ತಲ್ಲೂರು: ಸಪ್ತಸ್ವರ ಸಹಕಾರಿ ಸಂಘದ ಅರ್ಹ ಸದಸ್ಯರ 90 ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ

 

ತಲ್ಲೂರು: ಭಾರತೀಯ ಜೀವವಿಮಾ ನಿಗಮ ಮಂಗಳೂರು ಇವರ ಶಿಕ್ಷಾ ಆಯೋಗ ಯೋಜನೆಯಡಿಯಲ್ಲಿ ನೀಡಲಾಗುವ ವಿದ್ಯಾರ್ಥಿವೇತನವನ್ನು ಸಪ್ತಸ್ವರ ಸಹಕಾರಿ ಸಂಘದ ಅರ್ಹ ಸದಸ್ಯರ 90 ಮಕ್ಕಳಿಗೆ  ನಾಗೂರಿನ ಲಲಿತ ಕ್ರಷ್ಣ ಸಭಾಭವನದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಪ್ತಸ್ವರ ಸಹಕಾರಿ ಸಂಘದ ಅಧ್ಯಕ್ಷರಾದ ಎಂ. ಸಂಜೀವ ದೇವಾಡಿಗ ತಲ್ಲೂರೂ  ವಹಿಸಿದ್ದರು.

ಸಭೆಗೆ ಮುಖ್ಯ ಅತಿಥಿಗಳಾಗಿ ಸಾಪ್ಟವೇರ್ ಇಂಜಿನಿಯರ್ ಗಣೇಶ್ ದೇವಾಡಿಗ ಕಿರಿಮಂಜೇಶ್ವರ, ಭಾಸ್ಕರ ಆಚಾರ್ಯ  ಉಪ್ಪಿನಕುದ್ರು , ರತ್ನಾಕರ ಉಡುಪ  ನಾಗೂರೂ,  ಕಿರಿಮಂಜೇಶ್ವರ ದೇವಾಡಿಗ ಸಂಘದ ಅಧ್ಯಕ್ಷರಾದ ರಾಜು ದೇವಾಡಿಗ ನಾಗೂರೂ,  ಕಾರ್ಯದರ್ಶಿ ದಿನೇಶ್ ದೇವಾಡಿಗ ನಾಗೂರೂ, ಮಂಜು ಕೆ ದೇವಾಡಿಗ ಸುಲ್ಸೇ , ಶಾರದಾ ದೇವಾಡಿಗ ನಾಗೂರೂ,ಸುರೇಂದ್ರ ಆಚಾರ್ಯ ಹೆಮ್ಮಾಡಿ  ನಿರ್ಧೇಶಕರಾದ ರಾಜೇಶ್ ದೇವಾಡಿಗ ತ್ರಾಸಿ,  ಚಂದ್ರ ದೇವಾಡಿಗ ಹರ್ಕೂರೂ  ಮೊದಲಾದವರು ಉಪಸ್ತಿತರಿದ್ದರು.

ಎಸ್ ಎಸ್ ಎಲ್ ಸಿ ಯಲ್ಲಿ 98% ಅಂಕ ಗಳಿಸಿದ ಪ್ರಜ್ವಲ್ ದೇವಾಡಿಗ ಉಪ್ಪಿನಕುದ್ರು ಇವರನ್ನು ಸಂಘದ ಪರವಾಗಿ ಅಭಿನಂದಿಸಲಾಯಿತು.

ಈ ಸಂಧರ್ಭದಲ್ಲಿ ಕ್ರಷ್ಣ ದೇವಾಡಿಗ,  ಸುರೇಶ್ ದೇವಾಡಿಗ ಖಂಬದಕೋಣೆ ಇವರಿಗೆ ವೈದ್ಯಕೀಯ ನೆರವನ್ನು ನೀಡಲಾಯಿತು.

ಆಲೂರಿನ ಅರುಣ ದೇವಾಡಿಗ ಇವರಿಗೆ 5000 ರೂಪಾಯಿ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಯಿತು.

ಸಭೆಗೆ ಆಗಮಿಸಿದ ಅತಿಥಿಗಳನ್ನು ಕಾರ್ಯನಿರ್ವಾಹಣಾಧಿಕಾರಿಯಾದ  ರವಿ ದೇವಾಡಿಗ ಸ್ವಾಗತಿಸಿ ವಂದಿಸಿದರು.


Share