ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಮಂತ್ರಿಮಂಡಲಕ್ಕೆ ದೇವಾಡಿಗ.ಕಾಮ್ ನ ಹಾರ್ಧಿಕ ದನ್ಯವಾದಗಳು

ದೇವಾಡಿಗ ಸಂಘಕ್ಕೆ ಸರ್ಕಾರಿ ಜಮೀನು: ಸಚಿವ ಸಂಪುಟ ಅನುಮೋದನೆ..
 ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಮಾಚೋಹಳ್ಳಿಯಲ್ಲಿ 58 ಎಕರೆ 20 ಗುಂಟೆ ಸರ್ಕಾರಿ ಜಾಗವನ್ನು ಜಾತಿ ಸಂಘಗಳೂ ಸೇರಿ 36 ವಿವಿಧ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಸಚಿವ ಸಂಪುಟ ಸಭೆ ಸೋಮವಾರ ಒಪ್ಪಿಗೆ ನೀಡಿದೆ. 
 ಒಟ್ಟು ಲಭ್ಯ 96 ಎಕರೆ 12 ಗಂಟೆ ಸರ್ಕಾರಿ ಖರಾಬು ಗೋಮಾಳ ಜಮೀನಿನ ಪೈಕಿ 19 ಎಕರೆ 20 ಗುಂಟೆ ಜಮೀನನ್ನು ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಒಳಗೊಂಡಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸುವ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು. 
 ಕುರುಬ, ಆರ್ಯ ಈಡಿಗ, ವಿಶ್ವಕರ್ಮ, ಕುರುಹಿನ ಶೆಟ್ಟಿ, ಪದ್ಮಸಾಲಿ, ಮಡಿವಾಳ, ವಾಲ್ಮೀಕಿ ನಾಯಕ, ಗಾಣಿಗ,   ದೇವಾಡಿಗ,  ದೇವಾಂಗ, ಸವಿತಾ ಸಮಾಜ, ಉಪ್ಪಾರ, ಕುಂಚಿಟಿಗ, ದೊಂಬಿದಾಸ, ಹಿಂದೂ ಸಾದರ, ತಿಗಳ, ದಲಿತ ಸಂಘರ್ಷ ಸಮಿತಿ, ವೀರಶೈವ, ಒಕ್ಕಲಿಗ, ಗೊಲ್ಲ-ಯಾದವ, ಕೊರಮ, ಗಂಗಾಮತಸ್ಥ, ಮುಸ್ಲಿಂ ಹಾಗೂ ಆಂಗ್ಲೊ ಇಂಡಿಯನ್ ಸಮುದಾಯಗಳಿಗೆ ಶೈಕ್ಷಣಿಕ ಹಾಗೂ ಇತರೆ ಉದ್ದೇಶಗಳಿಗೆ ಗುತ್ತಿಗೆ ಆಧಾರದಲ್ಲಿ ಜಮೀನು ಮಂಜೂರು ಮಾಡಲಾಗಿದೆ.
ಈ ಪೈಕಿ, ರಾಜ್ಯ ಪ್ರದೇಶ ಕುರುಬರ ಸಂಘ, ಹಿಂದುಳಿದ ಜಾತಿಗಳ ಒಕ್ಕೂಟಕ್ಕೆ ತಲಾ 5 ಎಕರೆ, ವಿಶ್ವಕರ್ಮ, ಕುರುಹಿನಶೆಟ್ಟಿ, ಉಪ್ಪಾರ ಸಂಘ, ವಾಲ್ಮೀಕಿ ಸಂಘ, ಸವಿತಾ ಸಮಾಜ, ಯಾದವರ ಸಂಘ, ದೊಂಬಿದಾಸರ ಸಂಘಕ್ಕೆ ತಲಾ 1 ಎಕರೆ 20 ಗುಂಟೆ ಜಮೀನು ಹಂಚಿಕೆ ಮಾಡಲಾಗಿದೆ ಎಂದೂ ಜಯಚಂದ್ರ ವಿವರಿಸಿದರು.
 


Share