ಉಪ್ಪುಂದ; ದೇವಾಡಿಗ ಸಮಾಜ ಸೇವಾ ಸಂಘ(ರಿ) ಇದರ ಮಹಿಳಾ ಸಂಘಟನೆಯ ನೂತನ ಪದಾದಿಕಾರಿಗಳ ಹಾಗೂ ಸಂಘದ ಸಂಘಟನಾ ಕಾರ್ಯದರ್ಶಿಗಳ ಆಯ್ಕೆ

 

ಉಪ್ಪುಂದ : ದೇವಾಡಿಗ ಸಮಾಜ ಸೇವಾ ಸಂಘ(ರಿ.) ಬೈಂದೂರು ವಲಯ ಇದರ ಮಹಿಳಾ ಸಂಘಟನೆಯ ನೂತನ ಪದಾದಿಕಾರಿಗಳ ಹಾಗೂ ಸಂಘದ ಸಂಘಟನಾ ಕಾರ್ಯದರ್ಶಿಗಳ ಆಯ್ಕೆಯನ್ನು ರವಿವಾರದಂದು ನವಮಿ ಕಾಂಪ್ಲೆಕ್ಸ್ ಶಾಲೆಬಾಗಿಲು, ಉಪ್ಪುಂದ ಮಾತೃಶ್ರೀ ಸಬಾಭವನದಲ್ಲಿ ನಡೆಸಲಾಯಿತು.

ಸ೦ಘಟನೆಗೆ ಒತ್ತು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆ೦ದು ಸಮಾರ೦ಭದ ಅಧ್ಯಕ್ಷತೆಯನ್ನು ವಹಿಸಿದ್ದ ಸ೦ಘದ ಅಧ್ಯಕ್ಷರಾದ ಶ್ರೀ ಸತೀಶ್ ಎ೦.ರವರು ಕರೆ ನೀಡಿದರು.

ಸಮಾರಂಭದಲ್ಲಿ ಉಡುಪಿ ಜಿಲ್ಲಾಪಂಚಾಯತ್ ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅದ್ಯಕ್ಶರಾದ ಶ್ರೀಮತಿ ಗೌರಿ ದೇವಾಡಿಗ, ಶ್ರೀ ಗಿರೀಶ್ ಬೈಂದೂರು, ಶ್ರೀ ಮಂಜು ದೇವಾಡಿಗ ಅರೆಹಾಡಿ , ಶ್ರೀ ದಿನೇಶ್ ದೇವಾಡಿಗ , ಶ್ರೀ ಹರೀಶ್ ದೇವಾಡಿಗ, ಶ್ರೀಮತಿ ಸುಶೀಲಾ ದೇವಾಡಿಗ, ಯುವ ಸಾಹಿತಿ ಕುಮಾರಿ ಜ್ಯೋತಿ ದೇವಡಾಡಿಗ ಮರವಂತೆ, ಶ್ರೀಮತಿ ಲಲಿತಾ ದೇವಾಡಿಗ ಉಪಸ್ಥಿತರಿದ್ದರು.

ಖಜಾಂಚಿ ಶ್ರೀ ಮಂಜುನಾಥ ದೇವಾಡಿಗ ಸ್ವಾಗತಿಸಿ, ಶ್ರೀ ಕೃಷ್ಣ ದೇವಾಡಿಗ ವಂದಿಸಿದರು.


Share