ದೇವಾಡಿಗ ನವೋದಯ ಸಂಘ (ರಿ) ಬೆಂಗಳೂರು: ನವರಾತ್ರಿ ಸಂಭ್ರಮ

ಬೆಂಗಳೂರು : ದೇವಾಡಿಗ ನವೋದಯ ಸಂಘ (ರಿ) ಬೆಂಗಳೂರು ಇವರ ನೇತ್ರತ್ವದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ದೇವಾಡಿಗ ಸಮಾಜ ಬಾಂಧವರಿಗಾಗಿ ನವರಾತ್ರಿ ಸಂಭ್ರಮ, ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗು ತೆನೆಹಬ್ಬ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ದಿನಾಂಕ 02/10/2016 ರಂದು ಬೆಂಗಳೂರಿನ ವೆಂಕಟ್ ರೆಸಿಡೆನ್ಸಿ ಯಶವಂತಪುರ ದಲ್ಲಿ ಸಹೃದಯಿ ದೇವಾಡಿಗ ಸಮಾಜ ಬಾಂಧವರ ಸಮಕ್ಷಮದಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಿತು.

ದೇವಾಡಿಗ ನವೋದಯ ಸಂಘ ಬೆಂಗಳೂರು ಇದರ ಅದ್ಯಕ್ಷ ಶ್ರೀ ಹರಿ ದೇವಾಡಿಗ ಇವರ ಅದ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಭಾರತೀಯ ಜನತಾ ಪಾರ್ಟಿ ಬೈಂದೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಪ್ರಿಯದರ್ಶಿನಿ ದೇವಾಡಿಗ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ವಸಂತ್ ಕುಮಾರ್ ನಿಟ್ಟೆ ಪ್ರಾಂಶುಪಾಲರು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ, ಶ್ರೀ ಹರ್ಷ ಶೇರಿಗಾರ್ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ,ರಿಯಾ ದೇವಾಡಿಗ ನಾಯಕ ನಟಿ ಕನ್ನಡ ಚಿತ್ರರಂಗ , ದೇವಾಡಿಗ ನವೋದಯ ಸಂಘ ದ ಉಪಾದ್ಯಕ್ಷರಾದ ರವಿಶಂಕರ್ ಉಳ್ಳಾಲ್, ಪ್ರದಾನ ಕಾರ್ಯದರ್ಶಿ ನೋಡು ಸದಾನಂದ, ಜೊತೆ ಕಾರ್ಯದರ್ಶಿ ಚಿತ್ರಲೇಖ ದೇವಾಡಿಗ , ಸಾಂಸ್ಕ್ರತಿಕ ಕಾರ್ಯದರ್ಶಿ ರಾಜೇಶ್ವರಿ ಹರಿ ದೇವಾಡಿಗ, ಖಜಾಂಜಿ ಗೀತಾ ಮಂಜುನಾಥ್ ಭಾಗವಹಿಸಿದ್ದರು .

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಿಯದರ್ಶಿನಿ ದೇವಾಡಿಗ ಬೆಂಗಳೂರಿನಂತ ನಗರ ಪ್ರದೇಶದಲ್ಲಿ ಸಮಾಜ ಬಾಂಧವರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಆಯೋಜಿಸುವುದು ಸುಲಭದ ಮಾತಲ್ಲ ದೇವಾಡಿಗ ನವೋದಯ ಸಂಘದ ಸದಸ್ಯರು ಸಮಾಜ ಭಾಂದವರನ್ನು ಒಂದೆಡೆ ಸೇರಿಸಿ ಸುಂದರ ಕಾರ್ಯಕ್ರಮವನ್ನು ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ ಎಂದರು , ಬೆಂಗಳೂರು ನಗರದಲ್ಲಿ ಬೇರೆಡೆಯಿಂದ ವಿದ್ಯಾಭ್ಯಾಸಕ್ಕಾಗಿ ಹಾಗು ಉದ್ಯೋಗ ಅರಸಿ ಬಂದ ಸಮಾಜ ಭಾಂದವರಿಗೆ ವಿದ್ಯಾರ್ಥಿ ನಿಲಯದ ಅವಶ್ಯವಿದ್ದು ಆದಷ್ಟು ಬೇಗ ಸಮಾಜ ಸಮಾಜ ಭಾಂದವರೆಲ್ಲ ಜೊತೆಗೂಡಿ ವಿದ್ಯಾರ್ಥಿ ನಿಲಯ ನಿರ್ಮಿಸಬೇಕು ಎಂದರು , ದೇವಾಡಿಗ ಸಮಾಜದ ಯುವಕ, ಯುವತಿಯರು ದೇವಾಡಿಗರನ್ನೇ ಮದುವೆಯಾಗುವ ಮೂಲಕ ಜಾತಿ ಯನ್ನು ಬೆಳೆಸಿ ಎಂದು ಕರೆಕೊಟ್ಟರು .

ಮುಖ್ಯ ಅತಿಥಿ ವಸಂತ್ ಕುಮಾರ್ ನಿಟ್ಟೆ ಮಾತನಾಡುತ್ತಾ ನಾವು ಸಂಘಟಿತರಾಗುವುದರಿಂದ ಮಾತ್ರ ಭದ್ರ ಸಮಾಜದ ನಿರ್ಮಾಣ ಸಾಧ್ಯ , ಯುವಕರು ಹೆಚ್ಚು ಹೆಚ್ಚು ಸಂಘ ಕಟ್ಟುವುದರಲ್ಲಿ ಕಾರ್ಯೋನ್ಮುಖವಾಗಬೇಕು , ಮಕ್ಕಳಿಗೆ ಅಗತ್ಯ ಶಿಕ್ಷಣ ನೀಡುವ ಮೂಲಕ ಸದೃಢ ಸಮಾಜ ನಿರ್ಮಿಸಬೇಕು , ಸರ್ಕಾರದ ಸವಲತುಗಳು ಸಮಾಜದ ಕಟ್ಟಾ ಕಡೆಯ ವ್ಯಕ್ತಿಗಳಿಗೆ ಸಿಗುವಂತಾಬೇಕು ಎಂದರು , ನಗರ ಪ್ರದೇಶದಲ್ಲಿ ನಮ್ಮ ಸಂಸ್ಕ್ರತಿ ಬಿಂಬಿಸುವ ಕಾರ್ಯಕ್ರಮ ಆಯೋಜಿಸಿದ ನವೋದಯ ಸಂಘದ ಸದಸ್ಯರ ಉತ್ಸಾಹ ಅಭಿನಂದನಾರ್ಹ , ಪಾರದರ್ಶಕ ಆಡಳಿತದಿಂದ ಸಂಘವನ್ನು ಅಭಿವೃದಿಗೊಳಿಸಬೇಕು ಎಂದರು .

ಚಿತ್ರ ನಟಿ ರಿಯಾ ದೇವಾಡಿಗ ಮಾತನಾಡುತ್ತಾ ಇದೊಂದು ಅಪರೂಪದ ಕ್ಷಣ ಜಾತಿ ಭಾಂದವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಖುಷಿ ಕೊಟ್ಟಿದ್ದು , ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಚಿತ್ರ ರಂಗಕ್ಕೆ ಪ್ರವೇಶಿಸಿದ್ದೇನೆ ನಿಮ್ಮೆಲ್ಲರ ಪ್ರೋತ್ಸಹ ಸದಾ ಇರಲಿ ಎಂದರು .

ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ್ವರಿ ಹರಿ ದೇವಾಡಿಗ ನವರಾತ್ರಿಯ ಮಹತ್ವ ಹಾಗು ಹಬ್ಬದ ಆಚರಣೆಯ ಬಗ್ಗೆ ಸಭಿಕರಿಗೆ ವಿವರವಾಗಿ ತಿಳಿಸಿದರು .

ಸಭಾ ಅದ್ಯಕ್ಷತೆ ವಹಿಸಿದ್ದ ಸಂಘದ ಅದ್ಯಕ್ಷ ಹರಿ ದೇವಾಡಿಗ ಮಾತನಾಡುತ್ತಾ ಬೆಂಗಳೂರಿನಲ್ಲಿ ದೇವಾಡಿಗ ನವೋದಯ ಸಂಘದಲ್ಲಿ ದೇವಾಡಿಗರು ಸಂಘಟಿತರಾಗಿದ್ದಾರೆ ಎನ್ನಲು ಇಲ್ಲಿ ನೆರೆದಿರುವ ಜನಸಾಗರವೇ ಸಾಕ್ಷಿ ಎಂದರು, ಸಂಘದಲ್ಲಿ ಸಂಘಟನೆಗೆ ಒತ್ತು ಕೊಡಬೇಕು ವ್ಯಕ್ತಿ ಪೂಜೆಯಿಂದ ಸಂಘದ ಏಳ್ಗೆ ಸಾದ್ಯವಿಲ್ಲ ಬದಲಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಬೆಳೆಸಿದಾಗ ಆ ಸಂಘ ಉತ್ತುಂಗದ ಶಿಖರ ಏರುತ್ತದೆ ಎಂದರು. 3 ವರ್ಷದ ಹಿಂದೆ ಹುಟ್ಟಿದ ಈ ಸಂಘ ಈಗಾಗಲೇ ಹಲವು ಜನಪ್ರಿಯ ಕಾರ್ಯಕ್ರಮವನ್ನು ನಡೆಸಿ ಸಮಾಜ ಭಾಂದವರ ಪ್ರೀತಿಗೆ ಪಾತ್ರವಾಗಿದೆ , ಬೆಂಗಳೂರಿನ ವಿವಿದೆಡೆ ಇರುವ ದೇವಡಿಗರನ್ನು ಸಂಗಟಿಸಿ ಸಂಘವನ್ನು ಮತ್ತಷ್ಟು ಬಲಿಷ್ಟಗೊಳಿಸಬೇಕು ಎಂದರು , ಮುಂದಿನ ದಿನಗಳಲ್ಲಿ ದೇವಾಡಿಗ ನವೋದಯ ಸಂಘದ ನೇತ್ರತ್ವದಲ್ಲಿ ವಧು ವರರ ಸಮಾವೇಶ , ಉದ್ಯೋಗ ಶಿಭಿರ , ಪ್ರತಿಭಾ ವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದು , ವಿಧ್ಯಾ ನಿಧಿ ಹಾಗು ತುರ್ತು ಅರೋಗ್ಯ ನಿಧಿ ಸ್ಥಾಪನೆ ಮಾಡುವ ಕುರಿತು ಮಾಹಿತಿ ನೀಡಿದರು.ದೇವಾಡಿಗ ನವೋದಯ ಸಂಘ ಪ್ರಜಪ್ರಬುತ್ವದ ಮಾರ್ಗದಲ್ಲಿ ಮುನ್ನಡೆಯುತ್ತಿದೆ ,ಮುಂದಿನ ದಿನಗಳಲ್ಲಿ ಜನೋಪಯೋಗಿ ಕೆಲಸಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಭಾಂಧವರಿಗೆ ನೆರವಾಗಬೇಕು ಎಂದು ಸದಸ್ಯರುಗಳಿಗೆ ಕರೆ ನೀಡಿದರು .

ದೇವಾಡಿಗ ನವೋದಯ ಸಂಘದ ಅಂತರ್ಜಾಲತಾಣವನ್ನು ಮುಖ್ಯ ಅತಿಥಿ ವಸಂತ್ ಕುಮಾರ್ ನಿಟ್ಟೆ ಎಲ್ಲ ಅತಿಥಿಗಳ ಸಮಕ್ಷಮದಲ್ಲಿ ಲೋಕಾರ್ಪಣೆಮಾಡಿದರು. ಸಭಿಕರ ಪರವಾಗಿ ಮಾತನಾಡಿದ ಸಮಾಜದ ಹಿರಿಯ ಸದಸ್ಯ ಬಿ ಆರ್ ದೇವಾಡಿಗ ಅಧ್ಯಕ್ಷರು ಬಿಜಿಪಿ ಜೆ ಪಿ ನಗರ ವಾರ್ಡ್ ,ದಶಕಗಳಿಂದ ಸಮಾಜದವರು ಅನುಭವಿಸದ ಕಷ್ಟ ಸುಖಗಳು , ಸಮಾಜದಲ್ಲಿ ಆಗಬೇಕಾದ ಬದಲಾವಣೆಯ ಬಗ್ಗೆ ಮಾತನಾಡಿದರು .
ಸಂಘದ ಮಾಹಿತಿ ಕಾರ್ಯದರ್ಶಿ ಚರಣ್ ಬೈಂದೂರ್ ಬೆಳಿಗ್ಗಿನ ಸಭಾ ಕಾರ್ಯಕ್ರಮ ನಿರೂಪಿಸಿ ,ಸ್ವಾಗತಿಸಿದರು , ಕುಮಾರಿ ಮಾನ್ಯ ಸುದರ್ಶನ್ ಪ್ರಾರ್ಥನೆ ನಡೆಸಿಕೊಟ್ಟರು. ಮದ್ಯಾನದ ಭೋಜನದ ನಂತರ ಸುಧೀರ್ ದೇವಾಡಿಗ, ಚರಣ್ ಬೈಂದೂರ್, ಮಹೇಶ್ ತೀರ್ಥಹಳ್ಳಿ , ನೋಡು ಸದಾನಂದ ,ವಿವಿಧ ಮನೋರಂಜನ ಸ್ಪರ್ದೆಗಳನ್ನು ನಡೆಸಿಕೊಟ್ಟರು .
ಪುಟಾಣಿಗಳಾದ ಕುಮಾರಿ ಮಾನ್ಯ ಹಾಡು ಹಾಡಿದರೆ ದೇವಾಡಿಗ ನವೋದಯ ಸಂಘದ ಮಹಿಳಾ ಘಟಕ ನಡೆಸಿಕೊಟ್ಟ ನೃತ್ಯ ನೆರೆದಿರುವ ಜನಸಾಗರಕ್ಕೆ ಮುಧ ನೀಡಿತು, ಸಂಘದ ಸದಸ್ಯರೆಲ್ಲ ಜೊತೆಗೂಡಿ ನಮ್ಮ ಕುಟುಂಬ ಹಾಡಿಗೆ ಹೆಜ್ಜೆ ಹಾಕಿದರು , ಕುಮಾರಿ ಸುಶ್ಮಿತಾ ಸೋಲೋ ನೃತ್ಯ ಪ್ರದರ್ಶಿಸಿದರು ಯುವಕರು ಪ್ರದರ್ಶಿಸಿದ ಟೈಗರ್ ಡಾನ್ಸ್ ಸಭಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು . ದಂಪತಿಗಳಿಗೆ ಆಯೋಜಿಸಿದ್ದ ಆದರ್ಶ ದಂಪತಿ ಕಾರ್ಯಕ್ರಮದಲ್ಲಿ ನೋಡು ಸದಾನಂದ್ ದಂಪತಿ ಪ್ರಥಮ ಸ್ಥಾನ , ಆನಂದ್ ದಂಪತಿ ದ್ವಿತೀಯ ಸ್ಥಾನ ಹಾಗು ಚಂದ್ರಶೇಖರ್ ದಂಪತಿ ತೃತೀಯ ಸ್ಥಾನ ಪಡೆದರು.
ಪುಟಾಣಿಗಳಿಗಾಗಿ ಆಯೋಜಿಸಿದ್ದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಮಾಸ್ಟರ್ ದ್ರುವ ಪ್ರಥಮ , ಕುಮಾರಿ ಸಾನ್ವಿ ದ್ವಿತೀಯ ,ಮಾಸ್ಟರ್ ಸೃಜಯ್ ಹಾಗು ಭುವಿಶ್ ಉಳ್ಳಾಲ್ ತೃತೀಯ ಸ್ಥಾನ ಪಡೆದರು.
ಮುದ್ದು ಕೃಷ್ಣ ಸ್ಪರ್ಧೆಯ ತೀರ್ಪುಗಾರರಾಗಿ ರೇಖಾ ಸುರೇಶ ಹಾಗು ಉಷಾ ವಾಸುದೇವ್ ಪಾಲ್ಗೊಂಡಿದ್ದರು .
ಆದರ್ಶ ದಂಪತಿ ಕಾರ್ಯಕ್ರಮದ ತೀರ್ಪುಗಾರರಾಗಿ ರಿತೇಶ್ ಹಾಗು ಕೃತಿ ರಿತೇಶ್ ದಂಪತಿಗಳು ಪಾಲ್ಗೊಂಡಿದ್ದರು.
ನೆರೆದಿದ್ದ ಸಭಿಕರಿಗಾಗಿ ಮನೋರಂಜನಾ ಸ್ಪರ್ದೆಗಳಾದ , ಆದರ್ಶ ದಂಪತಿ , ಸಂಗೀತ ಕುರ್ಚಿ , ನೃತ್ಯ , ಬಟನ್ ಎಣಿಕೆ , , ನಾಣ್ಯ ಸಂಗ್ರಹಣೆ , ದಂಪತಿಗಳ ಡಾನ್ಸ್ ಜಲಕ್ ಮುಂತಾದ ಆಟಗಳು ನೆರೆದಿದ್ದ ಜನರನ್ನು ಮುದ ಗೊಳಿಸಿತ್ತು . ಮಹೇಶ್ ತೀರ್ಥಹಳ್ಳಿ ಆಯೋಜಿಸಿದ್ದ ತಂಬೋಲಾ ಇವೆಂಟ್ ಅತ್ಯಂತ ಯಶಸ್ವಿಯಾಗಿ ನಡೆಯಿತು .

ದೇವಾಡಿಗ ನವೋದಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ , ಉಮೇಶ್ ಬಾರ್ಕೂರು , ಪುಷ್ಪ ಉಮೇಶ್ , ಯೋಗಿತಾ ರವಿಶಂಕರ್ ಉಳ್ಳಾಲ್ ,ರತ್ನ ಸದಾನಂದ ,ಜಯಶ್ರೀ ಮಹೇಶ್ ,ದಿವ್ಯ ಸುಧೀರ್ ,ಮಹೇಶ್ ಹೆನಬೇರ್ ,ರವಿಚಂದ್ರ ಬಾರ್ಕೂರು ,ಪ್ರಕಾಶ್ ಬಾರ್ಕೂರು , ಶಶಿಧರ್ ದೇವಾಡಿಗ , ಪ್ರವೀಣ್ ದೇವಾಡಿಗ , ವಿಜಯ್ ಕಾಪಿಕಾಡ್ ,ರಾಜಣ್ಣ ದೇವಾಡಿಗ , ಸಂದೀಪ್ ಸೋಮಾನಿ ,ದಿವ್ಯ ಉಮೇಶ್ , ಚೆನ್ನಕೇಶವ , ದಿವಾಕರ್ ದೇವಾಡಿಗ ,ಮಂಜುಳಾ ದಿವಾಕರ್ ,ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ತಂಬೋಲಾ ಇವೆಂಟ್ ಗೆ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಕೃತಿ ರಿತೇಶ್ ದಂಪತಿಗಳನ್ನು ಅಭಿನಂದಿಸಲಾಯಿತು .
ದೇವಾಡಿಗ ನವೋದಯ ಸಂಘದ ಎಲ್ಲ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿ ಸಂಘ ಕಟ್ಟಲು ನೆರವಾಗಿ ಎಂದು ಸಭಿಕರನ್ನು ವಿನಂತಿಸಿದ ಸಂಘದ ಪ್ರದಾನ ಕಾರ್ಯದರ್ಶಿ ನೋಡು ಸದಾನಂದ , ಬೆಳಿಗ್ಗೆ 10 ಗಂಟೆಗೆ ಆಗಮಿಸಿ ಹಬ್ಬದ ವಾತಾವರಣ ಸಿದ್ದಪಡಿಸಿ ಸಂಜೆ 6 ವರೆಗೂ ಉಪಸ್ಥಿತರಿದ್ದು ಈ ಒಂದು ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಸಹೃದಯಿ ಸಮಾಜ ಬಾಂಧವರಿಗೆ ದನ್ಯವಾದ ತಿಳಿಸಿದರು.

ವರದಿ :ಚರಣ್ ಬೈಂದೂರ್
 


Share