ಹಿರಿಯಡಕ ದೇಗುಲದಲ್ಲಿ ಗೋಡೆ ಕುಸಿತ: ದಿ| ಅಂಗಾರ ಶೇರಿಗಾರ್‌ ಅವರ ಪುತ್ರ ಪ್ರಸಾದ್‌ (25) ಮೃತ್ಯು

 

ದೇವರಿಗೂ ಬಹು ಬೇಗ ಇಷ್ಟವಾಯಿತಲ್ಲಾ ನಿಮ್ಮ ಆ ನಗು ಮುಖ,

ಆ ತಮಾಷೆಯ ಮಾತಿನ ಗುಚ್ಛಗಳು ಮರೆಯುವಂತಹುದಲ್ಲ,

ಅಣ್ಣನ ಆ ನುಡಿ,ಆ ನಡೆ,ಆ ನಗು ಕಣ್ಣೆದುರಿಗೇ ಚಿತ್ರಣವಾಗುತ್ತಿದೆ,
ಇಡೀ ಊರೇ ನಿಮ್ಮ ನಗುವನ್ನು ಕಳೆದುಕೊಂಡ ದುಃಖ ಸಾಗರದಿ ಮುಳುಗಿದೆ;
ದೇವರ ಕೆಲಸದಿ ದೇವರ ಸೇರಿದ ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ನಮ್ಮ ಆಶಯ...

Šhrãvyâ Hiriadka

ಉಡುಪಿಹಿರಿಯಡಕ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಜೆ ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಕರಸೇವೆ ನಡೆಯುತ್ತಿದ್ದಾಗ ಪ್ರಾಂಗಣದ ಹೊರಗಿನ ಮುಖಮಂಟಪದ ಮೇಲ್ಭಾಗದ ಛಾವಣಿಯ ಅಡ್ಡಗೋಡೆ ಕುಸಿದು ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದು, ಒಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ.

ಹಿರಿಯಡಕದ ದಿ| ಅಂಗಾರ ಶೇರಿಗಾರ್‌ ಅವರ ಮಗ ಪ್ರಸಾದ್‌ (25) ಮತ್ತು ದಾಸು ಶೆಟ್ಟಿಗಾರ್‌ ಅವರ ಮಗ ಲೋಕೇಶ್‌ (25) ಮೃತಪಟ್ಟವರು. ಶಿವಕುಮಾರ್‌ ಮರಕಲ ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿವಕುಮಾರ್‌ ಹಿರಿಯಡಕದಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದಾರೆ. ಲೋಕೇಶ್‌ ಎಲೆಕ್ಟ್ರಿಕಲ್‌ ಮೊದಲಾದ ಕೆಲಸ ನಿರ್ವಹಿಸುತ್ತಿದ್ದರು. ರಾಜೇಶ್‌ ದೇವಾಡಿಗ, ಶ್ಯಾಮರಾಯ ಆಚಾರ್ಯ, ಅಜಯ್‌, ರಮೇಶ್‌ ಮತ್ತಿತರರು ಗಾಯಗೊಂಡಿದ್ದಾರೆ.

5 ನಿಮಿಷದಲ್ಲಿ ಕೆಲಸ ಮುಗಿಯುತ್ತಿತ್ತು
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಶನಿವಾರ ಕರಸೇವಕರ ಮೂಲಕ ದೇವಳದ ಮುಖಮಂಟಪದ ಮೇಲ್ಛಾವಣಿಯ ಹೆಂಚು, ಪಕ್ಕಾಸುಗಳನ್ನು ತೆಗೆಯಲಾಗುತ್ತಿತ್ತು. ಸರಿಸುಮಾರು 250ಕ್ಕೂ ಮಿಕ್ಕಿ ಸ್ಥಳೀಯ ಕರಸೇವಕರು ಕೆಲಸದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಮಳೆ ಬರುತ್ತಿತ್ತು. ಸೇವೆಯಲ್ಲಿದ್ದ ಕರಸೇವಕರು ಶನಿವಾರ ಸಂಜೆ ಕಾರ್ಯ ಮುಗಿಸಿ ಹೊರಟಿದ್ದರು. ಏಳೆಂಟು ಮಂದಿ ಮಾತ್ರ 5 ಗಂಟೆಯ ಸುಮಾರಿಗೆ ಮೇಲ್ಛಾವಣಿಯಲ್ಲಿ ಕೆಲಸ ಮಾಡುತ್ತಿದ್ದರು. ಕೊನೆಯ ಹಂತದಲ್ಲಿದ್ದ ಕೆಲಸ ಇನ್ನೇನು 5 ನಿಮಿಷದಲ್ಲಿ ಮುಗಿಯುತ್ತದೆ ಎನ್ನುವಷ್ಟರಲ್ಲಿ ದುರ್ಘ‌ಟನೆ ಸಂಭವಿಸಿದೆ.

ಹಳೆಯದಾದ ಮೇಲ್ಛಾವಣಿಯ ಪೂರ್ವಭಾಗದ ಮಣ್ಣಿನ ಗೋಡೆ ಸಂಪೂರ್ಣವಾಗಿ ಜರಿದು ಕರಸೇವಕರ ಮೇಲೆ ಬಿದ್ದಿತು. ಗೋಡೆಕುಸಿದಾಗ ಪ್ರಾಂಗಣದ ಚಪ್ಪಡಿ ಕಲ್ಲಿಗೆ ತಲೆ ಜಜ್ಜಿದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಎಲ್ಲರನ್ನೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಆಸ್ಪತ್ರೆಗೆ ಸಚಿವ ಪ್ರಮೋದ್‌ ಮಧ್ವರಾಜ್‌, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮತ್ತಿತರರು ಭೇಟಿ ನೀಡಿದ್ದಾರೆ.

 


Share