ತಲ್ಲೂರು; ಮಹಾಲಿಂಗ ದೇವಾಡಿಗ ಉಪ್ಪುಂದ ಇವರಿಗೆ ಅಭಿನಂದನೆ

ತಲ್ಲೂರು; ಮೇ೩೦, ೨೦೧೫:   ಸಪ್ತಸ್ವರ ವಿವಿದ್ದೋದ್ದೆಶ ಸಹಕಾರಿ ಸಂಘ ನಿ. (ತಲ್ಲೂರು) ಇವರ ವತಿಯಿಂದ ಮಹಾಲಿಂಗ ದೇವಾಡಿಗ ಉಪ್ಪುಂದ (ಸೀನಿಯರ್ ಮೇನೆಜರ್ ಕಾರ್ಪೊರೇಶನ್ ಬ್ಯಾಂಕ್ ವಡೇರಹೊಬಳಿ ಶಾಖೆ ಕುಂದಾಪುರ) ಇವರಿಗೆ ಕಾರ್ಪೊರೇಶನ್ ಬ್ಯಾಂಕ್‍ನಲ್ಲಿ ಉನ್ನತ ಸಂಸ್ಥೆಯಾದ ದೆಹಲಿಯ “ಕರೇಲೊಬಾಗ್” ಶಾಖೆಗೆ ಮುಖ್ಯ ಪ್ರಬಂಧಕರಾಗಿ (Chief Manager) ಬಡ್ತಿ ಹೊಂದಿದ ಇವರಿಗೆ ಅಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭವನ್ನ ಜೈ ದುರ್ಗಾಮಾತ ಸಭಾಭವನ ತಲ್ಲೂರಿನಲ್ಲಿ ಎರ್ಪಡಿಸಲಾಯಿತು.

 

ಈ ಸಂದರ್ಭದಲ್ಲಿ ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

 

ಅವರ ಸಾಧನೆಗೆ ಸ್ಪೂರ್ತಿಯಾದ ಅವರ ಧರ್ಮ ಪತ್ನಿಯಾದ ರಾಜೇಶ್ವರಿ ದೇವಾಡಿಗ ರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನ ಸಪ್ತಸ್ವರ ವಿವಿದ್ದೋದ್ದೆಶ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗ ತಲ್ಲೂರು ವಹಿಸಿದ್ದರು,

 

ಸಭೆಗೆ ಮುಖ್ಯ ಅತಥಿಗಳಾಗಿ ರಘುರಾಮ್ ಉಡುಪ ಕೋಟೇಶ್ವರ (ಉಡುಪ ಟ್ಯೂಷನ್ ಸೆಂಟರ್ ಕೋಟೇಶ್ವರ), ರಮೇಶ್ ದೇವಾಡಿಗ ವಂಡ್ಸೆ (ಉದ್ಯಮಿ ಬೆಂಗಳೂರು), ಮಂಜು ದೇವಾಡಿಗ ಸುಳ್ಸೆ (ಕಾರ್ಯದರ್ಶಿ ದೇವಾಡಿಗ ಸಂಘ ಹೆಮ್ಮಾಡಿ) ಮೊದಲಾದವರು ಉಪಸ್ಥಿತರಿದ್ದರು.

 

ಮಹಾಲಿಂಗ ದೇವಾಡಿಗ ಪರಿಚಯವನ್ನ ಸಪ್ತಸ್ವರ ಸ್ವರ-ಸಿಂಚನ  ಶ್ರೀ ಸ್ವಸಹಾಯ ಸಂಘದ ಅಧ್ಯಕ್ಷರಾದ ಸುಮಾ ದೇವಾಡಿಗ ಹೆಮ್ಮಾಡಿ ವಾಚಿಸಿದರು. ಸಪ್ತಸ್ವರ ಸಂಘದ ನಿರ್ದೆಶಕರಾದ ರಾಘವೇಂದ್ರ ದೇವಾಡಿಗ ಹೊಸ್ಕಳಿ, ಮಹಾಲಿಂಗ ದೇವಾಡಿಗ ಕಾರ್ಯಧ್ಯಕ್ಷತೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಸಪ್ತಸ್ವರ ವಿವಿದ್ದೋದ್ದೆಶ ಸಹಕಾರಿ ಸಂಘದ ಕಾರ್ಯನಿರ್ವಹಣ ಅಧಿಕಾರಿಯಾದ ರವಿ ದೇವಾಡಿಗ ಉಪ್ಪಿನಕುದ್ರು ಸ್ವಾಗತಿಸಿ ನಿರೂಪಿಸಿದರು. ಮಹೇಶ ದೇವಾಡಿಗ ಹಟ್ಟಿಯಂಗಡಿ ವಂದಿಸಿದರು.

ಈ ಸಂಧರ್ಭದಲ್ಲಿ ಸಪ್ತಸ್ವರ ವಿವಿದ್ದೋದ್ದೆಶ ಸಹಕಾರಿ ಸಂಘದ ನಿರ್ದೆಶಕರಾದ ರಾಜೇಶ ದೇವಾಡಿಗ ತ್ರಾಸಿ, ಚಂದ್ರ ದೇವಾಡಿಗ ಹರ್ಕೂರು, ಸಿಬ್ಬಂದಿಯಾದ ಸುಶೀಲ ದೇವಾಡಿಗ, ದೇವಾಡಿಗ ಸಂಘ ತಲ್ಲೂರು ಮಹಿಳಾ ವಿಭಾಗದ ಅಧ್ಯಕ್ಷರಾದ ಜಯಲಕ್ಷ್ಮಿ ದೇವಾಡಿಗ, ದೇವಾಡಿಗ ಸಂಘದ ಕಾರ್ಯದರ್ಶಿಯಾದ ಸುಬ್ರಮಣ್ಯ ದೇವಾಡಿಗ, ಅಧ್ಯಪಕರಾದ ಗಣೇಶ್ ದೇವಾಡಿಗ, ಸಪ್ತಸ್ವರ ವಿವಿದ್ದೋದ್ದೆಶ ಸಹಕಾರಿ ಸಂಘದ ಸದಸ್ಯರಾದ ಶಾರದ ದೇವಾಡಿಗ ನಾಗೂರು, ಕಿರಣ ದೇವಾಡಿಗ ತಲ್ಲೂರು,  ರವೀಂದ್ರ ದೇವಾಡಿಗ ಕನ್ಯಾನ, ಪಾರ್ವತಿ ದೇವಾಡಿಗ ತಲ್ಲೂರು, ನಾರಾಯಣ ದೇವಾಡಿಗ ಉಪ್ಪಿನಕುದ್ರು, ತಿಮ್ಮ ದೇವಾಡಿಗ ಹಟ್ಟಿಯಂಗಡಿ, ಮತ್ತು ಹಿರಿಯರಾದ ಮುಕಾಂಬು ದೇವಾಡಿಗ, ಮೊದಲಾದವರು ಉಪಸ್ಥಿತರಿದ್ದರು.

 


Share