ಮತ್ತೊಮ್ಮೆ ನೆರವಿಗೆ ಸ್ಪಂದಿಸಿದ ಕುಂದಾಪುರ ದೇವಾಡಿಗ ಮಿತ್ರ (ಕದಂ) ದುಬೈ ಸದಸ್ಯರು ಮತ್ತು ರಮೇಶ್ ದೇವಾಡಿಗ ವಂಡ್ಸೆ

 

ತಲ್ಲೂರು:  ದೇವಾಡಿಗ ಮಿತ್ರ ಕುಂದಾಪುರ (ಕದಂ) ದುಬೈ ಸದಸ್ಯರ ವತಿಯಿಂದ ಆರ್ಥಿಕವಾಗಿ ಹಿಂದುಳಿದ ನಾಗೂರಿನ ಲಕ್ಷ್ಮಿ ದೇವಾಡಿಗ ಅವರ ಗ್ರಹ ನಿರ್ಮಾಣಕ್ಕೆ 10,000, ಮೈ ಸುಟ್ಟುಕೊಂಡಿರುವ ಖಂಬದಕೋಣೆ ಸದಾನಂದ ದೇವಾಡಿಗರಿಗೆ 5000 ಹಾಗೂ ಡೆಂಗ್ಯೂ ಜ್ವರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿರುವ ನಾಗಮ್ಮ  ದೇವಾಡಿಗರಿಗೆ 5000 ಧನಸಹಾಯ  ನೀಡಲಾಯಿತು.

ವೈಯಕ್ತಿಕವಾಗಿ ರಮೇಶ್ ದೇವಾಡಿಗ ವಂಡ್ಸೇ ಅವರು ಲಕ್ಷ್ಮಿ ದೇವಾಡಿಗರಿಗೆ 7500 ಹಾಗೂ ನಾಗಮ್ಮ ದೇವಾಡಿಗರಿಗೆ 5000 ಧನ ಸಹಾಯ ನೀಡಿದರು.

ಈ ಸಂಧರ್ಭದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ತ್ರಾಸಿ ರಾಜು ದೇವಾಡಿಗ, ಉಡುಪಿ ಜಿಲ್ಲಾಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ,  ಸಪ್ತಸ್ವರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾದ ರವಿ ದೇವಾಡಿಗ ತಲ್ಲೂರು, ತಲ್ಲೂರೂ ದೇವಾಡಿಗ ಸಂಘದ ಅಧ್ಯಕ್ಷರಾದ ಬಸವ ದೇವಾಡಿಗ, ಶಾರದಾ ದೇವಾಡಿಗ ಚಿತ್ರಾಡಿ ನಾಗೂರೂ, ಉಪ್ಪುಂದ ದೇವಾಡಿಗ ಸಂಘದ ಪ್ರಧಾನ  ಕಾರ್ಯದರ್ಶಿಯಾದ ಪುರುಷೋತ್ತಮದಾಸ್ ಉಪ್ಪುಂದ, ನಾಗೂರೂ ದೇವಾಡಿಗ ಸಂಘದ ಕಾರ್ಯದರ್ಶಿಯಾದ ದಿನೇಶ್ ದೇವಾಡಿಗ ನಾಗೂರೂ  ಮೊದಲಾದವರು ಉಪಸ್ತಿತರಿದ್ದರು.

 


Share