Barkur Devadiga Sangha: 3rd AGM and new Executive Committee formation

 

ದೇವಾಡಿಗ ಸಂಘ ಬಾರಕೂರು: 3ನೇ ಮಹಾಸಭೆ ಹಾಗೂ ನೂತನ ಕಾರ್ಯಕಾರಿ ಸಮಿತಿ

 

ದೇವಾಡಿಗ ಸಂಘ ಬಾರಕೂರು ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ವಾರ್ಷಿಕ ಮಹಾಸಭೆಯು ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲ ನಿರ್ಮಾಣ ಸ್ಥಳದಲ್ಲಿ ದಿನಾಂಕ : 20.03.2016 ರವಿವಾರದಂದು ಜರಗಿತು.

 

ಸಭಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಿ.ಸುರೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಾರಕೂರು ಶಾಂತಾರಾಮ ಶೆಟ್ಟಿ, ಮೂಡಬಿದಿರೆ ಆಳ್ವಾಸ್ ಆಂಗ್ಲಮಾಧ್ಯಮ ಶಾಲಾ ಪ್ರಾಂಶುಪಾಲರಾದ ವಸಂತ ಕುಮಾರ್ ನಿಟ್ಟೆ, ಉಡುಪಿ ನಾದಶ್ರೀ ಸೇವಾ ಟ್ರಸ್ಟ್‍ನ ಅಧ್ಯಕ್ಷ ಶ್ರೀಧರ ದೇವಾಡಿಗ, ಉಡುಪಿ ನಾದಶ್ರೀ ಕೋ ಆಪರೇಟಿವ್ಸೊಸೈಟಿ  ಅಧ್ಯಕ್ಷ ಚಂದ್ರಕಾಂತ ದೇವಾಡಿಗ, ಮಣಿಪಾಲ ಯೂನಿವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ರಾಘವೇಂದ್ರ ಜಿ, ಕೋಟ ದೇವಾಡಿಗರ ಸಂಘದ ಅಧ್ಯಕ್ಷ ನರಸಿಂಹ ದೇವಾಡಿಗ, ಬ್ರಹ್ಮಾವರ ಶ್ರೀಮಹಾಲಿಂಗೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಶೇಖರ ದೇವಾಡಿಗ, ಕಟಪಾಡಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ತುಳಸಿ ಎಸ್.ದೇವಾಡಿಗ, ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನ ನಿರ್ಮಾಣ ಸಮಿತಿಪ್ರಧಾನ ಕಾರ್ಯದರ್ಶಿ ನರಸಿಂಹ ಬಿ ದೇವಾಡಿಗ, ಮುಂಬಯಿ ದೇವಾಡಿಗ ಸಂಘದ ಜೊತೆ ಕಾರ್ಯದರ್ಶಿ ಗಣೇಶ್ ಸೇರಿಗಾರ್, ಅಧ್ಯಾಪಕಿ ಸ್ಫೂರ್ತಿ ಗಣೇಶ್ ದೇವಾಡಿಗ ಉಪಸ್ಥಿತರಿದ್ದರು.

ಶ್ರೀಧರ ದೇವಾಡಿಗರು ಮಾತನಾಡುತ್ತ ಚಿಕ್ಕ ಸಂಘವಾದರೂ ಅತ್ಯಂತ ಸಮಾಜಮುಖೀ ಕೆಲಸ ಮಾಡುತ್ತಿರುವ ಸಂಘಕ್ಕೆ ಸದಾ ತಮ್ಮ ಬೆಂಬಲದ ಆಶ್ವಾಸನೆ ನೀಡಿದರು. ವಸಂತ ಕುಮಾರ್ ನಿಟ್ಟೆಯವರುದೇವಾಡಿಗ ಒಕ್ಕೂಟಕ್ಕೆ ಎಲ್ಲರ ಪಾಲ್ಗೊಳ್ಳುವಿಕೆ ಮತ್ತು ಅದರ ಅವಶ್ಯಕತೆ ಬಗ್ಗೆ ಮಾತನಾಡಿದರು. ಶ್ರೀಮತಿ ತುಳಸಿ ದೇವಾಡಿಗರು ಶುಭ ಹಾರೈಸಿ ಸಂಘ ಸಂಸ್ಥೆಗಳು ಸಮಯಕ್ಕೆ ಹೆಚ್ಚು ಒತ್ತುಕೊಡಬೇಕೆಂದು  ಸಮಯದ ಮಹತ್ವದ ಬಗ್ಗೆ ಮಾತನಾಡಿದರು.

ಸಂಘದ ಸದಸ್ಯರೂ ಆದ ರಾಘವೇಂದ್ರ ಜಿ ಯವರು ಮಾತನಾಡಿ ಶ್ರೀ ಏಕನಾಥೇಶ್ವರಿ ದೇವಸ್ಥಾನದ ಉದ್ದೇಶವನ್ನಿಟ್ಟುಕೊಂಡು ಪ್ರಾರಂಭವಾದ ಈ ಸಂಘ ಈಗ ನಿರ್ಮಾಣವಾಗುತ್ತಿರುವ  ಶ್ರೀ ಏಕನಾಥೇಶ್ವರಿದೇವಸ್ಥಾನದಲ್ಲಿ ಯಾವತ್ತಿಗೂ ಎಂದಿನಂತೆ ತಮ್ಮ ಉಪಸ್ಥಿತಿ ಮತ್ತು ಸೇವೆಯನ್ನು ಇನ್ನಷ್ಟು ಬಲಗೊಳಿಸಬೇಕೆನ್ದು ಸಲಹೆ ನೀಡಿದರು ಮತ್ತು ಸರ್ವೇನಂ. 45/3 ದಲ್ಲಿನ ಈ ಹಿಂದೆ ಶ್ರೀ ಏಕನಾಥೇಶ್ವರಿದೇವಸ್ಥಾನ ಇತ್ತು ಎಂದು ನಂಬಿದ್ದ ಸ್ಥಳದ ಈಗಿನ ಉಸ್ತುವಾರಿಯವರಿಗೆ ಸಂಘದ ವತಿಯಿಂದ ವಿನಂತಿಯನ್ನು ನೀಡಬೇಕೆಂದು ಸಲಹೆ ನೀಡಿದರು ಮತ್ತು ಸರ್ವ ಸದಸ್ಯರು ಚಪ್ಪಳೆ ಮೂಲಕ  ಸಹಮತಿಯನ್ನುತೋರ್ಪಡಿಸಿದರು.

ಕೋಟ ದೇವಾಡಿಗರ ಸಂಘದ ಅಧ್ಯಕ್ಷ ನರಸಿಂಹ ದೇವಾಡಿಗರು ಸಂಘ-ಸಂಸ್ಥೆಗಳಲ್ಲಿ ಒಗ್ಗಟ್ಟಿನ ಅವಶ್ಯಕತೆಯನ್ನು ಒತ್ತಿ ಹೇಳಿದರು. ಸಮಾರಂಭದಲ್ಲಿ ಉಗ್ರಾಣಿ ರಂಗು ದೇವಾಡಿಗ ಹೊಸಾಳ, ಕೃಷಿಕ ರಘುದೇವಾಡಿಗ ನಲ್ಕುದ್ರು, ಸ್ಯಾಕ್ಸೋಫೋನ್ ವಾದಕ ಭಾಸ್ಕರ ದೇವಾಡಿಗ ಬಾರಕೂರು ಅವರನ್ನು ಸಮ್ಮಾನಿಸಲಾಯಿತು.  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ ಪ್ರಭಾಕರ ದೇವಾಡಿಗ ವರದಿ ವಾಚಿಸಿ, ಪ್ರವೀಣ್ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು.  ಮುಂದಿನ ಕಾರ್ಯಕಾರಿ ಸಮಿತಿಯನ್ನು ಈ ಕೆಳಗಿನಂತೆ ಆರಿಸಲಾಯಿತು.

ಅಧ್ಯಕ್ಷರು                :               ಶ್ರೀ ಬಿ.ಸುರೇಶ್ ದೇವಾಡಿಗ

ಉಪಾಧ್ಯಕ್ಷರು            :               ಶ್ರೀ ಗೋಕುಲ್‍ದಾಸ್ ದೇವಾಡಿಗ

ಪ್ರಧಾನ ಕಾರ್ಯದರ್ಶಿ    :               ಶ್ರೀ ಪ್ರಕಾಶ್ ದೇವಾಡಿಗ, ಮೂಡುಕೇರಿ

ಜೊತೆ ಕಾರ್ಯದರ್ಶಿಗಳು :               ಶ್ರೀ ಹರೀಶ್ ದೇವಾಡಿಗ & ಶ್ರೀ ಪ್ರಕಾಶ್ ದೇವಾಡಿಗ, ಬೆಟ್ಟಿನಮನೆ  

ಕೋಶಾಧಿಕಾರಿ            :               ಶ್ರೀ ಗಣೇಶ್ ದೇವಾಡಿಗ

ಸಂಘಟನಾ ಕಾರ್ಯದರ್ಶಿಗಳು:            ಶ್ರೀ ಗಣೇಶ್ ಸೇರಿಗಾರ್, ಚೌಳಿಕೆರೆ & ಶ್ರೀ ಲತಾಗಣೇಶ್ ದೇವಾಡಿಗ, ಅಜ್ಜಿಮನೆ

ಕಾರ್ಯಕಾರಿ ಸಮಿತಿಯ ಸದಸ್ಯರು:      ಶ್ರೀ ಗಣೇಶ್ ದೇವಾಡಿಗ, ಅಜ್ಜಿಮನೆ

                  ಶ್ರೀ ಸುದರ್ಶನ್ ಸೇರಿಗಾರ್

                  ಶ್ರೀ ಪ್ರಕಾಶ್ ದೇವಾಡಿಗ, ಪಟೇಲರಬೆಟ್ಟು

                  ಶ್ರೀ ರಾಜೀವ್ ದೇವಾಡಿಗ, ಮಂದಾರ್ತಿ

                  ಶ್ರೀ ಗಣೇಶ್ ದೇವಾಡಿಗ, ಬ್ರಹ್ಮಾವರ

                  ಶ್ರೀ ಚಂದ್ರಶೇಖರ್ ದೇವಾಡಿಗ, ಚೌಳಿಕೆರೆ

                  ಶ್ರೀ ವಿನಯ ದೇವಾಡಿಗ, ಬ್ರಹ್ಮಾವರ

                  ಶ್ರೀ ಸಂತೋಷ್ ದೇವಾಡಿಗ, ಹೇರಾಡಿ

                  ಶ್ರೀಮತಿ ಪುಷ್ಪಾಸುರೇಶ್ ದೇವಾಡಿಗ

                  ಶ್ರೀಮತಿ ರೇಖಾಪ್ರಕಾಶ್ ದೇವಾಡಿಗ

                  ಶ್ರೀಮತಿ ಪುಷ್ಪಾಶೇಖರ್ ದೇವಾಡಿಗ

                  ಶ್ರೀಮತಿ ಶಾರದಾಹರೀಶ್ ದೇವಾಡಿಗ

                  ಶ್ರೀಮತಿ ಗೀತಾಶ್ರೀನಿವಾಸ್ ದೇವಾಡಿಗ

                  ಕು|| ಉಮಾ ದೇವಾಡಿಗ

 


Share