ನಾ ಕಂಡ ರಜನೀಶ್!!

ನಾನು ಕಂಡ ರಜನೀಶ್ಈಗ ನಾನು ಹೇಳ ಹೊರಟಿರುವುದು ನಮ್ಮ ನೆಚ್ಚಿನ ಚಿತ್ರನಟ ಮತ್ತು ನಿರ್ದೇಶಕ ರಜನೀಶ್ ದೇವಾಡಿಗ ರವರ ಬಗ್ಗೆ

ರಜನೀಶ್ ಎಂಬ ಪ್ರತಿಭೆ ಚಿತ್ರರಂಗದ ಕನಸನ್ನು ಕಂಡು ಅದರ ಬೆನ್ನು ಹತ್ತಿ ಹೊರಟ ಛಲವಾದಿ. ಬಾಲ್ಯವನ್ನು ಬಹಳ ಬಡತನದಿಂದ ಕಳೆದು, ಕಷ್ಟದ ದಿನಗಳಲ್ಲಿ ತನಗಿಷ್ಟದ ಕನಸನ್ನು ಕಾಣುತ್ತಾ ಚಿತ್ರರಂಗದಲ್ಲಿ ತನ್ನ ಪ್ರತಿಭೆಗೆ ಅವಕಾಶವನ್ನು ಅರಸುತ್ತ ಬರಿಗೈಯಲ್ಲಿ ದೂರದ ಗಾಂಧಿನಗರಕ್ಕೆ ಕಾಲಿಟ್ಟಿವರು. ಅವಕಾಶ ಇಲ್ಲದೆ ಇದ್ದರು ಇವರಲ್ಲಿ ಪ್ರತಿಭೆ ಹಾಗೂ ಅದನ್ನು ಈಡೇರಿಸುವ ಛಲವಿತ್ತು. ಮೊದಲಿಗೆ ಸಣ್ಣ ಸಣ್ಣ ಜಾಹೀರಾತುಗಳಲ್ಲಿ ಕಾಣಿಸಿಕೊಂಡು, ತದನಂತರ ನಾಟಕ ರಂಗದಲ್ಲಿ ಅಭಿನಯಿಸಿದವರು. ತದನಂತರ ಸುವರ್ಣ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ “ಪ್ರೀತಿಯಿಂದ” ಧಾರಾವಾಹಿಯಲ್ಲಿ ಖಳನಾಯಕನ ಪಾತ್ರವನ್ನು “Zee Kannada” ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಪಾಂಡುರಂಗ ವಿಠಲ ಧಾರಾವಾಹಿಯಲ್ಲಿ ಭಿನ್ನ ರೀತಿಯ ಪಾತ್ರವನ್ನು ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದವರು.

ಹೀಗೆ 8 ವರ್ಷಗಳ ಕಾಲ ಗಾಂಧಿನಗರದಲ್ಲಿ ಹಲವಾರು ನಿರ್ದೇಶಕರಲ್ಲಿ ಅವಕಾಶಕ್ಕಾಗಿ ಅಂಗಲಾಚುತ್ತಾ ತನಗೆ ದೊರೆತ ಪಾತ್ರಕ್ಕೆ ತೃಪ್ತಿಗೊಂಡು ಆ ಪಾತ್ರಕ್ಕೆ ಜೀವ ತುಂಬಿ ಸಿಹಿ ಕಹಿ ಎರಡನ್ನು ಒಂದೇ ರೀತಿಯಾಗಿ ಸ್ವೀಕರಿಸಿ ಬಾನೆತ್ತರದ ಕನಸನ್ನು ಕಾಣುತ್ತ ಕಷ್ಟದಲ್ಲಿ ತನ್ನಿಷ್ಟದ ಬದುಕನ್ನು ನಡೆಸಿದವರು. ತಾಳಿದವನು ಬಾಳಿಯಾನು ಎನ್ನುವ ಯುಕ್ತಯಂತೆ  ರಜನೀಶ್ ರವರಿಗೇ ಫಲ ದೊರಕಿ ಇಂದು ಅವರು 3 ಚಿತ್ರಗಳಲ್ಲಿ ನಾಯಕ ನಟನಾಗಿ ಹಾಗೂ ಒಂದು ತುಳು ಚಿತ್ರದ ನಿರ್ದೇಶಕರಾಗಿಯೂ ಕೆಲಸ ಮಾಡಿರುತ್ತಾರೆ. ಹಾಗೆಯೇ ಹಲವು ಕನ್ನಡ ಚಿತ್ರಗಳಲ್ಲಿ ಉತ್ತಮ ಪಾತ್ರಗಳಲ್ಲಿ ಅಭಿನಯಿಸಿದ್ದು, ಖ್ಯಾತ ನಿರ್ದೇಶಕರ ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿರುತ್ತಾರೆ.

ರಜನೀಶ್ ಅವರು ಈಗಾಗಲೇ  39 ಸ್ಟೋರಿ ಯನ್ನು ರೆಡಿ ಮಾಡಿ ಇಟ್ಟು ಕೊಂಡಿದ್ದಾರೆ, ಲೊ ಬಜೆಟ್ ನಲ್ಲಿ  ಸಿನಿಮಾ ಮಾಡಿ  ಫಿಲಂ ಗೆಲ್ಲಿಸ ಬಹುದು ಎನ್ನುತ್ತಾರೆ .  ಇವರನ್ನು  ಗೆಲುವಿನ  ನಿರ್ದೇಶಕ ಅಂತಲೂ  ಕರೆಯಬಹುದು,

ರಜನೀಶ್ ರವರು ಒಬ್ಬ ಒಳ್ಳೆಯ ನಟ, ಲೇಖಕ, ಚಿತ್ರಕಲಾವಿದ, ಉತ್ತಮ ಆಟಗಾರ ಹಾಗೆಯೇ ಒಳ್ಳೆಯ ಸ್ನೇಹಿತ, ತನ್ನೊಂದಿಗೆ ಹಲವು ಯುವ ಪ್ರತಿಭೆಗಳಿಗೆ ಅವಕಾಶವನ್ನು ನೀಡಿದವರು ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಬದುಕುವ ಇವರು ಒಬ್ಬ ಸಹೃದಯಿ, ತನ್ನಲ್ಲಿ ಕಷ್ಟಗಳನ್ನು ಎಲ್ಲೂ ತೋರ್ಪಡಿಸದೇ ಸದಾ ಹಸನ್ಮುಖಿಯಾಗಿರುವ ಇವರು ಎಲ್ಲರ ಬದುಕಿಗೂ ಒಂದು ಪ್ರೇರಣೆ.  ರಜನೀಶ್ ರವರು ಚಿತ್ರರಂಗದಲ್ಲಿ ಇಂದು ಎಲ್ಲರಿಗೂ ಚಿರಪರಿಚಿತರಾಗಿದ್ದು ಸಾಕಷ್ಟು ಅಭಿಮಾನಿಗಳು ಹಾಗೂ ಸ್ನೇಹಿತರನ್ನು ಪಡೆದವರಾಗಿರುತ್ತಾರೆ. ಹಾಗೂ ಎಲ್ಲಾ ಚಿತ್ರಾಭಿಮಾನಿಗಳೂ ಇಂತಹ ನಮ್ಮ ನಿಮ್ಮೆಲ್ಲರ ಊರಿನ ಪ್ರತಿಭೆಯನ್ನು ಬೆಂಬಲಿಸೋಣ.  

~ ಅರವಿಂದ್ ಹೆಬ್ಬಾರ್   ಬಿ. ಎಂ.ಪತ್ರಕರ್ತರು ಉಡುಪಿ, ಮಂಗಳೂರು.


Share