ದೇವಾಡಿಗರ ಸಮಾಜ ಸೇವಾ ಸಂಘ (ರಿ) ಕುಂದಾಪುರ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ನಾಗರಾಜ ರಾಯಪ್ಪನಮಠರಿಗೆ ಅಧಿಕಾರ ಹಸ್ತಾಂತರ

 

ಸಂಸ್ಥೆಯ ನೂತನ ಅಧ್ಯಕ್ಷರಾಗಿ ನಾಗರಾಜ ರಾಯಪ್ಪನಮಠ ಇವರಗೆ ಅಧಿಕಾರ ಹಸ್ತಾಂತರಿಸಲಾಯಿತು.

ಕುಂದಾಪುರ: ದೇವಾಡಿಗರ ಸಮಾಜ ಸೇವಾ ಸಂಘ (ರಿ) ಕುಂದಾಪುರ ಇದರ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಾಮೂಹಿಕ ಸತ್ಯನಾರಯಣ ಪೂಜಾ ಕಾರ್ಯಕ್ರಮ ಕುಂದಾಪುರ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಮುಂಬೈ ಉದ್ಯಮಿ ಸುರೇಶ ಡಿ ಪಡುಕೋಣೆ ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ನಾರಾಯಣ ದೇವಾಡಿಗ ಸಮಾರಂಭದ ಅಧ್ಯಕ್ಷತೆ ವಹಿಸಿದರು. 

ಈ ಸಮಾರಂಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ ತ್ರಾಸಿ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷರಾದ ರಘುರಾಮ ದೇವಾಡಿಗ ಆಲೂರು, ಶ್ರೀ ಏಕನಾಥೇಶ್ವರಿ ದೇವಾಸ್ಥಾನ ಟ್ರಸ್ಟನ ಕಾರ್ಯದರ್ಶಿ ನರಸಿಂಹ ದೇವಾಡಿಗ, ಬೆಂಗಳೂರು ಉದ್ಯಮಿ ನಿತೀಶ ದೇವಾಡಿಗ, ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಟಿ.ಟಿ ರಸ್ತೆ, ಕೋಶಾಧಿಕಾರಿ ಆನಂದ ಕೆ,ಎನ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ದೇವಾಡಿಗ ಕೋಶಾಧಿಕಾರಿ ಸುಮ ಕೇಶವ, ಯುವ ಘಟಕದ ಅಧ್ಯಕ್ಷ ಕೃಷ್ಣ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾದಿಕಾರಿ ಡಾ/ಕೆ.ಪ್ರತಾಪ ಕುಮಾರ, ಪ್ರಗತಿಪರ ಕೃಷಿಕರಾದ ಮಹಾಲಿಂಗ ದೇವಾಡಿಗ ಮಾರ್ಗೋಳಿ, ಹಿರಿಯ ವಾದ್ಯಕಲಾವಿದರಾದ ಲಕ್ಷ್ಮಣ ದೇವಾಡಿಗ, ಮಂಗಳೂರು ವಿ.ವಿ.ಯ ಬಿ.ಬಿ.ಎಂ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸನತ ಎಸ್. ದೇವಾಡಿಗ ಇವರನ್ನು  ಸನ್ಮಾನಿಸಲಾಯಿತು.

 

ಸಂಸ್ಥೆಯ ಗೌರವ ಅಧ್ಯಕ್ಷರಾದ ಚಂದ್ರಶೇಖರ ದೇವಾಡಿಗ ಸ್ವಾಗತಿಸಿದರು. ಶಿಕ್ಷಕರಾದ ರಾಮ ದೇವಾಡಿಗ ಹಟ್ಟಿಯಂಗಡಿ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಉದಯ ಕುಮಾರ ಹೇರಿಕೇರಿ ವಂದಿಸಿದರು.

 


Share