 365 ದೇಗುಲಗಳ ಬೀಡು.ಬಾರಕೂರು ಪ್ರತಿಯೊಂದು ಕುಲದ ದೇವರನ್ನು ಹೊಂದಿರುವ ಅಪರೂಪದ ತಾಣ. 12 ಎಕರೆ ಉಂಬಳಿ ಹೊಂದಿದ್ದ ದೇವಾಡಿಗ ಸಮಾಜದವರ ಕುಲದೇವರು ಶ್ರೀ  ಏಕನಾಥೇಶ್ವರಿ ದೇವಸ್ಥಾನ ಬಾರಕೂರು ಅರಸರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. 

ಈ ದೇಗುಲದ ಪುನರುತ್ಥಾನಕ್ಕೆ ಸಮಾಜದ ಹಿರಿಯರಾದ ಅಣ್ಣಯ್ಯ ಸೇರಿಗಾರ ನೇತ್ರತ್ವದಲ್ಲಿ 2 ವರ್ಷಗಳ ಹಿಂದೆ ಟ್ರಸ್ಟ್ ಸ್ಥಾಪಿಸಿ ಕುಲದೇವಿಯ ಸನ್ನಿಧಿಯ ವಿನಾಶ ಮತ್ತೆ ಮೇಲೆತ್ತುವ ಕೈಂಕರ್ಯದ ಬಗ್ಗೆ ದೇಶ ವಿದೇಶಗಳಲ್ಲಿ ವಿಸ್ತರಿಸುವ ದೇವಾಡಿಗ ಸಮಾಜ ಬಾಂಧವರಿಗೆ ಮನವರಿಕೆ ಮಾಡಿ ಕೊಡಲಾಯಿತು. ಸನ್ನಿಧಿಯ ಪುನರ್ ನಿರ್ಮಾಣದ ಕುರಿತು ಅಷ್ಟಮಂಗಲ ಪ್ರಶ್ನೆ ಚಿಂತನಾ ನಡೆಸಲಾಯಿತು. ಏಕನಾಥೇಶ್ವರಿ ಸಾನಿಧ್ಯದ ಪುನರುತ್ಥಾನ ಅವಶ್ಯ ಎಂಬುದು ಪ್ರಶ್ನಾ ಚಿಂತನೆಯಲ್ಲಿ ಮೂಡಿಬಂದ ಹಿನ್ನಲೆಯಲ್ಲಿ ಕಳೆದ ಸಾಲಿನಲ್ಲಿ ಜನವರಿ ತಿಂಗಳಲ್ಲಿ ದೇಗುಲ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಪವಾಡವೆಂಬ ಅತಿ ಕಡಿಮೆ ಅವಧಿಯಲ್ಲಿಯೇ ದೇವಿ ಸನ್ನಿಧಿ ಈಗ ತಲೆಯೆತ್ತಿ ನಿಂತಿದೆ.

ದೇವರ ಸೇವೆಯಲ್ಲಿ ಮಂಚೂಣಿಯ ಸ್ಥಾನ ಅಲಂಕರಿಸಿರುವ ದೇವಾಡಿಗರು ಪ್ರಾಚೀನ ಕಾಲದಲ್ಲಿ ದೇವರ ಅಡಿಗಳು ಎಂದು ಕರೆಯಲ್ಪುಡುತಿದ್ದವರು. ಆಚಾರ ವಿಚಾರಗಳಲ್ಲಿ ಮೇಲ್ಪಂಗ್ತಿಯಲಿದ್ದ  ದೇವಾಡಿಗ ಸಮಾಜಕ್ಕೆ ಏಕನಾಥೇಶ್ವರಿ ಕುಲದೇವಿ. ನಂಬಿದ ಭಕ್ತರ ರಕ್ಷಣೆ ಮಾಡುವ ತಾಯಿ ಎಂಬ ನಂಬಿಕೆ ದ್ರಢವಾಗಿ ಬೇರೂರಿದೆ. 5.50 ಕೋಟಿ ರೂ. ವೆಚ್ಚದ ಶಿಲಾಮಯ ದೇಗುಲ ನಿರ್ಮಾಣಕ್ಕೆ ಯೋಜನೆ ರೂಪಿಸಿ ಮುಂದಡಿಯಿಟ್ಟ ಏಕನಾಥೇಶ್ವರಿ ಟೆಂಪಲ್ ಟ್ರಸ್ಟ್ ವರ್ಷ ಕಳೆಯುವುದರೊಳಗೆ ಉದ್ದೇಶಿತ ಕಾಮಗಾರಿಯ ಅಂತಿಮ ಘಟ್ಟ ತಲುಪಿದೆ. ಶಿಲಾಮಯ ಗರ್ಭಗುಡಿ, ಶಿಲಾಮಯ ಹೊರಪೌಳಿ, ರಕ್ತೇಶ್ವರಿ , ನಾಗಬ್ರಹ್ಮ , ಗುಳಿಗ ಪರಿವಾರ ದೇವರ ಸನ್ನಿಧಿಯ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದು ಮುಟ್ಟಿದೆ. 2018ರ ಫೆಬ್ರವರಿಯಲ್ಲಿ ಲೋಕಾರ್ಪಣೆ ಮಾಡಲು ಟೆಂಪಲ್ ಟ್ರಸ್ಟ್ ಸಿದ್ಧತೆ ಮಾಡಿಕೊಂಡಿದೆ.

ಫೆಭ್ರವರಿ 2018ರ 15ರಿಂದ  22ರ ತನಕ ಪ್ರತಿಷ್ಠಾ ಕಾರ್ಯಶತಮಾನದ ಬಳಿಕ ಭವ್ಯವಾಗಿ ಪುನರುತ್ಥಾನಗೊಂಡಿರುವ ಶ್ರೀಏಕನಾಥೇಶ್ವರಿ ದೇಗುಲದ ಲೋಕಾರ್ಪಣೆ ಮತ್ತು ದೇವರ ಪ್ರತಿಷ್ಠಾ ಕಾರ್ಯ 2018ರ ಫೆ. 15ರಿಂದ ಮೊದಲ್ಗೊಂಡು 22ರ ತನಕ ನಡೆಯಲಿದೆ. ಫೆ. 15ರಂದು ವಿಗ್ರಹದ ಜಲಾಧಿವಾಸ, ಫೆ.18ರಂದು ಬಿಂಬ ಶುದ್ಧಿ ಕಾರ್ಯ , ಫೆ. 19ರಂದು ಪ್ರಾತಃಕಾಲದಲ್ಲಿ ಪ್ರತಿಷ್ಠೆ ಮತ್ತು ತತ್ಸಬಂಧ ನ್ಯಾಸಾದಿಗಳು, ಫೆ. 20 ಮತ್ತು 21ರಂದು ಶಾಂತಿ ಪ್ರಾಯಶ್ಚಿತ್ತ ಕಲಾಭಿವ್ರದ್ದಿ ಹೋಮಾದಿಗಳು, ಫೆ. 21ರಂದು ಸಂಜೆ ಬ್ರಹ್ಮಕಲಶ ಸ್ಥಾಪನೆ, ಫೆ. 22 ರಂದು ಸಂಜೆ ಬಹ್ರಕಲಶ ಸ್ಥಾಪನೆ, ಫೆ 22 ರಂದು ಪ್ರಧಾನ ಆಧಿವಾಸ ಹೋಮ,ಪೂರ್ಣಾಹುತಿ, ಕಲಾಭೀಷೆಕಾರಂಭ, ಮಧ್ಯಾಹ್ನ ಅಲಂಕಾರ ಪೂಜೆ, ಮಂಗಳಾರತಿ, ಮಂತ್ರಾಕ್ಷತೆ ಸಂತರ್ಪಣೆ ನಡೆಯಲಿದೆ. 

 

ನಾವು ಚಿಕ್ಕವರಿದ್ದಾಗ ಏಕನಾಥೇಶ್ವರಿಯ ಮೂಲ ಸಾನ್ನಿಧ್ಯದ ಕಂಡಿದ್ದೆವು. ವಿನಾಶ ಕಂಡು ಮನನೊಂದರು. ಇಂದು ಆ ತಾಯಿಯ ಸನ್ನಿಧಾನ ಪುನರಪಿ ತಲೆಯೇತ್ತುತ್ತಿರುವುದರ ಹಿಂದೆ ಇಡಿ ದೇವಾಡಿಗ ಸಮಾಜದವರ ಬೆವರು ಮತ್ತು ಕಣ್ಣೀರಿನ ತರ್ಪಣ ಅಡಗಿದೆ. ದೇಗುಲ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ದಿನದಿಂದ ಈವರೆಗೆ ದೇವಿಯ ಅನುಗ್ರಹದಂತೆ ಒಂದಿನಿತು ತೊಂದರೆಗಳಿಲ್ಲದೆ ಕ್ಷೇತ್ರ ಭವ್ಯವಾಗಿ ಮೂಡಿಬಂದಿದೆ. ಸಮಸ್ತ ದೇವಾಡಿಗ ಸಮಾಜದ ಕೇಂದ್ರ ಬಿಂದುವಾಗುವ ನಿಟ್ಟಿನಲ್ಲಿ ಸಾನಿಧ್ಯ ರೂಪುಗೊಂಡಿದೆ.--ಜನಾರ್ದನ ದೇವಾಡಿಗ ಟ್ರಸ್ಟಿ 

ಸಮಾಜದ ಕುಲದೇವಿಯ ಸಾನ್ನಿಧ್ಯ ನಾಶದಿಂದ ಅಪಾರ ದುರಿತ, ಕಷ್ಟಕಾರ್ಪಣ್ಯ ಎದುರಾಗಿದ್ದವು. ಈ ನೆಲೆಯಲ್ಲಿ ಸಮಾನ ಮನಸ್ಕ ಸಮಾಜ ಬಾಂಧವರು ಸೇರಿಕೊಂಡು ದೇವಿ ಸಾನ್ನಿಧ್ಯದ ಪುನರುತ್ಥಾನದ ಚಿಂತನೆ ನಡೆಸಿ ಕಾರ್ಯ ಪ್ರವ್ರತ್ತರಾಗಿದ್ದೆವು. ದೇವಿಯ ಅನುಗ್ರಹದಿಂದ ಯಾವಾಗ ದೇಗುಲ ನಿರ್ಮಾಣಕ್ಕೆ ಚಾಲನೆ ನೀಡಿದೆವೋ ಅಲ್ಲಿಂದ ಎಲ್ಲ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಿದೆ. ಶೇ. 65ರಷ್ಟು ಕೆಲಸ ಕಾರ್ಯಗಳು ಮುಕ್ತಾಯಗೊಂಡಿದೆ. 5.50 ಕೋಟಿ ಅಂದಾಜು ವೆಚ್ಚದ ಶಿಲಾಮಯ ದೇಗುಲಕ್ಕೆ ಈಗಾಗಲೇ 4 ಕೋಟಿ ವ್ಯಯವಾಗಿದೆ. ಮುಂದಿನ ಕೆಲಸ ಕಾರ್ಯಗಳು ಸುಸಲಿತವಾಗಿ ನಡೆಯುವಲ್ಲಿ 2 ಕೋಟಿ ಬೇಕಾಗುತ್ತದೆ. ಹನಿ ಹನಿಗೂಡಿ ಹಳ್ಳ ಎಂಬಂತೆ ಸಮಾಜಬಾಂಧವರು ನೀಡಿರುವ ಭಕ್ತಿಯ ಕಾಣಿಕೆಯಿಂದ ಕುಲದೇವಿಯ ಸಾನ್ನಿಧ್ಯ ಮತ್ತೆ ತಲೆಯೇತ್ತುವಂತಾಗಿದೆ. ಬಾರಕೂರಿನ ಅತಿ ಪ್ರಾಚೀನ ಪಂಚಲಿಂಗೇಶ್ವರ ದೇಗುಲದ ಸನ್ನಿಧಿಯ ಸನಿಹದಲ್ಲಿಯೇ 72 ಸೆಂಟ್ಸ್ ಜಾಗದಲ್ಲಿ ಏಕನಾಥೇಶ್ವರಿ ದೇಗುಲ ನಿರ್ಮಾಣಗೊಂಡಿದೆ

ದೇವಸ್ಥಾನದ ವಿಶ್ವಸ್ತ ಮಂಡಳಿ--ದೇವಸ್ಥಾನದ ಟ್ರಸ್ಟ್ ನ ಗೌರವಾಧ್ಯಕ್ಷರಾದ ಧರ್ಮಪಾಲ ದೇವಾಡಿಗ, ಅಧ್ಯಕರಾದ ಅಣ್ಣಯ್ಯ ಸೇರಿಗಾರ್ ಬಾರಕೂರು, ಗೌರವ ಪ್ರಧಾನ ಕಾರ್ಯದರ್ಶಿ ನರಸಿಂಹ ದೇವಾಡಿಗ, ಗೌರವ ಕೋಶಾಧಿಕಾರಿ ಜನಾರ್ಧನ್ ದೇವಾಡಿಗ ಹಾಗೂ ವಿಶ್ವಸ್ತ ಮಂಡಳಿ ಸಧ್ಯಸ್ಯರಾದ ಹಿರಿಯಡ್ಕ ಮೋಹನದಾಸ್ ಮುಂಬೈ, ಸುರೇಶ ಡಿ ಪಡುಕೋಣೆ ಮುಂಬೈ, ಹರೀಶ್ ಸೇರಿಗಾರ್, ದುಬೈ. ನಾರಾಯಣ ದೇವಾಡಿಗ ದುಬೈ, ದಿನೇಶ್ ಸಿ ದೇವಾಡಿಗ ದುಬೈ, ಜನಾರ್ಧನ್ ಎಸ್ ದೇವಾಡಿಗ ಮುಂಬೈ,  ಎನ್ ರಘುರಾಮ್ ದೇವಾಡಿಗ ಶಿವಮೊಗ್ಗ ಇವರುಗಳ ನೇತ್ರತ್ವದಲ್ಲಿ ದೇಗುಲ ನಿರ್ಮಾಣಕ್ಕೆ ಸಮಾಜ ಭಾಂದವರು ಅವಿವ್ರತ್ತವಾಗಿ ಶ್ರಮಿಸುತ್ತಿದ್ದಾರೆ.

 ಕೃಪೆ: ನಾಗರಾಜ ರಾಯಪ್ಪನಮಠ

ಶರವೇಗದಲ್ಲಿ ನಿರ್ಮಾಣವಾಗುತ್ತಿರುವ ಬಾರಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನ.

ನಮ್ಮ ಬಾರಕೂರು ಇತಿಹಾಸಗಳನ್ನು ಹುದುಗಿಕೊoಡಿರುವ ನಗರ. ಅಧಿಕಾರದಲ್ಲಿದ್ದ ಸರಕಾರಗಳು ಹOಪೆ, ಐಹೊಳೆ,ಪಟ್ಟದಕಲ್ಲು ಪ್ರದೇಶಗಳಿಗೆ ಕೊಟ್ಟOತಹ ಪ್ರಾಮುಖ್ಯತೆಯನ್ನು ಬಾರಕೂರಿಗೆ ಕೊಟ್ಟಿದ್ದರೆ ಇಂದು ನಮ್ಮ ಬಾರಕೂರು ಒಂದು ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿತ್ತು.ಚರಿತ್ರೆಯ ಪ್ರಕಾರ ಬಾರಕೂರು ಸಂಸ್ಥಾನವನ್ನು ಭೂತಾಳ ಪಾಂಡ್ಯ ಎOಬ ರಾಜನು ಆಳುತ್ತಿದ್ದ ಕಾಲದಲ್ಲಿ ಶ್ರೀ ಏಕನಾಥೇಶ್ವರಿ ದೇವಿಯನ್ನು ದೇವಾಡಿಗರು ಆರಾಧಿಸುತ್ತಿದ್ದರು ಎOದು ತಿಳಿದು ಬಂದಿದೆ.ಇದು ಬರಿ ನOಬಿಕೆಯಲ್ಲ ಕೆಲವು ಸರಕಾರಿ ಧಾಖಲೆಗಳು ಕೂಡಾ ಇದನ್ನು ದ್ರಢಪಡಿಸಿವೆ. ದೇವಾಡಿಗರ ಬಡತನ, ಅನಕ್ಶರತೇ, ಮುಗ್ದತೆಯಿOದಾಗಿ ಎಲ್ಲವು ಕೈತಪ್ಪಿ ಹೋಗಿರುವುದು ತಿಳಿದು ಬರುತ್ತದೆ.

ದೇವಸ್ಥಾನವನ್ನು ಪುನರ್ನಿರ್ಮಾಣ ಮಾಡಬೇಕೆನ್ನುವ ದ್ರಸ್ಟಿಯಿಂದ 20/06/2013 ರಲ್ಲಿ ನಡೆದ ಅಸ್ಟಮOಗಳ ಪ್ರೆಶ್ನೆಯಲ್ಲಿ ಯಾರಿಗೂ ಯಾವುದೇ ಸಂಶಯಕ್ಕೆ ಎಡೆ ಇಲ್ಲದಂತೆ ದ್ರಢಪಟ್ಟಿದೆ. ಹಾಗಾಗಿ ದೇವಾಡಿಗ ಸಮುದಾಯ ಮತ್ತು ಸಾರ್ವಜನಿಕರು ದೇವಾಸ್ಥಾನ ನಿರ್ಮಿಸಬೇಕೆOದು ತೀರ್ಮಾನವನ್ನು ತೆಗೆದುಕೊOಡು ಆದಕ್ಕಾಗಿ ಸೂಕ್ತವಾದ ಸ್ಥಳವನ್ನು ಖರೀದಿಸಿ ಮೇ 10, 2015 ಉಳುವ ಬಿತ್ತುವ ಕಾರ್ಯಕ್ರಮದ ಮೂಲಕ ದೇವಾಸ್ಥಾನ ಕಟ್ಟುವ ಸ್ಥಳವನ್ನು ಶುದ್ಧೀಕರಣಗೊಳಿಸಿದ್ದಲ್ಲದೆ ಹನ್ನೊOದು ಮಂದಿ ದೇವಾಡಿಗ ಗಣ್ಯರ ಒಳಗೂಡಿದ ವಿಶ್ವಸ್ಥ ಮಂಡಳಿಯನ್ನು ರಚಿಸಿಕೊOಡು ( ಶ್ರೀ ಅಣ್ಣಯ್ಯ ಶೇರಿಗಾರ್ ಪುಣೆ, ಶ್ರೀ ಜನಾರ್ದನ್ ದೇವಾಡಿಗ ಬಾರಕೂರು, ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಯೆ,ಶ್ರೀ ಧರ್ಮಪಾಲ್ ದೇವಾಡಿಗ ಮುOಬೈ, ಶ್ರೀ ಎಚ್ ಮೋಹನ್ ದಾಸ್,ಶ್ರೀ ದಿನೇಶ್ ಸಿ ದೇವಾಡಿಗ ದುಬೈ, ಶ್ರೀ ಹರೀಶ್ ಶೇರಿಗಾರ್ ದುಬೈ,ಶ್ರೀ ನಾರಾಯಣ್ ದೇವಾಡಿಗ ದುಬೈ,ಶ್ರೀ ಸುರೇಶ್ ಪಡುಕೋಣೆ,ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ,ಶ್ರೀ ರಘುರಾಮ್ ಆಲೂರು .) ಗುರುವಾರ ತಾ 21,ಜನವರಿ 2016ರಂದು ಶಿಲಾನ್ಯಾಸವನ್ನು ಪೂರೈಸಿ ಸುಮಾರು ಐದೂವರೆ ಕೋಟಿ ಬಜೆಟ್ ನ ವೆಚ್ಚದ ದೇವಾಸ್ಥಾನದ ನಿರ್ಮಾಣದ ಕಾರ್ಯ ಶರವೇಗದಿOದ ನಡೆಯುತ್ತಿದೆ.

ಈಗ ಸುಮಾರು ಶೇಕಡಾ 70ಕ್ಕೊ ಮೀರಿ ಕೆಲಸ ಮುಗಿಡಿದ್ದು ಸುಮಾರು ಮೂರೂವರೇ ಕೋಟಿ ರೂಪಾಯಿ ವೆಚ್ಚವಾಗಿದ್ದು ಇನ್ನು ಎರಡು ಕೋಟಿ ರೂಪಾಯಿಗಳ ಅವಶ್ಯಕತೆ ಇದೆ. ಬರುವ 2018 ಫೇಬ್ರುವರೀ 15 ರಿOದ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಸ್ಟಾಪನಾ ಕಾರ್ಯ ಪ್ರಾರಂಭವಾಗಿ ಫೇಬ್ರುವರೀ 22 ರ ತನಕ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ.ಹೀಗಾಗಿ ದೇವಾಸ್ಥಾನದ ನಿರ್ಮಾಣ ಕೆಲಸ ಸOಪೂರ್ಣಗೊಳ್ಳಲು ಇಡೀ ದೇವಾಡಿಗ ಸಮಾಜಭಾಂಧವರು, ಹಿತೈಶಿಗಳ, ಭಕ್ತಾಧಿಗಳ ತನು ಮನ ಧನ ದ ಮೂಲಕ ಕೈ ಜೋಡಿಸಬೇಕೆOದು ವಿಶ್ವಸ್ಥರು ವಿನಂತಿಸಿದ್ದಾರೆ .

ದೇಣಿಗೆ ನೀಡುವವರು ಈ ಮುOದಿರುವ ಬ್ಯಾOಕ್ ನOಬರ್ ಗೆ ನಗದು ಜಮಾ ಮಾಡಬಹುದು.

Shri Ekanatheshwari Temple Trust (R)CANARA BANKBARKUR BRANCHA/ C No. 3747101001893( IFSC No.CNRB0003747)

~ ಬ್ರಹ್ಮಾವರ ಗಣೇಶ್ ಶೇರಿಗಾರ್, ಮುಂಬೈ


Share