ವಿಜೇಶ್ ದೇವಾಡಿಗ ಮಂಗಳಾದೇವಿ - ಎಲ್ಲರ ನಲ್ಮೆಯ ಉತ್ತಮ ಶೈಲಿಯ ನಿರೂಪಕ ಹಾಗೂ ಬಹುಮುಖ ಪ್ರತಿಭೆಯ ಯುವ ಸಾಧಕ

ಮಂಗಳೂರು: ವಿಜೇಶ್ ದೇವಾಡಿಗ ಮಂಗಳಾದೇವಿ ಇವರು ಮಾಧವ ದೇವಾಡಿಗ ಹಾಗೂ ಯೋಗಿನಿ ದೇವಾಡಿಗ ಇವರ ಮಗನಾಗಿ ಮಂಗಳೂರಿನ ಮಂಗಳಾದೇವಿಯಲ್ಲಿ ಜನಿಸಿ ವಿದ್ಯೆಯೊಂದಿಗೆ ಕಲೆಯ ಕಡೆ ಆಸಕ್ತಿಯನ್ನು ಬೆಳೆಸಿಕೊಂಡ ಇವರು ಕಲೆ , ಯಕ್ಷಗಾನ, ನಾಟಕ,ಸಾಹಿತ್ಯ, ನಿರೂಪಣೆಯಲ್ಲಿ ತನ್ನದೇ ಛಾಪು ಇಟ್ಟುಕೊಂಡವರು.

ಅಜಂತಾ ಚಿತ್ರಕಲಾ ಶಾಲೆಯಲ್ಲಿ ಚಿತ್ರಕಲೆಯನ್ನ ಅಭ್ಯಸಿಸಿದರು. ಬಾಲ್ಯದಿಂದಲೂ ನಟನೆಯಲ್ಲಿ ಇರುವ ಅಸಕ್ತಿಯೆಂದ ಸ್ವತಃ ನಟನೆಯನ್ನು ಅಭ್ಯಸಿಸಿ ನಂತರ ಮಂಗಳೂರಿನ ಹೆಸರಾಂತ ಕಲಾವಿದ ಶ್ರೀ ಗಂಗಾಧರ್ ಶೆಟ್ಟಿ ಯವರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸಿದರು. ಅಲ್ಲದೆ ಸ್ವತಃ ನಾಟಕ ಬೀದಿನಟಕ, ಮುಖಾಭಿನಯಗಳನ್ನು ರಚಿಸಿ ತಾವೇ ನಟಿಸಿ ನಿರ್ದೇಶಿಸಿ ಅಲ್ಲದೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಲಿಸಿದರು.

 

ವಾಣಿಜ್ಯ ಪದವೀಧರರಾದ ಇವರು ಕಾಲೇಜು ದಿನಗಳಲ್ಲಿ ಸಾಹಿತ್ಯದ ಮೇಲಿನ ಆಸಕ್ತಿಯಿಂದ ಕಬ್ಬಿನಾಲೆ ಶ್ರೀ ಬಾಲಕೃಷ್ಣ ಭಾರದ್ವಾಜ್ ರಿಂದ  ಪ್ರೇರೇಪಣೆಗೊಂಡು ಗೀತಾ ರಚನೆಯಲ್ಲಿ ತೊಡಗಿಸಿಕೊಂಡರು. ನಂತರ ಚಿತ್ರರಂಗದಲ್ಲಿ ದೊರೆತ ಅವಕಾಶವನ್ನು ಬಳಸಿಕೊಂಡು ನಮ್ಮ ಕುಸಲ್ಡ್ ಜವನೇರ್ ತುಳು ಸಿನಿಮಾ , ಚೌಕಿ ಕನ್ನಡ ಸಿನಿಮಾಕ್ಕೆ ಸಾಹಿತ್ಯ ನೀಡಿದ್ದಾರೆ ಚೌಕಿ ಚಿತ್ರದ ಸಾಹಿತ್ಯಕ್ಕೆ ಕನ್ನಡದ ಪ್ರಸಿದ್ದ ಗಾಯಕ ರಾಜೇಶ್ ಕೃಷ್ಣನ್ ಧ್ವನಿ ನೀಡಿದ್ದಾರೆ. ಅನೇಕ ಕ್ಷೇತ್ರದ ಭಕ್ತಿಗೀತೆಗಳನ್ನು ರಚಿಸಿದ್ದಾರೆ ಅಲ್ಲದೆ ಇನ್ನು ಕೆಲವು ಚಲನಚಿತ್ರಗಳಿಗೆ ಸಾಹಿತ್ಯ ರಚಿಸುವ ಅವಕಾಶ ಪಡೆದಿದ್ದಾರೆ.

ಯಕ್ಷಗಾನದ ಪ್ರೀತಿಯಿಂದ ಶೀ ಜಯಕರ್ ಪಂಡಿತ್ ಇವರಿಂದ ಯಕ್ಷಗಾನದ ನಾಟ್ಯವನ್ನು ಅಭ್ಯಸಿಸಿ ಯಕ್ಷಗಾನ ಹವ್ಯಾಸಿ ಕಲಾವಿದರಾಗಿ ಅನೇಕ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.

ನಿರೂಪಣೆಯಲ್ಲೂ ತನ್ನದೇ ಶೈಲಿಯನ್ನು ರೂಪಿಸಿಕೊಂಡು ಹೊರರಾಜ್ಯಗಳು ಸೇರಿದಂತೆ 350 ಹೆಚ್ಚು ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಅನೇಕ ಸಂಘಸಂಸ್ಥೆಗಳು ಗೌರವಿಸಿದೆ . Oxford ಗ್ಲೋಬಲ್ ಸ್ಕೂಲ್ ಮಂಗಳೂರು ನೀಡುವ ಸಾಧಕ ಸನ್ಮಾನವನ್ನು ಪಡೆದಿದ್ದಾರೆ . 

ವೃತ್ತಿಯಲ್ಲಿ ಖಾಸಗಿ ಸಂಸ್ಥೆಯ ಪ್ರಬಂಧಕರಾಗಿದ್ದು ಅನೇಕ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಇವರು ದೇವಾಡಿಗ ಯುವ ಸಂಘಟನೆ ಮಂಗಳೂರು ಇದರ ಕಾರ್ಯದರ್ಶಿಯೂ ಆಗಿದ್ದರೆ. ವ್ಯಕ್ತಿ ಮರೆಯಾದರು ವ್ಯಕ್ತಿತ್ವವನ್ನು ಸ್ಮರಿಸುವಂತೆ ಸಾಧನೆ ಮಾಡಬೇಕು ಎನ್ನವ ದ್ಯೇಯದೊಂದಿಗೆ ಕಲಾಕ್ಷೇತ್ರವನ್ನು ಆರಾಧಿಸುತ್ತಾ ಬಂದಿದ್ದಾರೆ.

ಇವರಿಗೆ ದೇವಾಡಿಗ.ಕಾಮ್ ಓದುಗಾರರ ಅಭಿನಂದನೆ ಹಾಗೂ ಶುಭಹಾರೈಕೆಗಳು.


Share