ದೇವಾಡಿಗ ಸಂಘ (ರಿ)ಉಪ್ಪುಂದ ಇದರ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ, ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಂಸ್ಕ್ರತಿಕ ಸಮಾರಂಭ

 

ದೇವಾಡಿಗ ಸಂಘ (ರಿ)ಉಪ್ಪುಂದ ಇದರ ವಾರ್ಷಿಕೋತ್ಸವ ಸತ್ಯನಾರಾಯಣ ಪೂಜೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಂಸ್ಕ್ರತಿಕ ಸಮಾರಂಭವು ಉಪ್ಪುಂದ ಮಾತೃಶ್ರೀ ಸಭಾ ಭವನದಲ್ಲಿ ನಡೆಯಿತು ದುಬೈ ಅಕ್ಮೇ ಬಿಲ್ಡಿಂಗ್ ಮೇಟಿರಿಯಲ್ಸ್ ಟ್ರೆಡಿಂಗ್ ನ ಆಡಳಿತ ನಿರ್ಧೇಶಕರಾದ ಶ್ರೀ ಹರೀಶ್ ಶೇರಿಗಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಸಂಘದ ಅಧ್ಯಕ್ಷರಾದ ಬಿ.ಎ ಮಂಜು ದೇವಾಡಿಗ ಸಭೆಯ ಅದ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷರಾದ ಬಿ.ಎ ಮಂಜು ದೇವಾಡಿಗ ಸಭೆಯ ಅದ್ಯಕ್ಷತೆ ವಹಿಸಿದ್ದರು.

 

ಸಂಘದ ಗೌರವಾಧ್ಯಕ್ಷರಾದ ಜನಾರ್ಧನ ಎಸ್ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಧಕರಾದ ಅಂತರರಾಷ್ಟ್ರೀಯ ಕ್ರೀಡಾಪಟು ಜಯಂತಿ ಎಮ್ ದೇವಾಡಿಗ, ಅಂತರರಾಷ್ಟ್ರೀಯ ಕರಾಟೆಯಲ್ಲಿ ಕಂಚಿನ ಪದಕ ಪಡೆದ ವಿಶ್ವನಾಥ ದೇವಾಡಿಗ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರೆಸ್ಟಿಯಾದ ಅಂಬಿಕಾರಾಜು ದೇವಾಡಿಗ ಕುಂದಾಪುರ ಕ್ರಷಿ ಉತ್ಪನ್ನ ಮಾರುಕಟ್ಟೆ ಸದಸ್ಯರಾದ ಮಂಜು ದೇವಾಡಿಗ ಬಿಜೂರು, ರಾಷ್ಟ್ರಮಟ್ಟದ ಯೋಗಪಟು ನಿವೇದಿತಾ ನಾಯ್ಕನಕಟ್ಟೆ2016-17 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ರಕ್ಷಿತಾ ದೇವಾಡಿಗ,ಜಯಲಕ್ಷ್ಮಿ ದೇವಾಡಿಗ, ಸವಿನಯ ದೇವಾಡಿಗ,  ದೀಪಾ ದೇವಾಡಿಗ, ಮೊದಲಾದವರನ್ನು ಸನ್ಮಾನಿಸಲಾಯಿತು. 

ಈ ಸಂಧರ್ಭದಲ್ಲಿ 2016-17 ಸಾಲಿನಲ್ಲಿ 80 ಶೇಕಡಾಕ್ಕಿಂತ ಅಧಿಕ ಅಂಕ ಗಳಿಸಿದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

 

ಮುಖ್ಯ ಅತಿಥಿಗಳಾಗಿ ಮೋಹನ್‌ದಾಸ್ ಹಿರಿಯಡ್ಕ, ಮುಂಬ್ಯೆ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗ, ವಾಸು ಎಸ್ ದೇವಾಡಿಗ, ಶೀನ ದೇವಾಡಿಗ ಕದO ದುಬೈ ,  ಎಸ್.ಡಿ.ಎಮ್.ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ! ದೇವರಾಜ ಕಂಕನಾಡಿ, ಶ್ರೀಮತಿ ಗೌರಿ ದೇವಾಡಿಗ ಜಿಲ್ಲಾಪಂಚಾಯತ್ ಸದಸ್ಯರು ಉಡುಪಿ, ಶ್ರೀ ಗಣೇಶ್ ದೇವಾಡಿಗ ಸಾಪ್ಟವೇರ್ ಆರ್ಕಿಟೇಕ್ಟ ಬೆOಗಳೂರು, ಸುಧಾಕರ್ ದೇವಾಡಿಗ ಉದ್ಯಮಿಗಳು ಧಾರವಾಡ, ಚೆನ್ನಪ್ಪ ಮೊಯಿಲಿ CEO ತಾಲೂಕು ಪಂಚಾಯತ್ ಕುಂದಾಪುರ, ಮಹಿಳಾ ಘಟಕದ ಅದ್ಯಕ್ಷರಾದ ನಾಗಮ್ಮ ದೇವಾಡಿಗ, ಶಾರದಾ ದೇವಾಡಿಗ ಚಿತ್ರಾಡಿ ನಾಗೂರು, ಶ್ರೀ ಜಗದೀಶ್ ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು ಕುಂದಾಪುರ, ಶ್ರೀಮತಿ ಪ್ರಮೀಳಾ ಕೆ ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು ಕುಂದಾಪುರ, ಶ್ರೀ ರಾಮ ದೇವಾಡಿಗ ಇಂಜಿನಿಯರ್ BSNL, ವೆOಕ್ಟಯ್ಯ ದೇವಾಡಿಗ ನೇತ್ರಾವತಿ ಗ್ರಾಮೀಣ ಬ್ಯಾOಕ್, ಮಿಲಿಟರಿ ಸುಬ್ಬ ದೇವಾಡಿಗ ನಾಯ್ಕನಕಟ್ಟೆ, ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟಿಯಾದ ನರಸಿOಹ ದೇವಾಡಿಗ, ಜನಾರ್ಧನ ದೇವಾಡಿಗ, ಮಾತೃಶ್ರೀ ಸಭಾಭವನದ ಮಾಲಕರಾದ ಅರೆಹಾಡಿ ಮಂಜು ದೇವಾಡಿಗ ಸಂಘದ ಸರ್ವ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಮಚಂದ್ರ ದೇವಾಡಿಗ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ಶ್ರೀಲತಾ ಚಂದ್ರ ಕೆ ದೇವಾಡಿಗ , ಶಿಕ್ಷಕರಾದ ನಾರಾಯಣರಾಜು, ರವೀಂದ್ರ ದೇವಾಡಿಗ ಮಂಜುನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರಾದ ರಾಮಕೃಷ್ಣ ದೇವಾಡಿಗ ವರದಿವಾಚನಗೈದರು, ಜೆ ನಾರಾಯಣ ದೇವಾಡಿಗ ವಂದಿಸಿದರು.

ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನರಸಿOಹ ದೇವಾಡಿಗ KRCL ನಿರ್ವಹಿಸಿದರುಸುಮಾರು 2500 ಕ್ಕೂ ಮಿಕ್ಕಿ ದೇವಾಡಿಗ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

 


Share