30 ಎಪ್ರಿಲ್ : ದೇವಾಡಿಗ ಸುಧಾರಕ ಸಂಘ (ರಿ) ಕಾರ್ಕಳ ದಲ್ಲಿ "ದೇವಾಡಿಗ ಸಂಗಮ- 2017"

 

ಕಾರ್ಕಳ: ದೇವಾಡಿಗ ಸಮಾಜದ ಸಂಘಟನೆ ಹಾಗು ಏಳಿಗೆಗಾಗಿ ನಿರಂತರ ಶ್ರಮಿಸುತ್ತಿರುವ ಕಾರ್ಕಳ ದೇವಾಡಿಗ ಸಂಘವು ಇದೇ ನಿಟ್ಟಿನಲ್ಲಿ ಈ ಬಾರಿ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಜೊತೆಗೆ ದಿನಾಂಕ 30/4/2017 ರಂದು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ *"ದೇವಾಡಿಗ ಸಂಗಮ- 2017"* ಹಾಗು ಸಮಾಜ ಬಾಂಧವರ ಬಡ ಮಕ್ಕಳ ಶಿಕ್ಷಣ ಮತ್ತು ಬಡ ಮಕ್ಕಳ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸಿ ಆಸರೆ ನೀಡುವ ಮಹತ್ವಾಕಾಂಕ್ಷೆಯ *"ವಿದ್ಯಾ - ಆಸರೆ"*ಯೋಜನೆಗೆ ನಿಧಿ ಸಂಗ್ರಹಣೆಗಾಗಿ ಅಖಿಲ ಭಾರತ ಮಟ್ಟದ ದೇವಾಡಿಗ ಸಮಾವೇಶ ಹಾಗು ಕಬಡ್ಡಿ, ವಾಲಿಬಾಲ್ , ತ್ರೋಬಾಲ್ ಪಂದ್ಯಾಟಗಳು ಮತ್ತು ಸಾಂಸ್ಕೃತಿಕ ವೈವಿಧ್ಯಮಯ ಸ್ಪರ್ಧೆಗಳು (Verity Competition) ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಅಖಿಲ ಭಾರತ ಮಟ್ಟದಂಥಹ ಈ ಸಮಾವೇಶ ಹಾಗು ಕ್ರೀಡೋತ್ಸವದಲ್ಲಿ ದೇವಾಡಿಗರ ಒಗ್ಗಟ್ಟನ್ನು ತೋರ್ಪಡಿಸುವ ನಿಟ್ಟಿನಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ವಿನಂತಿ.

ಕಾರ್ಯಕ್ರಮಗಳ ವಿವರ:
*ಎಲ್ಲಾ ಕ್ರೀಡಾ ಸ್ಪರ್ಧೆಗಳು ಬೆಳಗ್ಗೆ 9 ಘಂಟೆಗೆ ಸರಿಯಾಗಿ ಆರಂಭವಾಗಲಿದ್ದು ತಂಡಗಳು 8:30 ಒಳಗೆ ಹಾಜರಿದ್ದು ತಮ್ಮ ನೋಂದಣಿಯನ್ನು ಪೂರ್ಣಗೊಳಿಸತಕ್ಕದ್ದು. ಕ್ರೀಡಾ ಸ್ಪರ್ಧೆಗಳ ಬಗೆಗಿನ ಸೂಚನೆ ಹಾಗು ನಿಯಮಗಳ ಬಗೆಗಿನ ವಿವರಗಳಿಗೆ ಆಮಂತ್ರಣ ಪತ್ರಿಕೆಯನ್ನು ಗಮನಿಸಬೇಕಾಗಿ ವಿನಂತಿ.

* 4:30 ಕ್ಕೆ ಸರಿಯಾಗಿ ದೇವಾಡಿಗ ಸಮಾವೇಶ ಜರಗಲಿರುವುದು.

* 5:30 ಕ್ಕೆ ಸರಿಯಾಗಿ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ , ಅತಿಥಿಗಳಿಂದ ಭಾಷಣ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು.

 


Share