ಕಿಕ್ಕಿರಿದ ಸಭಾಂಗಣದಲ್ಲಿ ದೇವಾಡಿಗ ಸಂಘ ಉಪ್ಪುಂದದ ನೂತನ ಕಾರ್ಯಕಾರಿ ಸಮಿತಿ ಪದಪ್ರಧಾನ; ವಿದ್ಯಾರ್ಥಿವೇತನ ಮತ್ತು ಸನ್ಮಾನಗಳ ಸಮಾರಂಭ

ಉಪ್ಪುಂದ: ದೇವಾಡಿಗ ಸಂಘದ ನೂತನ ಕಾರ್ಯಕಾರಿ ಸಮಿತಿಯ ಪದಪ್ರದಾನ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಇತ್ತೀಚಿಗೆ ಉಪ್ಪುಂದ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಜರುಗಿತು.

ವಿಶ್ವ ತುಳು ಒಕ್ಕೂಟ ಇದರ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇವಾಡಿಗ ಸಂಘ ಮುಂಬೈ ಇದರ ಅಧ್ಯಕ್ಷ ವಾಸು ದೇವಾಡಿಗ ವಿದ್ಯಾನಿಧಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಜನಾರ್ಧನ ದೇವಾಡಿಗರು ಮಾತನಾಡಿ ವಿದ್ಯಾನಿಧಿಗೆ ಹತ್ತು ಲಕ್ಷ ರೂ.ದೇಣಿಗೆಯನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದು, ನಮ್ಮ ಸಮಾಜದ ವಿದ್ಯಾರ್ಥಿಗಳ ಭವಿಷ್ಯತ್ತಿಗಾಗಿ ತಾವುಗಳು ವಿದ್ಯಾನಿಧಿಗೆ ದೇಣಿಗೆಯನ್ನು ನೀಡಿ ಸಹಕರಿಸಬೇಕೇಂದು ಕೋರಿದರು.

 ನಿಕಟಪೂರ್ವಾಧ್ಯಕ್ಷ ಹಿರಿಯಡಕ ಮೋಹನ್‌ದಾಸ್, ಸುರೇಶ್ ಡಿ. ಪಡುಕೋಣೆ ಗೌರವಾಧ್ಯಕ್ಷರು ದೇವಾಡಿಗ ವೆಲ್ ಪೇರ್ ಅಸೋಸಿಯೇಷನ್ ಮುಂಬೈ. ಅಣ್ಣಯ್ಯ ಬಿ ಶೇರಿಗಾರ್ ಮತ್ತು ಶ್ರೀ ಕೆ.ಎನ್. ದೇವಾಡಿಗ ಶುಭಶಂಸನೆ ಗೈದರು. ಅಕ್ಷಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಗೋಪಾಲ ಮೊಲಿ, ದೇವಾಡಿಗ ಸಂಘ ಮುಂಬೈ ಇದರ ಉಪಾಧ್ಯಕ್ಷ ರವಿ.ಎಸ್.ದೇವಾಡಿಗ. ಜೊತೆ ಕಾರ್ಯದರ್ಶಿ ಗಣೇಶ್ ಶೇರಿಗಾರ್ , ನಿವೃತ್ತ ಉಪನ್ಯಾಸಕ ಬಿ. ಹೊನ್ನ ದೇವಾಡಿಗ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ಜಿಪಂ ಮಾಜಿ ಉಪಾಧ್ಯಕ್ಷ ರಾಜುದೇವಾಡಿಗ ತ್ರಾಸಿ, ಅರಣ್ಯ ಇಲಾಖೆಯ ಅಧೀಕ್ಷಕ ರಘುರಾಮ ದೇವಾಡಿಗ, ತಾಪಂ ಸದಸ್ಯೆ ಗೌರಿ ದೇವಾಡಿಗ, ಉದ್ಯಮಿ ಹರೀಶ್ ದೇವಾಡಿಗ, ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷ ನರಸಿಂಹ ದೇವಾಡಿಗ, ಕಾರ್ಯದರ್ಶಿ ಜನಾರ್ದನ ದೇವಾಡಿಗ ಉಪಸ್ಥಿತರಿದ್ದರು.

ಈ ಸಂದರ್ಭ ಸಂಘದ ಅಧ್ಯಕ್ಷ ಬಿ.ಎ.ಮಂಜು ದೇವಾಡಿಗರಿಗೆ ಗೌರವಿಸಿ ಸನ್ಮಾನಿಸಲಾಯಿತು.

ಉಪಾಧ್ಯಕ್ಷ ನಾರಾಯಣರಾಜು ಸ್ವಾಗತಿಸಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ವಂದಿಸಿದರು ಶಿಕ್ಷಕ ಸುಧಾಕರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ ಗಣಹೋಮ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀದುರ್ಗಾಪರಮೇಶ್ವರೀ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು. 


Share