ದೇವಾಡಿಗ ಸಮಾಜ ಸೇವಾ ಸಂಘ ( ರಿ ) ತಲ್ಲೂರು, ಉಪ್ಪಿನಕುದ್ರು; 15ನೇ ವಾರ್ಷಿಕ ಮಹಾಸಭೆ | ಸಹಾಯಧನ ವಿತರಣೆ

 

2016: ದೇವಾಡಿಗ ಸಮಾಜ ಸೇವಾ ಸಂಘ ( ರಿ ) ತಲ್ಲೂರು, ಉಪ್ಪಿನಕುದ್ರು ಇವರ ೧೫ನೇ ವರ್ಷದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರುಗಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಮೇಶ್ ದೇವಾಡಿಗ ಉಪ್ಪಿನಕುದ್ರು ಇವರು ವಹಿಸಿದ್ದರು.  ಸಪ್ತಸ್ವರ ಸಹಕಾರಿ ಸಂಘದ ಅಧ್ಯಕ್ಷರಾದ ಎಮ್. ಸಂಜೀವ ದೇವಾಡಿಗ ತಲ್ಲೂರು ಉದ್ಘಾಟಿಸಿದರು.

 ಮುಖ್ಯ ಅತಿಥಿಗಳಾಗಿ ಮೂಕಾಂಬಿಕಾ ರೇಡಿಮೆಂಟ್ಸ್ ನಾಗೂರು ಮಾಲಿಕರಾದ ದಿನೇಶ್ ದೇವಾಡಿಗ, ಬಸವ ದೇವಾಡಿಗ ಉಪ್ಪಿನಕುದ್ರು, [ ನಿರ್ದೇಶಕರು ಸಪ್ತಸ್ವರ ಸಹಕಾರಿ ಸಂಘ ತಲ್ಲೂರು ], ಬಾಬು ದೇವಾಡಿಗ ಹಟ್ಟಿಯಂಗಡಿ, ಸುಧಾಕರ ದೇವಾಡಿಗ , ಸುರೇಶ ದೇವಾಡಿಗ ತಲ್ಲೂರು, ರಮೇಶ ದೇವಾದಿಗ ಉಪ್ಪಿನಕುದ್ರು ಮೊದಲಾದವರು ಉಪಸ್ಥಿತರಿದ್ದರು.

 ಸಂಘದ ಕಾರ್ಯದರ್ಶಿ ಸುಬ್ರಯ್ಯ ದೇವಾಡಿಗ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ದೇವಾಡಿಗ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಿದರು.

 ಈ ಸಂದರ್ಭದಲ್ಲಿ ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕ್ರತ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪುರಸ್ಕ್ರತ, ಶಯದೇವಿಸುತೆ ಕಾವ್ಯನಾಮ ಹೊಂದಿದ ಜ್ಯೋತಿ ಎಸ್. ದೇವಾಡಿಗ ಮರವಂತೆ ಮತ್ತು ವಾದ್ಯ ಕಲೆಯಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಸ್. ಎಮ್. ಗೋಪಾಲ ದೇವಾಡಿಗ ಸೌಕೂರು ಇವರನ್ನು ಅಭಿನಂದಿಸಲಾಯಿತು.

 ಸಂಘದ ಕ್ರೀಡಾ ಕಾರ್ಯದರ್ಶಿ ಮಹೇಶ ದೇವಾಡಿಗ ಹಟ್ಟಿಯಂಗಡಿ ವಂದಿಸಿದರು. ಸಪ್ತಸ್ವರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು.

  ಸಂಘದ ವತಿಯಿಂದ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರಿಗೆ ಐವತ್ತು ಸಾವಿರ ರೂ. ದೇಣಿಗೆ ನೀಡಲಾಯಿತು. ಸಂಘದ ಸದಸ್ಯರಾದ ಚಂದ್ರ ದೇವಾಡಿಗ, ಗಿರಿಜ ದೇವಾಡಿಗ, ಮೂಕಾಂಬಿಕಾ ದೇವಾಡಿಗ ಉಪಸ್ಥಿತರಿದ್ದರು.

ಸಹಾಯಧನ ವಿತರಣೆ

ದೇವಾಡಿಗ ಸಮಾಜ ಸೇವಾ ಸಂಘ ( ರಿ )  ತಲ್ಲೂರು, ಉಪ್ಪಿನಕುದ್ರು ಮತ್ತು ಸಪ್ತಸ್ವರ ಸಹಕಾರಿ ಸಂಘ ತಲ್ಲೂರು ಹಾಗೂ ದಾನಿಗಳ ಸಹಕಾರದೊಂದಿಗೆ ತಲ್ಲೂರಿನಲ್ಲಿ ವಿದ್ಯುತ್ ತಂತಿ ತಗಲಿ ಮರಣ ಹೊಂದಿದ ಮನೋಜ್ ದೇವಾಡಿಗ ಅವರ ತಾಯಿ ಜಯಲಕ್ಷ್ಮೀ ದೇವಾಡಿಗ ಅವರಿಗೆ 31,000 ರೂ. ಚೆಕ್ ನ್ನು ದೇವಾಡಿಗ ಸಂಘದ ಅಧ್ಯಕ್ಷರಾದ ರಮೇಶ ದೇವಾಡಿಗ ಉಪ್ಪಿನಕುದ್ರು ಮತ್ತು ಸಪ್ತಸ್ವರ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗ ತಲ್ಲೂರು ಇವರು ಹಸ್ತಾಂತರಿಸಿದರು.

 ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 


Share