ದೇವಾಡಿಗರ ಸಮಾಜ ಸೇವಾ ಸಂಘ (ರಿ) ತಲ್ಲೂರು ಉಪ್ಪಿನಕುದ್ರು - ಸಪ್ತಸ್ವರ ಟ್ರೋಫಿ 2017 | ಸಮುದಾಯದ ಅಭಿವೃಧ್ಧಿಗೆ ಸಂಘಗಳು ಪೂರಕ - ಅಣ್ಣಯ್ಯ ಶೇರಿಗಾರ್ ಬಾರ್ಕೂರು

 

ದೇವಾಡಿಗರ ಸಮಾಜ ಸೇವಾ ಸಂಘ (ರಿ) ತಲ್ಲೂರು ಉಪ್ಪಿನಕುದ್ರು ಇವರ ಆಶ್ರಯದಲ್ಲಿ ವಿದ್ಯಾನಿಧಿ ಪ್ರಯುಕ್ತ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ತಾರೀಕು Jan 28, 2017 ರಂದು ತಲ್ಲೂರಿನ ಕುಂತಿಯಮ್ಮನ ದೇವಾಸ್ಥಾನದ ವಟಾರದಲ್ಲಿ ಸಂಪನ್ನಗೊoಡಿತು . ಅತಿಥಿ ಗಣ್ಯರನ್ನು ವಾದ್ಯ ಮೆರವಣಿಗೆಗಳೊಂದಿಗೆ ವೇದಿಕೆಗೆ ಕರೆ ತರಲಾಯಿತ್ತು. 

ತಲ್ಲೂರು ದೇವಾಡಿಗ ಸೇವಾ ಸಂಘದ  ಸಾರಥ್ಯದಲ್ಲಿ ಸಪ್ತಸ್ವರ ಟ್ರೋಫಿ ಗಾಗಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ . ಮೊದಲಿಗೆ ಅತಿಥಿ ಗಣ್ಯರನ್ನು ಚಂಡೆ ಕೊoಬು ವಾದ್ಯಗಳ ಮೆರವಣಿಗೆಯೊoದಿಗೆ ವೇದಿಕೆಗೆ ಕರೆತರಲಾಯಿತು. ನoತರ ಶ್ರೀ ರವಿ ತಲ್ಲೂರು ಎಲ್ಲಾ ಅತಿಥಿಗಣ್ಯರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು. ಮುoಬೈ ದೇವಾಡಿಗ ಸಂಘದ ಜೊತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್  ಪ್ರಾಸ್ಠಾವಿಕ ಭಾಷಣವನ್ನು ಮಾಡುತ್ತಾ ತಲ್ಲೂರು  ದೇವಾಡಿಗ ಸಂಘ ವರ್ಷವಿಡೀ ತನ್ನ ಸಮುದಾಯದ ಜನರ ಸುಖದುಃಖಗಳಿಗೆ ಸ್ಪಂದಿಸುತ್ತಿರುವ  ಅವಿಭಜಿತ ದಕ್ಷಿಣ ಕನ್ನಡದ ಏಕೈಕ ಮಾದರಿ ಸಂಘ ಎoದು ನುಡಿದರು.ದೇವಾಡಿಗ ಸಂಘ ಮುoಬೈ ಅಧ್ಯಕ್ಷ ಶ್ರೀ ರವಿ ದೇವಾಡಿಗ ಶ್ರೀ ಏಕನಾಥೇಶ್ವರಿ ದೇವಾಸ್ಥಾನದ ವಿಶ್ವಸ್ಠರಾದ ಶ್ರೀ ಹಿರಿಯಡ್ಕ ಮೋಹನದಾಸ್ ಮತ್ತು ಬೆoಗಳೂರಿನ ಶ್ರೀ ನಿತೀಶ್ ದೇವಾಡಿಗ ಟ್ರೋಫಿಯನ್ನು ಅನಾವರಣಗೊಳಿಸಿದರೆ, ಶ್ರೀ ಏಕನಾಥೇಶ್ವರಿ ದೇವಾಸ್ಥಾನದ ಮ್ಯಾನೇಜಿoಗ್ ಟ್ರಸ್ಟ ಶ್ರೀ ಅಣ್ಣಯ್ಯ ಶೇರಿಗಾರ್ , ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಗೌರಿ ದೇವಾಡಿಗರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಸಂಧರ್ಭೋಚಿತವಾಗಿ ಮಾತನಾಡಿದರು.

ಕಬ್ಬಡಿ ಪಂದ್ಯಾಟವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆನಂದ ಬಿಲ್ಲವ್ ಮತ್ತು ಉಡುಪಿ ಜಿಲ್ಲಾ ಕಬ್ಬಡಿ ಅಸೋಷಿಯನ್ ರಾಜೇಂದ್ರ ಸುವರ್ಣ ಚಾಲನೆ ನೀಡಿದ್ದರು. ಒಟ್ಟು 20 ಟೀಮುಗಳು ಭಾಗವಹಿಸಿದ್ದು ಕಲ್ಕೇರಿ ಫ್ರೇಂಡ್ಸ್ ಪ್ರಥಮ ಸ್ಥಾನ ಪಡೆದರು.

ಸಮಾರೋಪ ಸಮಾರoಭವನ್ನು ಸೊಫ್ಟವೇರ್ ಇಂಜಿನಿಯರ್ ಶ್ರೀ ಗಣೇಶ್ ದೇವಾಡಿಗ ಬೆoಗಳೂರು ಇವರು ನೆರವೇರಿಸಿದರು. ದೇವಾಡಿಗ ಸೇವಾ ಸಂಘ ತಲ್ಲೂರು ವಿದ್ಯಾನಿಧಿಗಾಗಿ ಈ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ರಾಜು ದೇವಾಡಿಗ , ಬೈಂದುರು ಬಿ  ಜೆ  ಪಿ  ಮಹಿಳಾ ಅಧ್ಯಕ್ಷೆ ಶ್ರೀಮತಿ ಪ್ರಿಯದರ್ಶಿನಿ ಕಮ್ಲೇಶ್ ಬಿಜೂರ್, ಬೆoಗಳೂರು ದೇವಾಡಿಗ ಸಂಘದ ಜೊತೆಕಾರ್ಯದರ್ಶಿ ಶ್ರೀ ಚಂದ್ರು ದೇವಾಡಿಗ, ಯುವ ಘಟಕ ಕಾರ್ಯದರ್ಶಿ ಶ್ರೀ ರಮೇಶ ದೇವಾಡಿಗ, ಶ್ರೀಮತಿ ಶಶಿಕಲ ಎನ್ ದೇವಾಡಿಗ, ಕದಮ್  ನ ಶ್ರೀ ಶೀನ ದೇವಾಡಿಗ ಶ್ರೀ ಏಕನಾಥೇಶ್ವರಿ ದೇವಾಸ್ಥಾನದ ವಿಶ್ವಸ್ಠರಾದ ಶ್ರೀ ಜನಾರ್ದನ ದೇವಾಡಿಗ ಬಾರಕೂರು , ಶ್ರೀ ನರಸಿಂಹ ದೇವಾಡಿಗ ಉಡುಪಿ , ಶ್ರೀ ಜನಾರ್ದನ ದೇವಾಡಿಗ ಉಪ್ಪುಂದ, ಮುoಬೈ ನ ಕೆ.ಎನ್.ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ಶ್ರೀ ಜಗದೀಶ್ ದೇವಾಡಿಗ  ಉಪಸ್ಥಿತರಿದ್ದರೆ, ಸೆಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಲ್ಲೂರು ಸಂಘದ ಶ್ರೀ ಬಸವ ದೇವಾಡಿಗರು ವಹಿಸಿದ್ದರು .

ಸಭೆಯಲ್ಲಿ ಜಾವಲಿನ್(ಈಟಿ) ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಚೇತನ್ ದೇವಾಡಿಗ ಕಿರಿಮಂಜೇಶ್ವರ ಇವರನ್ನು ಅಭಿನಂದಿಸಲಾಯಿತು.

ಮಹೇಶ್ ದೇವಾಡಿಗ ವಂದಿಸಿದ್ದರೆ, ಕಾರ್ಯಕ್ರಮವನ್ನು ಶಿಕ್ಷಕರಾದ ಗಣೇಶ್ ದೇವಾಡಿಗ ವಂಡ್ಸೆ, ಚಂದ್ರ ದೇವಾಡಿಗ ಮಾರಣಕಟ್ಟೆ ಉದಯ ಕುಮಾರ ಶೆಟ್ಟಿ ನಿರೂಪಿಸಿದರು.


Share