ದೇವಾಡಿಗ ನವೋದಯ ಸಂಘ (ರಿ) “ವಿದ್ಯಾ ನಿಧಿ” ಸಂಗ್ರಹ: “ಮುದ್ದಣ್ಣನ ಪ್ರಮೋಷನ್ ಪ್ರಸಂಗ” ನಾಟಕ ಪ್ರದರ್ಶನ

ದೇವಾಡಿಗ ನವೋದಯ ಸಂಘ (ರಿ) ಬೆಂಗಳೂರು
ಆತ್ಮೀಯ ಹಿತೈಷಿಗಳೇ , ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಣ ಅತ್ಯಮೂಲ್ಯ ಸಂಪತ್ತು ಅದಕ್ಕಾಗಿಯೇ ಪ್ರತಿ ಸಂಘಟನೆಯು ನವ ಪೀಳಿಗೆಯ ವಿದ್ಯಾರ್ಹತೆಗಾಗಿ ವಿಶೇಷವಾದ ಆದ್ಯತೆಯನ್ನು ನೀಡಿದೆ. ನಮ್ಮ ಸಮುದಾಯದ ಅರ್ಹ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ "ವಿದ್ಯಾ ನಿಧಿ " ಯನ್ನು ಸಂಗ್ರಹಿಸಲು ನಾವು ಸಂಕಲ್ಪ ಮಾಡಿದ್ದೇವೆ. ಆರ್ಥಿಕ ತೊಂದರೆ ಮಾತ್ರದಿಂದಲೇ ಯಾವ ಮಗುವಿನ ವಿದ್ಯಾಭ್ಯಾಸವು ಕುಂಠಿತವಾಗಬಾರದು ಎಂಬುದು ನಮ್ಮ ಹೆಬ್ಬಯಕೆ, ಆಪ್ರಯುಕ್ತ ಸಹೃದಯಿಗಳಾದ ನಿಮ್ಮಿಂದ ದೇಣಿಗೆಯನ್ನು ಪಡೆದು ದೊಡ್ಡ ಮೊತ್ತದ "ವಿದ್ಯಾನಿಧಿಯೊಂದನ್ನು "ಸ್ಥಾಪಿಸಬೇಕೆನ್ನುವ ನಮ್ಮ ಮಹದಾಸೆಗೆ ತಾವುಗಳು ಕೈಜೋಡಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. 
ಆ ಪ್ರಯುಕ್ತ ದಿನಾಂಕ 04 /11 /2017 ನೇ ಶನಿವಾರ ಸಂಜೆ 5 .00 ಗಂಟೆಗೆ ಬೆಂಗಳೂರು ನಗರದ ಬಸವನಗುಡಿಯಲ್ಲಿರುವ "ಬೆಂಗಳೂರು ಗಾಯನ ಸಮಾಜ ದಲ್ಲಿ" ರಾಜ್ಯದ ಶ್ರೇಷ್ಠ ನಾಟಕ ತಂಡದಲ್ಲಿ ಒಂದಾದ, ಹಾಗು ಹಲವಾರು ರಾಜ್ಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ "ಲಾವಣ್ಯ (ರಿ) ಬೈಂದೂರು " ಕಲಾ ತಂಡದಿಂದ "ಮುದ್ದಣ್ಣನ ಪ್ರಮೋಷನ್ ಪ್ರಸಂಗ " ಎನ್ನುವ ಕನ್ನಡ ಹಾಸ್ಯಮಯ ನಾಟಕವನ್ನು ಪ್ರದರ್ಶಿಸಲಿದ್ದೇವೆ .  
ಈ ಪ್ರದರ್ಶನವು ನಮ್ಮ ಸಂಘಕ್ಕೆ "ವಿದ್ಯಾನಿಧಿ "ಯನ್ನು ಸ್ಥಾಪಿಸಲು ಸಹಾಯವಾಗುವುದಲ್ಲದೆ ಅರ್ಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ಸಹೃದಯಿಗಳಾದ ತಾವುಗಳು ಈ ನಿಟ್ಟಿನಲ್ಲಿ ದೇಣಿಗೆ ರೂಪದಲ್ಲಿ ಅಥವಾ ಜಾಹಿರಾತು ರೂಪದಲ್ಲಿ ಸಹಾಯವನ್ನು ಮಾಡಬೇಕಾಗಿ ಮತ್ತೊಮ್ಮೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ .
ಟಿಕೆಟ್ ದರ: ಸಾಮಾನ್ಯ ಪ್ರವೇಶ :250 ರೂಪಾಯಿ (ಒಬ್ಬರಿಗೆ ಪ್ರವೇಶ ); ಗೌರವ ಪ್ರವೇಶ :1000 ರೂಪಾಯಿ (ಇಬ್ಬರಿಗೆ ಪ್ರವೇಶ ). 

ದೇಣಿಗೆ ನೀಡುವವರು ನಮ್ಮ ಸಂಘದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ ಸಂಘದ ಸದಸ್ಯರಿಗೆ ತಿಳಿಸಬಹುದು .ಬ್ಯಾಂಕ್ ಖಾತೆಯ ವಿವರ : 

Account name : Devadiga navodaya sangha bangalore
Acc No :50205029232
ifsc: ALLA0212867
Bank :Allahabad Bank

ಟಿಕೆಟಿಗಾಗಿ ಸಂಪರ್ಕಿಸಿ :
ಚರಣ್ ಬೈಂದೂರ್ : 9964605360
ಸುಧೀರ್ ದೇವಾಡಿಗ : 9886640428

ಧನ್ಯವಾದಗಳೊಂದಿಗೆ; ದೇವಾಡಿಗ ನವೋದಯ ಸಂಘ (ರಿ ) ಬೆಂಗಳೂರು


Share