ಮೃತ ಅಕ್ಷತಾ ದೇವಾಡಿಗ ಕುಟುಂಬಕ್ಕೆ ಮಂಗಳಾ ಕ್ರೆಡಿಟ್ ಕೋಆಪರೇಟಿವ್ ಬ್ಯಾಂಕ್ ನ ಆರ್ಥಿಕ ನೆರವು

ಬೈಂದೂರು, ಜು.7:ಹೇನ್ ಬೇರಿನ ಮೃತ ಅಕ್ಷತಾ ದೇವಾಡಿಗಳ ಮನೆಗೆ ಮಂಗಳೂರಿನ ಮಂಗಳಾ ಕ್ರೆಡಿಟ್ - ಕೋ- ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ. ಕೆ.ಜೆ. ದೇವಾಡಿಗರು ಮಂಗಳವಾರ ಭೇಟಿ ನೀಡಿ, ಮೃತ ಅಕ್ಷತಾ ಕುಟುಂಬಕ್ಕೆ ಸಾಂತ್ವಾನ ಹೇಳಿ 50,000/ ರೂ ( ಐವತ್ತು ಸಾವಿರ ) ದ ಚೆಕ್ ನ್ನು ಆರ್ಥಿಕ ನೆರವಿನ ರೂಪದಲ್ಲಿ ಶ್ರೀಮತಿ ರಾಧಾ ಇವರಿಗೆ ನೀಡಿದರು.

ಈ ಸಂದರ್ಭದಲ್ಲಿ ಕೇಂದ್ರ ಬ್ಯಾಂಕ್ ನ ಮಹಾಪ್ರಬಂಧಕರಾದ ಶ್ರೀ. ಸಂಜೀವ ಮೊಯ್ಲಿ, ನಿರ್ದೇಶಕರಾದ ಶ್ರೀ. ನರಸಿಂಹ ದೇವಾಡಿಗ ಉಡುಪಿ. ಶ್ರೀ. ನಾರಾಯಣ ದೇವಾಡಿಗ ಕುಂದಾಪುರ, ಉಡುಪಿ ಜಿಲ್ಲಾ ಪಂಚಾಯತ್ ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಗೌರಿ ದೇವಾಡಿಗ, ಬೈಂದೂರು ದೇವಾಡಿಗ ಒಕ್ಕೂಟದ ಅಧ್ಯಕ್ಷರಾದ ಶ್ರೀ. ಸುಬ್ಬ ದೇವಾಡಿಗ, ಸದಸ್ಯರಾದ ಶ್ರೀ.ಎಸ್.ಡಿ.  ಹೇನ್ಬೇರ್, ಶ್ರೀ. ಗುರುಪ್ರಕಾಶ್, ಶ್ರೀಮತಿ ದಾರಮ್ಮ ಹಾಗೂ ಬೈಂದೂರು ಮಂಗಳಾ - ಕೋ- ಆಪರೇಟಿವ್ ಬ್ಯಾಂಕ್ ನ ಮ್ಯಾನೇಜರ್ ಆದ  ಶ್ರೀ. ಸುಭಾಷ್ ದೇವಾಡಿಗ ಮತ್ತು ಬ್ಯಾಂಕ್ ನ ಸಿಬ್ಬಂದಿಗಳಾದ ಪುರುಶೋತ್ತಮ್ ದಾಸ್ ಹಾಗೂ ರಾಘವೇಂದ್ರ ಬೈಂದೂರು ಮೊದಲಾದವರು ಹಾಜರಿದ್ದರು.

 


Share