ದೇವಾಡಿಗ ಸಂಘ ಮುಂಬೈಯ ಮಹಿಳಾ ವಿಭಾಗದವರಿಂದ ದೇವಾಡಿಗ ಸೆಂಟರ್ ದಾದರ್ ನಲ್ಲಿ ಸಂಭ್ರಮದ ಶಾರದಾ ಪೂಜೆಯ ಆಚರಣೆ

 

ಮುಂಬೈ: ದೇವಾಡಿಗ ಸಂಘ ಮುಔಬೈಯ ಮಹಿಳಾ ವಿಭಾಗದವರಿಔದದಾದರ್ ಪೂರ್ವದ ದಾದರ್ ಸೆಔಟರ್ ನಲ್ಲಿ ಸೇಪ್ಟೇಂಬರ್ 28 ರಂದು ಶಾರದಾ ಪೂಜೆಯು ವಿಜ್ರಔಭಣೆಯಿಂದ ನೆರೆವೇರಿತು.


ಸಂಘದ ಅಧ್ಯಕ್ಷರಾದ ರವಿ ಎಸ್ ದೇವಾಡಿಗರು ಪ್ರಾರಂಭದಲ್ಲಿ ಪೂಜೆ ನೆರೆವೇರಿಸಿ ಜಗದಂಬೆ ಶ್ರೀ ಶಾರದಾ ಮಾತೆಯ ಅನುಗ್ರಹ ಎಲ್ಲರ ಮೇಲಿರೆಲಿ ಎಔದು ಶುಭ ಹಾರೈಸಿದರು. ಮಹಿಳಾ ವಿಭಾಗದದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಮೊಯಿಲಿಯವರು ಸಂಘದ ಎಲ್ಲಾ ಕಾರ್ಯಕ್ರಮದಲ್ಲಿ ಮಹಿಳೆಯರು ಭಾಗಿಯಾಗಬೇಕೇಂದು ವಿನಂತಿಸಿದರು.


ದೇವಿಯ ಆರತಿಯ ಬಳಿಕ ಹಿರಿಯ ಮುತ್ತೈದೆಯರಾದ ಶ್ರೀಮತಿ ಮಾಲತಿ ಮೊಯಿಲಿ,ಶ್ರೀಮತಿ ಭಾರತಿ ನಿಟ್ಟೇಕರ್, ಪ್ರಫುಲ್ಲ ದೇವಾಡಿಗ, ಪ್ರೇಮ ಮೋಹನ್ ದಾಸ್, ಲಕ್ಷ್ಮಿ ದೇವಾಡಿಗ,ಸರೋಜಿನಿ ದೇವಾಡಿಗ, ಕುಸುಮ ದೇವಾಡಿಗ , ಧನವಂತಿ ದೇವಾಡಿಗ ಪೂತ್ತೂರು, ಸರೋಜಿನಿ ದೇವಾಡಿಗ ಜೋಗೇಶ್ವರಿ ಇವರುಗಳನ್ನು ಅರಶಿನ ಕುಂಕುಮ, ಖಣ, ಫಲಪುಷ್ಪ ನೀಡಿ ಗೌರವಿಸಲಾಯಿತು.
ಶಾರದಾ ಪೂಜೆ ಮತ್ತು ಗೌರವಾರ್ಪಣೇ ಕಾರ್ಯಕ್ರಮ ಯಶಸ್ವಿಯಾಗಲು ಶ್ರೀಮತಿ ವನಿತಾ ರವಿ ದೇವಾಡಿಗ, ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಮೊಯಿಲಿ, ನಿಕಟಪೂರ್ವ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಭಾರತಿ ನಿಟ್ಟೇಕರ್, ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಫುಲ್ಲ ದೇವಾಡಿಗ, ಕ್ರೀಡಾ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಮ್ ದೇವಾಡಿಗ, ಶ್ರೀಮತಿ ಕಲಾ ಜಿ ಶೇರಿಗಾರ್, ಶ್ರೀಮತಿ ಗೀತ ದೇವಾಡಿಗ ಅಸಲ್ಫ, ಶ್ರೀಮತಿ ಪ್ರಜ್ಞಾ ಮೋಹನ್ ದಾಸ್, ಶ್ರೀಮತಿ ಶಾಔತಾ ನಾಗರಾಜ್ ದೇವಾಡಿಗ, ಬೊರಿವಿಲಿ ಪ್ರದೇಶಿಕ ಸಮನ್ವಯ ಸಮಿತಿಯ ಮಹಿಳಾ ಸದಸ್ಯರು , ಗೀತ ದೇವಾಡಿಗ , ಮಮತಾ ದೇವಾಡಿಗ , ಶ್ರೀಮತಿ ಸುಜಯ ದೇವಾಡಿಗ, ಪ್ರತಿಮಾ ಮೊಯಿಲಿ, ಯುವ ವಿಭಾಗದ ಪ್ರದೀಪ್ ದೇವಾಡಿಗ , ರೋಹಿತ್ ದೇವಾಡಿಗ , ಹರೀಶ್ ದೇವಾಡಿಗ, ನಿತೀಶ್ ದೇವಾಡಿಗ ಸಹಕರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ, ನಿಕಟ ಪೂರ್ವ ಅಧ್ಯಕ್ಷ ಶ್ರೀ ವಾಸು ದೇವಾಡಿಗ, ಮಾಜಿ ಅಧ್ಯಕ್ಷ ಶ್ರೀ ಮೋಹನ್ ದಾಸ್ ಮತ್ತು ಕೆ ಕೆ ಮೋಹನ್ ದಾಸ್, ಶ್ರೀಮತಿ ಆಂಬಿಕ ಜೆ ದೇವಾಡಿಗ ಉಪಸ್ಥಿತರಿದ್ದರು.


ಅತ್ಯಂತ ಭಕ್ತಿ ಪೂರ್ವಕವಾಗಿ ಶ್ರೀ ದೇವಿಯ ಭಜನೆಯನ್ನು ಮಹಿಳಾ ಸದಸ್ಯರು ಮತ್ತು ಶ್ರೀ ಏಕನಾಥೇಶ್ವರೀ ಭಕ್ತಿ ಸಂಗಮದ ಶ್ರೀ ಶಂಕರ್ ಮೊಯಿಲಿ ಸಾಕಿನಾಕಾ, ಶ್ರೀ ದಯಾನಂದ ದೇವಾಡಿಗ ನೆರೂಲ್ ಮತ್ತು ಶ್ರೀ ಗಣೇಶ್ ಶೇರಿಗಾರ್ ವಾಶಿ ರವರು ಹಾಡಿದರು. ನಂತರ ಬಂದಂತಹ ಮಹಿಳಾ ಸದಸ್ಯರು ಕೋಲಾಟ ಗರ್ಭ ನ್ರತ್ಯದಲ್ಲಿ ಭಾಗಿಯಾದರು. ಮಹಿಳಾ ಉಪಕಾರ್ಯಾಧ್ಯಕ್ಷೆಯರಾದ ಶ್ರೀಮತಿ ಸುರೇಖ ದೇವಾಡಿಗ, ಶ್ರೀಮತಿ ರಂಜಿನಿ ಮೊಯಿಲಿ, ಮಹಿಳಾ ಜೊತೆ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಶೇರಿಗಾರ್ ಉಪಸ್ಥಿತರಿದ್ದು ಎಲ್ಲಾ ಪೂಜಾ ತಯಾರಿಯನ್ನು ಮಾಡಿ ಸಹ಼ಕರಿಸಿದರು.
ಕೊನೆಯಲ್ಲಿ ಮಹಿಳಾ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದಯಾನಂದ್ ದೇವಾಡಿಗ ಧನ್ಯವಾದಗೈದರು.

 


Share