"ಸೂಪರ್ ಮಿನಿಟ್" - Super Minute! organised by Tallur-Uppinakudru Sangha

ದೇವಾಡಿಗರ ಸಮಾಜ ಸೇವಾ ಸಂಘ(ರಿ) ತಲ್ಲೂರು ಉಪ್ಪಿನಕುದ್ರು

ಇವರು ಶಾಲಾ ಮಕ್ಕಳಿಗೆ ಸಮಯ ಪ್ರಜ್ಞೆಯನ್ನು ಮೂಡಿಸುವ ಸಲುವಾಗಿ "ಸೂಪರ್ ಮಿನಿಟ್" ತರಬೇತಿ ಕಾರ್ಯಕ್ರಮವನ್ನು ಸಪ್ತಸ್ವರ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರೆ, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಮಹಾಲಿಂಗ ದೇವಾಡಿಗ ಉಪ್ಪುಂದ(ಸಿನಿಯರ್ ಮ್ಯಾನೇಜರ್ ಕಾರ್ಪೊರೇಷನ್ ಬ್ಯಾಂಕ್ ವಡೇರ್ ಹೋಬಳಿ ಕುಂದಾಪುರ), ಜಗದೀಶ ದೇವಾಡಿಗ ಆಲೂರು(ಉದ್ಯಮಿ ಬೆಂಗಳೂರು), ಶಿಕ್ಷಕರಾದ ಗಣೇಶ ದೇವಾಡಿಗ ವಂಡ್ಸೆ, ಮತ್ತು ಮಹೇಂದ್ರ ದೇವಾಡಿಗ ಹೆಮ್ಮಾಡಿ, ಗೋಪಾಲ ದೇವಾಡಿಗ ತಲ್ಲೂರು(ಜಿ.ಕೆ. ಟ್ರೇಡರ್ಸ್ ತಲ್ಲೂರು), ದೇವಾಡಿಗ ಸಮಾಜದ ಮಹಿಳಾ ಸಂಘದ ಅಧ್ಯಕ್ಷರಾದ ಜಯಲಕ್ಷ್ಮೀ ದೇವಾಡಿಗ ತಲ್ಲೂರು, ಮೊದಲಾದವರು “ನೆಟ್” ಜೋಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಜಾಲನೆ ನೀಡಿದರೆ, ಸಂಘದ ಅಧ್ಯಕ್ಷರಾದ ರಮೇಶ್ ದೇವಾಡಿಗ ಉಪ್ಪಿನಕುದ್ರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಸಪ್ತಸ್ವರ ವಿವಿದೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ರವಿ ದೇವಾಡಿಗ ಉಪ್ಪಿನಕುದ್ರು ಇವರು ನಿರೂಪಣೆ ಮಾಡಿ ವಂದಿಸಿದರು.


Share