ದುಬೈ: ಪವಿತ್ರ ರಂಜಾನ್ ಮಾಸಾಚರಣೆಯ ಅಂಗವಾಗಿ ಸತತ 6ನೇ ವರ್ಷ ರಕ್ತದಾನ ಶಿಬಿರವನ್ನು ಆಯೋಜಿಸಿದ ಕದಮ್

ದುಬೈ: ಪವಿತ್ರ ರಂಜಾನ್ ಮಾಸಾಚರಣೆಯ ಅಂಗವಾಗಿ ದುಬಾಯಿಯ ಲತೀಫ ಆಸ್ಪತ್ರೆಯಲ್ಲಿ ಜೂನ್ 19 ರಂದು ಕುಂದಾಪುರ ದೇವಾಡಿಗ ಮಿತ್ರ ಕದಮ್ ದುಬಾಯಿ ಇವರ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ದಿನೇಶ್ ಸಿ ದೇವಾಡಿಗರವರ ನೇತೃತ್ವದಲ್ಲಿ ನಡೆದ ಈ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳಿಗು ರಕ್ತದಾನ ಮಾಡಿ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾದರು.

ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗು ಕದಮ್ ನ ವತಿಯಿಂದ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

 

ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ರಕ್ತದಾನ ಶಿಬಿರ ಇನ್ನೂ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ಕದಮ್ ಇದೀಗ ಸತತ 6ನೇ ವರ್ಷ ರಕ್ತದಾನ ಶಿಬಿರವನ್ನು ಆಯೋಜಿಸಿದೆ.

ಈ ಸಂದರ್ಭದಲ್ಲಿ ದಿನೇಶ್ ಸಿ ದೇವಾಡಿಗ, ದಾಸ್ ಕುಡ್ಲ , ಯುವರಾಜ್ ದೇವಾಡಿಗ , ಬಾಲಕೃಷ್ಣ ಸಾಲೀಯಾನ್, ನಿತ್ಯಾನಂದ ಬೆಸ್ಕೂರ್ ,  ಮನೋಜ್ ದೇವಾಡಿಗ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


Share