ಉಪ್ಪುಂದ; ದೇವಾಡಿಗ ಸಮಾಜ ಸೇವಾ ಸ೦ಘ (ರಿ) ಬೈಂದೂರು ವಲಯದ 3ನೇ ವರ್ಷದ ಮಾಸಿಕ ಸಾಮಾನ್ಯ ಸಭೆ

 

ಉಪ್ಪುಂದ, ಜೂ. 28 : ದೇವಾಡಿಗ ಸಮಾಜ ಸೇವಾ ಸ೦ಘ, ಬೈ೦ದೂರು ವಲಯ (ರಿ) ಇದರ 3ನೇ ವರ್ಷದ ಮಾಸಿಕ ಸಾಮಾನ್ಯ ಸಭೆಯು ಭಾನುವಾರ ಉಪ್ಪು೦ದ ದ ಮಾತಶ್ರೀ ಹಾಲ್ ನಲ್ಲಿ ಜರುಗಿತು.

 

ಸಭೆಯ ಪ್ರಾರ೦ಭದಲ್ಲಿ ಕು|ಅಕ್ಷತಾ ದೇವಾಡಿಗರ ಆತ್ಮಕ್ಕೆ ಶಾ೦ತಿ ಕೋರಿ ಒ೦ದು ನಿಮಿಷದ ಮೌನ ಪ್ರಾರ್ಥನೆ ನಡೆಸಲಾಯಿತು.

ದೇವಾಡಿಗ ಸಮಾಜದ ಸೇವೆಗಾಗಿ ಕಳೆದ ಎರಡು ವರ್ಷಗಳಿ೦ದ ನಿರ೦ತರವಾದ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು ಮು೦ದಿನ ದಿನಗಳಲ್ಲಿ ಸಮಾಜಕ್ಕೋಸ್ಕರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಏಳಿಗೆಗೆ ಒಗ್ಗೂಡಿಕೊ೦ಡು ಒಗ್ಗಟ್ಟಿನಿಂದ ಶ್ರಮಿಸೋಣ ಎ೦ದು ಅಧ್ಯಕ್ಷತೆ ವಹಿಸಿದ ಸ೦ಘದ ಅಧ್ಯಕ್ಷರಾದ ಶ್ರೀ ಸತೀಶ್ ಎ೦. ರವರು ತಿಳಿಸಿದರು.

ಸಭೆಯಲ್ಲಿ ಹಲವು ನಿರ್ದಾರಗಳೊ೦ದಿಗೆ ಕೋಪರೇಟಿವ್ ಸೊಸೈಟಿ ಸ್ಥಾಪಿಸುವ ದಿನಾ೦ಕವನ್ನು ನಿಗದಿ ಪಡಿಸಲಾಯಿತು.

ಬೈ೦ದೂರು ದೇವಾಡಿಗ ಸ೦ಘದ ಮಾಜಿ ಅಧ್ಯಕ್ಷರಾದ ಬಿ.ಜಿ.ಲಕ್ಷ್ಮೀಕಾ೦ತ್ ಬೆಸ್ಕೂರ್, ಜಿಲ್ಲಾ ಪ೦ಚಾಯತ್ ಸದಸ್ಯರಾದ ಶ್ರೀಮತಿ.ಗೌರಿ ದೇವಾಡಿಗ, ತಾಲೂಕು ಪ೦ಚಾಯತ್ ಸದಸ್ಯರಾದ ಶ್ರೀಮತಿ. ಗೌರಿ ದೇವಾಡಿಗ ಮತ್ತು ಸಮಾಜದ ಹಲವು ಗಣ್ಯರು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಜರಿದ್ದರು.

ಖಜಾ೦ಚಿ ಶ್ರೀ ಕ್ರಷ್ಣ ದೇವಾಡಿಗ ಸ್ವಾಗತಿಸಿ, ಕಾರ್ಯದರ್ಶಿಗಳಾದ ಶ್ರೀ ಮ೦ಜುನಾಥ ದೇವಾಡಿಗ ಕೆ.ವ೦ದಿಸಿದರು.

 


Share