ಸಪ್ತಸ್ವರ ವಿವಿದೋದ್ದೇಶ ಸಹಕಾರಿ ಸಂಘ ತಲ್ಲೂರು; ವಿದ್ಯಾರ್ಥಿ ವೇತನ ವಿತರಣೆ

ತಲ್ಲೂರು: ಭಾರತೀಯ ಜೀವ ವಿಮಾ ನಿಗಮ ಮಂಗಳೂರು ಇವರ ಶಿಕ್ಷಾ ಸಹಯೋಗ ಯೋಜನೆ ಅನ್ವಯ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಂಘದ ಅಧ್ಯಕ್ಷರಾದ ಎಮ್. ಸಂಜೀವ ದೇವಾಡಿಗ ತಲ್ಲೂರು ವಿತರಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯನಿರ್ವಹಣಾ ಅಧಿಕಾರಿಯಾದ ರವಿ ದೇವಾಡಿಗ ಉಪ್ಪಿನಕುದ್ರು, ನಿರ್ದೇಶಕರಾದ ರಾಜೇಶ ದೇವಾಡಿಗ ತ್ರಾಸಿ, ಸಿಬ್ಬಂದಿಗಳಾದ ವಿಶಾಲ, ಕೃಷ್ಣ ದೇವಾಡಿಗ ಹೆಮ್ಮಾಡಿ ಮತ್ತು  ಸಂಘದ ಸದಸ್ಯರಾದ ಕಿರಣ್ ದೇವಾಡಿಗ ತಲ್ಲೂರು, ಸತೀಶ ದೇವಾಡಿಗ ಹಟ್ಟಿಯಂಗಂಡಿ, ಮಂಜುನಾಥ ದೇವಾಡಿಗ ಹೊಸ್ಕಳಿ ಮತ್ತು ಅರ್ಹ ಫಲಾನುಭವಿಗಳು ಉಪಸ್ಥಿತರಿದ್ದರು.

 


Share