ದೇವಾಡಿಗರ ಒಕ್ಕೂಟ (ರಿ.) ಬೈಂದೂರು; ವಾರ್ಷಿಕ ಮಹಾಸಭೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ | ನೂತನ ಅಧ್ಯಕ್ಷ ಎಚ್.ನಾರಾಯಣ ದೇವಾಡಿಗ , ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮೀ ದೇವಾಡಿಗ

 

ಅಧ್ಯಕ್ಷರಾಗಿ ಎಚ್.ನಾರಾಯಣ ದೇವಾಡಿಗ ಹೊಸಾಡು, ಪ್ರದಾನ ಕಾರ್ಯದರ್ಶಿಯಾಗಿ ಸತ್ಯಪ್ರಸನ್ನ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ರೀಮತಿ ಜಯಲಕ್ಷ್ಮೀ ದೇವಾಡಿಗ ಪಡುವರಿ, ಪ್ರದಾನ ಕಾರ್ಯದರ್ಶಿಯಾಗಿ ಶ್ರೀಮತಿ ಶ್ಯಾಮಲ ಕೃಷ್ಣ ದೇವಾಡಿಗ ಆಯ್ಕೆ

 

ಬೈಂದೂರು : ದೇವಾಡಿಗರ ಒಕ್ಕೂಟ (ರಿ.) ಬೈಂದೂರು ಇವರ ವತಿಯಿಂದ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ಮಹಾಸಭೆ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

 

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ.ಜಿ.ಸುಬ್ಬ ದೇವಾಡಿಗ ವಹಿಸಿದರು, ಕಾರ್ಯಕ್ರಮವನ್ನು ಹಿರಿಯ ಲಾವಣ್ಯ ಕಲಾವಿದರಾದ ಬಿ.ಮಾಧವ ರಾವ್ ಇವರು ಉದ್ಘಾಟಿಸಿದರು.

ಮುಖ್ಯ‌ಅತಿಥಿಗಳಾಗಿ ಗೌರವಾಧ್ಯಕ್ಷರಾದ ಕೆ.ನಾರಾಯಣ ದೇವಾಡಿಗ, ನಿವೃತ್ತ ಅರಣ್ಯ ನೀರಿಕ್ಷಕರಾದ ಬಿ.ಗೋವಿಂದ ದೇವಾಡಿಗ, ನಾರಾಯಣ ದೇವಾಡಿಗ ಹೊಸಾಡು, ಬಿ.ಮಹಾಲಿಂಗ ದೇವಾಡಿಗ ಉದ್ಯಮಿ, ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಮಾಲತಿ ದೇವಾಡಿಗ ಉಪಸ್ಥಿತರಿದ್ದರು.

 

ಸಂದರ್ಭದಲ್ಲಿ ಸಂಘವತಿಯಿಂದ ಮಂಜು ದೇವಾಡಿಗ ನಿದೇರ್ಶಕರು ಕೃಷಿ ಉತ್ಪನ್ನ ಮಾರುಕಟ್ಟೆ ಕುಂದಾಪುರ, ನಾರಾಯಣ ದೇವಾಡಿಗ ಕೂಡ್ಲು, ದುರ್ಗಾ ದೇವಾಡಿಗ ಸೂರ್ಕೂಂದ, ಅಣ್ಣಪ್ಪ ದೇವಾಡಿಗ ಕೆರೆಕಟ್ಟೆ, ಇವರನ್ನು ಸಮ್ಮಾನಿಸಲಾಯಿತು.

 

ಯೋಗ ಶಿಕ್ಷಕರಾದ ಬಿಜೂರು ಮಂಜುನಾಥ ದೇವಾಡಿಗ  ಮತ್ತು ಯೋಧರಾದ ನಾಗರಾಜ ದೇವಾಡಿಗ ಹಾಗೂ ಕುಮಾರಿ ಶಿಲ್ಪಾ ಎಸ್ ದೇವಾಡಿಗ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

 

ಸಂಘದ ಕಾರ್ಯದರ್ಶಿಯಾದ ರಾಘವೇಂದ್ರ ದೇವಾಡಿಗ ವಾರ್ಷಿಕ ವರದಿ ಮತ್ತು ವಾರ್ಷೀಕ ಲೆಕ್ಕಪತ್ರ ಮಂಡನೆ ಮಾಡಿದರು, ಮಣಿಕಂಠ ದೇವಾಡಿಗ ಇವರು ಸ್ವಾಗತಿಸಿ, ಸತ್ಯಪ್ರಸನ್ನ ಇವರು ವಂದಿಸಿದರು, ಶಿಕ್ಷಕರಾದ ನಾರಾಯಣರಾಜು ಅವರು ಕಾರ್ಯಕ್ರಮ ನಿರೂಪಿಸಿದರು.

  

ದೇವಾಡಿಗರ ಒಕ್ಕೂಟ (ರಿ.) ಬೈಂದೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ

 

ಬೈಂದೂರು : ದೇವಾಡಿಗರ ಒಕ್ಕೂಟ (ರಿ.) ಬೈಂದೂರು ಇದರ ೨೦೧೭-೧೮ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಚ್.ನಾರಾಯಣ ದೇವಾಡಿಗ ಹೊಸಾಡು, ಪ್ರದಾನ ಕಾರ್ಯದರ್ಶಿಯಾಗಿ ಸತ್ಯಪ್ರಸನ್ನ, ಹಾಗೂ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ರೀಮತಿ ಜಯಲಕ್ಷ್ಮೀ ದೇವಾಡಿಗ ಪಡುವರಿ, ಪ್ರದಾನ ಕಾರ್ಯದರ್ಶಿಯಾಗಿ ಶ್ರೀಮತಿ ಶ್ಯಾಮಲ ಕೃಷ್ಣ ದೇವಾಡಿಗ ಆಯ್ಕೆಯಾಗಿದ್ದಾರೆ. 

 


Share