Hiriadka Sangha Celebrated Vardyantyutsava 2015

 

ಹಿರಿಯಡಕ ದೇವಾಡಿಗ ಸಂಘದಲ್ಲಿ ವಿಜೃಂಭಣೆಯ ವರ್ದ್ಯಂತ್ಯುತ್ಸವ ಸಮಾರಂಭದ ಆಚರಣೆ

 

ಕರ್ನಾಟಕ ರಾಜ್ಯ ದೇವಾಡಿಗರ ಸುಧಾರಕ ಸಂಘ (ರಿ.) ಮಂಗಳೂರು, ಉಪಸಂಘ - ಹಿರಿಯಡಕ ಇದರ ವರ್ದ್ಯಂತ್ಯುತ್ಸವವು ದಿನಾಂಕ: 28/ಜೂನ್/2015ನೇ ಭಾನುವಾರ ಸಂಜೆ 6.30ಕ್ಕೆ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಗೋಪಾಲ್ ಸೇರಿಗಾರ್ ರವರು ಅಲಂಕರಿಸಿದ್ದರು. ಮುಖ್ಯ ಅಥಿತಿಗಳಾಗಿ ಬಂಟರ ಸಂಘದ ಅಧ್ಯಕ್ಷರಾದ ಎಂ. ವಿಶ್ವನಾಥ ರೈ, ಮಣಿಪಾಲ ಸಿಂಡಿಕೇಟ್ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ ರಂಜನ ಕೇಳ್ಕರ್, ಉಡುಪಿ ಕಂದಾಯ ನಿರೀಕ್ಷಕರಾದ ಕೆ ಶಿವರಾಮ ದೇವಾಡಿಗ, ಬೊಮ್ಮಾರುಬೆಟ್ಟು ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷರಾದ ಸುರೇಶ್ ನಾಯಕ್, ಕೊಡಿಬೆಟ್ಟು ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷರಾದ ಸಂದ್ಯಾ ಶೆಟ್ಟಿ, ಮಹಿಳಾ ಸಂಘಟನಾ ಅಧ್ಯಕ್ಷೆ ಶ್ರೀಮತಿ ಲಲಿತಾ ಮುದ್ದಣ್ಣ ಇವರುಗಳು ಆಗಮಿಸಿದ್ದರು.
ಕು|| ಶ್ರಾವ್ಯ ಮತ್ತು ಕು|| ಪೂಜಾ ಇವರುಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ರತ್ನಾಕರ ದೇವಾಡಿಗ ಕೊಪ್ಪಲ ಇವರು ಅಥಿತಿಗಳನ್ನು ಹಾರಾರ್ಪಣೆಯೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಗೋಪಾಲಕೃಷ್ಣ ವರದಿಯನ್ನು ಓದಿದರು.
ಸ್ಥಳೀಯ ಪಂಚಾಯತ್ ಚುನಾವಣೇಯಲ್ಲಿ ವಿಜೇತರಾದ ಗೋಪಾಲಕೃಷ್ಣ ದೇವಾಡಿಗ, ಸುಜಾತ ಹಾಗೂ ವಿನಯ ಇವರುಗಳನ್ನು ಸನ್ಮಾನಿಸಿ ಶುಭಹಾರೈಸಲಾಯಿತು.
ಹಾಗು ವಿಶೇಷ ಸೇವೆ ಮತ್ತು ಸಾಧನೆಗಾಗಿ ವಿಠ್ಠಲ ಸೇರಿಗಾರ್, ನರಸಿಂಹ ಸೇರಿಗಾರ್, ಉಡುಪಿ ಕಂದಾಯ ನಿರೀಕ್ಷಕರಾದ ಕೆ ಶಿವರಾಮ ದೇವಾಡಿಗ, ಶಿವÀ ಸೇರಿಗಾರ ಮತ್ತು ಸದಾನಂದ ಸೇರಿಗಾರ ಇವರುಗಳನ್ನು ಸನ್ಮಾನಿಸಲಾಯಿತು.
ಕ್ರೀಡೆ: ವಧ್ರ್ಯಂತ್ಯುತ್ಸವದ ಪ್ರಯುಕ್ತ ನಡೆದ ಕ್ರೀಡೋತ್ಸವದ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ ಶಿವರಾಮ ದೇವಾಡಿಗ ಇವರು ವಿದ್ಯಾರ್ಥಿಗಳು ಸರಕಾರಿ ಉದ್ಯೋಗಳಿಗೂ ಹೆಚ್ಚಿನ ಆಸಕ್ತಿಯನ್ನು ತೋರಬೇಕು, ಈ ಭಾಗದ ಜನರು ಆ ಬಗ್ಗೆ ಗಮನಿಸಬೇಕಾದ ಅವಶ್ಯಕತೆಯನ್ನು ವಿವರಿಸಿದರು, ಇನ್ನೋರ್ವ ಅತಿಥಿ ರಂಜನ ಕೇಳ್ಕರ್ ಮಾತನಾಡಿ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್‍ಗಳಿಂದ ಲಭ್ಯವಿರುವ ವಿವಿಧ ಸೌಲಭ್ಯಗನ್ನು ತಿಳುಹಿಸಿದರು.
ಬಂಟರ ಸಂಘದ ಅಧ್ಯಕ್ಷರಾದ ಎಂ. ವಿಶ್ವನಾಥ ರೈ ಯವರು ಮಾತನಾಡಿ ಬಹಳ ಹಿಂದಿನಿಂದ ತಮ್ಮ ಮತ್ತು ದೇವಾಡಿಗ ಸಮಾಜದ ನಡುವಿನ ಆತ್ಮೀಯ ಸಂಬಂಧವನ್ನು ನೆನಪಿಸಿಕೊಂಡರು ಹಾಗು ಸಂಘದ ಔಚಿತ್ಯಪೂರ್ಣ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಶ್ರೀಮತಿ ಪೂರ್ಣಿಮ ದಿನೇಶ್ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ, ಕುಮಾರ ದೇವಾಡಿಗರು ಬಹುಮಾನ ವಿತರಣೆ ಪಟ್ಟಿ, ಸುಂದರ ಪೆರ್ಣಂಕಿಲ ಹಾಗೂ ಆಶಾ ರಮೇಶ್ ಸನ್ಮಾನ ವಿತರಣಾ ಪಟ್ಟಿಯನ್ನು ವಾಚಿಸಿದರು, ಎಚ್ ಗಣೇಶ್ ಇವರು ವಂದನಾರ್ಪಣೆಗೈದರು. 
ದಾಮೋದರ ಯು, ಸದಾಶಿವ ಪಿ, ನಾರಾಯಣ ಸೇರಿಗಾರ, ರಾಘವೇಂದ್ರ ಜಿ, ದೀನೇಶ್ ಸೇರಿಗಾರ್, ಸಹನಾ ಇವರುಗಳು ಸಹಕರಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ, ಯುವ ಮತ್ತು ಮಹಿಳಾ ಸಂಘಟನೆ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಿತು. ನಂತರ ತುಳುವೆರ ಉಡಲ್, ಜೋಡುಕಲ್ಲು – ಮಂಜೇಶ್ವರ ತಂಡದಿಂದ "ಮದ್ಮೆವೊಂಜಿ ಆಂಡುಗೆತ್ತಾ? ಕಷ್ಠಸುಖ ನನ ಸುರು" ಎಂಬ ತುಳು ಸಾಂಸಾರಿಕ ಹಾಸ್ಯಮಯ ನಾಟಕ ಪ್ರದರ್ಶಿಸಲಾಯಿತು.


Share