MScಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಶ್ರೀಷ್ಮಲ್ ಭವ್ಯ ಅವರಿಗೆ ಚಿನ್ನದ ಪದಕ ಹಾಗೂ ಐದು ನಗದು ಪುರಸ್ಕಾರ

ಕುಮಾರಿ ಶ್ರೀಷ್ಮಲ್ ಭವ್ಯ ಕೋಟೇಶ್ವರದ ಬೀಜಾಡಿ ಗ್ರಾಮದ ಹೂಸಮನೆ ಮಹಾಬಲ ದೇವಾಡಿಗ ಮತ್ತು ಶ್ರೀಮತಿ ಲೈಲಾ ದಂಪತಿಗಳಾ ಮಗಳು. ತಂದೆ ಸ್ಥಳೀಯ ಮೆಡಿಕಲ್ ನಲ್ಲಿ ಕೆಲಸ ತಾಯಿ ಕಾಲೇಜು ಉಪನ್ಯಾಸಕಿ ಯಾಗಿದ್ದಾರೆ.  ಪ್ರಾಥಮಿಕ. ಪ್ರೌಢ ಹಾಗೂ ಪಿಯುಸಿ ಶಿಕ್ಷಣ ವನ್ನು ಕೋಟೇಶ್ವರ ಪದವಿ ಪೂರ್ವ ಕಾಲೇಜಿನ ನಲ್ಲಿ ಮುಗಿಸಿದ್ದು ಬಿ.ಎಸ್ಸಿ ಯನ್ನು ಕುಂದಾಪುರದ ಭಂಡಾಕರ್ಸ ಕಾಲೇನಲ್ಲಿ ಪಡೆದು ಸ್ನಾತಕೋತರ ವಿದ್ಯಾಬಾಸ ಪ್ರಸ್ತುತ ಮಂಗಳೂರು ವಿಶ್ವ ವಿಧ್ಯಾನಿಲಯ ಮಂಗಳಗಂಗೋತ್ರೀಯಲ್ಲಿ ನಡೆಸುತ್ತಿದ್ದಾರೆ

ಈ ಸಾರಿಯ MSc.Physics ನಲ್ಲಿ  ಪ್ರಥಮ ಸ್ಥಾನ ಪಡೆದು ಘಟಿಕೋತ್ಸವದಲ್ಲಿ ಕೊಡಲ್ಪಡುವ ಚಿನ್ನದ ಪದಕ ಹಾಗೂ ಐದು ನಗದು ಪುರಸ್ಕಾರ ವನ್ನು ಪಡೆದಿರುತ್ತಾರೆ.  ಈವರೆಗಿನ ಎಲ್ಲಾ ತರಗತಿಗಳಲ್ಲಿಯೂ ಪ್ರಥಮ ಸ್ಥಾನಿಯಾಗಿ ಕೇಂದ್ರ ದ Science & Technology Department New Delhi ಇವರಿಂದ ನಾಲ್ಕು ಲಕ್ಷ ರೂ INSPIRE AWARD ಹಾಗೂ Research Project Award ಗಳಿಸಿದ್ದಾರೆ. ಹಾಗೂ  ಗುಜರಾತಿನಿಂದ ವಿದ್ಯಾಶ್ರೀ ಅವಾರ್ಡ್,  ಕೋಟೀಲಿಂಗೆಶ್ವರ ದೇವಸ್ಥಾನದ ವತಿಯಿಂದ ಮೂರು ಪ್ರತಿಭಾ ಪುರಸ್ಕಾರ ಹಾಗೂ Dr.N.R.Acharya Memorial Trust Koteswara ಇವರಿಂದ Merit scholarship ನ್ನು ಪಡೆದಿದ್ದಾರೆ.

ಬಹುಮುಖ ಪ್ರತಿಭೆ ಈ ತರುಣಿ  ಶ್ಯೆಕ್ಷಣಿಕ ಕ್ಷೇತ್ರ ವಲ್ಲದೆ ಚಿತ್ರ ಕಲೆ, ಕಾರ್ಟನ್ ಕವನ, ಭಾಷಣ, ಪ್ರಬಂದ, ಚರ್ಚಾಸ್ಪರ್ದೆ,ಪ್ಲವರ ಡೆಕೋರೆಟೇಶನ್ ,ರಂಗೂಲಿ,ಮುಂತಾದ ಸ್ಪರ್ಧೆಯಲ್ಲಿ ಅನೇಕ ಬಹುಮಾನ ಪಡೆದು ಕೊಂಡಿದ್ದಾರೆ.      ಈ ನಮ್ಮ ಸಮಾಜದ  ಹೆಮ್ಮೆಯ ಹೆಣ್ಣು ಮಗಳಿಗೆ  ದೇವರ್ಉ ಆರೋಗ್ಯ, ಆಯೂಷ್ಯ, ಸಿರಿ, ಸಂಪತ್ತನ್ನು ಕೊಟ್ಟು ಹರಸಲಿ ಎಂದು ನಾವೆಲ್ಲ ಹಾರೈಸುತ್ತೇವೆ.

 

 


Share