ನಮ್ಮೂರಿನ ಹೆಮ್ಮೆ ಯೋಗೀಶ್ ಬಂಕೇಶ್ವರ್ ....

ಬೈಂದೂರು:  ದಟ್ಟಕಾಡಿನೊಳಗೆ ನಾಚುತ್ತನಿಂತ ನವಿಲನ್ನು ಕಂಡವರ್ಯಾರು ಎಂಬುದು ಹಿಂದಿಯ  ಒಂದು ಗಾದೆ. ನವಿಲು ಮೈಚಳಿ ಬಿಟ್ಟು  ಊರಿಗೆ ಬಂದು  ಅದೇ  ನೃತ್ಯ ಮಾಡುವುದಿದ್ದಲ್ಲಿ ಇಡೀ ಊರಿಗೆ  ಊರೇ ನಿಬ್ಬೆರಗಾಗುವುದರಲ್ಲಿ ಸಂಶಯವಿಲ್ಲ!.

ಯೋಗೀಶ್ ಬಂಕೆಶ್ವರ ಎಂಬ ಬೈಂದೂರಿನ ದೇವಾಡಿಗ ಸಮಾಜದ ಹುಡುಗ ನವಿಲಾಗಿ ಸುದ್ದಿಮಾಡಿದ್ದೆ ಹಾಗೆ. ಸತತ 24  ವರ್ಷಗಳಿಂದ ರಂಗಭೂಮಿ ಕಲಾವಿದನಾಗಿ ರಂಗಚಟುವಟಿಕೆಗಳಲ್ಲಿ ಭಾಗಿಯಾಗಿ ಮೊನ್ನೆ ಮೊನ್ನೆ ಸಿನಿಮಾ ಟೀವಿಗಳಲ್ಲಿ ಬರ ತೊಡಗಿದ ಯೋಗೀಶ್  ಇವತ್ತು ರಾಜ್ಯಮಟ್ಟದಲ್ಲಿ ಗುರುತಿಸಲ್ಪಡುವ ಕಲಾವಿದರಾಗಿದ್ದಾರೆ  ಎಂಬುದು ನಮ್ಮಸಮಾಜಕ್ಕೊಂದು ಹೆಮ್ಮೆ. 

ಹುಟ್ಟಿದ್ದು ಕುಂದಾಪುರ ತಾಲೂಕಿನ ಬೈಂದೂರು ಪದ್ಮಾವತಿ ಮತ್ತು ದುರ್ಗಯ್ಯ ದಂಪತಿಯ ಮಗನಾಗಿ. ಓದಿದ್ದು ವಿಜ್ಞಾನವಿಭಾಗ ಪದವಿಪೂರ್ವಕಾಲೇಜು - ಸರಕಾರಿ ಪದವಿ ಪೂರ್ವಕಾಲೇಜು ಬೈಂದೂರು.

ರೆ.ಫಾ.ರೋ.ಝಡ್.ಎಂ. ಡಿ' ಸೋಜ ಕೈಗಾರಿಕಾ ತರಬೇತಿ ಸಂಸ್ಥೆ ನಾಡಾ, ಇಲ್ಲಿ ಮೆಕ್ಯಾನಿಕ್ ಮೋಟಾರು ವಾಹನ ವೃತ್ತಿಯಲ್ಲಿ, ಐ.ಟಿ.ಐ. ಹಾಗೂಎ. ಟಿ. ಎಸ್ ತರಬೇತಿ. ಅಖಿಲ ಭಾರತ  ವೃತ್ತಿ ಪರೀಕ್ಷೆಯಲ್ಲಿರಾಜ್ಯಮಟ್ಟದ 5 ನೇ ಉನ್ನತ ಫ಼ಲಿತಾಂಶ. 1997 ರಿಂದ ,  ಕಲಿತ  ಸಂಸ್ಥೆಯಲ್ಲೇ  ಕಿರಿಯ ತರಬೇತಿ ಅಧಿಕಾರಿ.

ಹೆಂಡತಿ ಸೌಮ್ಯ  ಮತ್ತು  ಮಗ  ಶಮೀ ಕ್ ಯೋ ಗಿ ಜೊತೆಗೆ ಸುಖೀಸಂಸಾರ.

ಇದುವರೆಗೆ ಇಪ್ಪತ್ಮೂರು ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ  ಹತ್ತುನಾಟಕಗಳನ್ನು ನಿರ್ದೇಶಿಸಿದ ಅನುಭವ .  ನಾಟಕ ರಂಗದಿಂದ  ಸಿನಿಮಾರಂಗಕ್ಕೂ  ಜಿಗಿದ ಇವರು ಇದುವರೆಗೆ ಐದು ಚಲನ  ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅವುಗಳೆಂದರೆ  ಜಿ . ಮೂರ್ತಿರವರ  ನಿರ್ದೇಶನದ  ಕಲಾತ್ಮಕ  ಕನ್ನಡ  ಚಲನಚಿತ್ರ  ' ಕುರುನಾಡು',  ನಿಖಿಲ್ ಮಂಜೂರವರ  ನಿರ್ದೇಶನದ ' ಹಜ್ ', ಅಂಬಳಿಕೆ  ರವಿ ರವರ  ಕಲಾತ್ಮಕ  ತುಳು  ಚಲ ನಚಿತ್ರ  'ವಿಷತ  ಬರ್ಸಾ', ನಿಖಿಲ್ ಮಂಜೂರವರ '  ಗೆರೆಗಳು'  ಮತ್ತು  ಅನನ್ ಕಾಸರವಳ್ಳಿ  ನಿರ್ದೇಶನದ  ' ಹರಿಕಥಾ ಪ್ರಸಂಗ'.

2002  ರಲ್ಲಿ ಚಂದನ ವಾಹಿನಿಗಾಗಿ  ಭಾರ್ಗವರವರ  ನಿರ್ದೇಶನದ  ಧಾರಾವಾಹಿ 'ಅಕ್ಕು'  ಮತ್ತು ಇನ್ನೊಂದು ಧಾರವಾಹಿ 'ಬಂಧ',  2003 ರಲ್ಲಿ ಭಗೀರಥ, ಸ್ಥಳೀಯವಾಹಿನಿಗಾಗಿ ಏಸುಸ್ವಾಮಿಯ  ಸಾಮತಿಗಳು,  2014 ರಲ್ಲಿ ಈ ಟಿ . ವಿ .  ಕನ್ನಡ ವಾಹಿನಿ  ಧಾರಾವಾಹಿ  ಯಶೋದೆ  ಮತ್ತು 2014  ಏಷ್ಯಾನೆ ಟ್ ಮಲಯಾಳಂ ವಾಹಿನಿಯ  ಚಂದನಮಝೈ ಹೀಗೆ ಆರು  ಕಿರುತೆರೆ ಸೀರಿಯಲ್ಗಳಲ್ಲೂ ಅಭಿನಿಯಿಸಿದ್ದಾರೆ.

 

ಯೋಗೀಶ್ ಬಂಕೆಶ್ವರರನ್ನು  ಪ್ರಶಸ್ತಿಗಳೂ ಅರಸಿ ಬಂದಿವೆ. ರಂಗಭೂಮಿ (ರಿ)  ಉಡುಪಿ ಆಯೋಜಿಸಿದ  ರಾಜ್ಯಮಟ್ಟದ  ನಾಟಕಸ್ಪರ್ಧೆಯಲ್ಲಿ 'ದೃಷ್ಟಿ' ನಾಟಕದ  ವಿಶ್ವಾಮಿತ್ರ  ಪಾತ್ರಕ್ಕೆ  (2005), ' ಪೊಲೀಸ್' ನಾಟಕದ  ಕೃಷ್ಣ ಪಾತ್ರಕ್ಕೆ (2007),  ಹಾಗೂ ' ಮರಣ  ಮೃದಂಗ '  ನಾಟಕದ  ನರಸಿಂಹರಾವ್ ಪಾತ್ರಕ್ಕೆ (2013)  ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದಾರೆ.

ಇವರದ್ದು  ಸಂಘಸಂಸ್ಥೆಗಳ  ಕಾರ್ಯನಿರ್ವಹಣೆಯಲ್ಲೂ ಎತ್ತಿದ ಕೈ, ರಾಜ್ಯದ  ಹೆಸರಾಂತ  ಕಲಾಸಂಸ್ಥೆ  ಲಾವಣ್ಯ  ಬೈಂದೂರು ಇದರ ಕಾರ್ಯದರ್ಶಿಯಾಗಿ  2005  ರಿಂದ 2008  ರವರೆಗೆ ಕಾರ್ಯನಿರ್ವಹಣೆ .  2015  ರಿಂದ  ಲಾವಣ್ಯ ಬೈಂದೂರು ಇದರ ಅಧ್ಯಕ್ಷ .  ಕನ್ನಡ  ಸಾಹಿತ್ಯ  ಪರಿಷತ್ತು  ಬೈಂದೂರು ಹೋಬಳಿ  ಘಟಕದ  ಕಾರ್ಯದರ್ಶಿಯಾಗಿ  ನಿರ್ವಹಣೆ . ಕರ್ನಾಟಕ  ನಾಟಕ ಅಕಾಡೆಮಿಯ  ಸದಸ್ಯ ಶ್ರೀರಾಜೇಂದ್ರ ಕಾರಂತರೊಂದಿಗೆ  ತಾಲೂಕು ಪ್ರತಿನಿಧಿ  ( ಸಹಸದಸ್ಯ ) ಯಾಗಿ ಕಾರ್ಯನಿರ್ವಹಣೆ ;  ಲಾವಣ್ಯದ  ನಾಟಕೋತ್ಸವಗಳ  ಸಂಯೋಜನೆಯಲ್ಲಿ  ಸಕ್ರೀಯ ಪಾತ್ರ .  ಕರ್ನಾಟಕ ನಾಟಕ ಅಕಾಡೆಮಿಯ 'ಗ್ರಾಮೀಣ  ನಾಟಕೋತ್ಸವ' ವನ್ನು  ಬೈಂದೂರಿನಲ್ಲಿ ಸಂಘಟನೆ.  ಕನ್ನಡ ಸಾಹಿತ್ಯ ಪರಿಷತ್ತಿನ 'ಕುಂದಾಪುರ  ತಾಲೂಕು  ಸಾಹಿತ್ಯ  ಸಮ್ಮೇಳನ' ದ ಸಂಘಟನೆಯಲ್ಲಿ  ಪಾತ್ರ. ಹೀಗೆ ಈ ಪಟ್ಟಿ ಉದ್ದಕ್ಕೆ  ಬೆಳೆಯುತ್ತಾ ಹೋಗುತ್ತದೆ...

ತಬಲಾವಾದಕ  ಶ್ರೀ ಶ್ರೀನಿವಾಸ ಪ್ರಭು ಉಪ್ಪುಂದ ಇವರಿಂದ ತಬಲಾತರ ಬೇತಿ ,  ಖ್ಯಾತ ರಂಗ  ನಿರ್ದೇಶಕರುಗಳಾದ  ಶ್ರೀಸುರೇಶ್ ಆನಗಳ್ಳಿ ,  ಶ್ರೀಸೀತಾರಾಮ ಶೆಟ್ಟಿ  ಕೂರಾಡಿ,  ಶ್ರೀರಾಜೇಂದ್ರ  ಕಾರಂತ  ಬೆಂಗಳೂರು , ಡಾ .  ಶ್ರೀಪಾದ ಭಟ್ ಇವರಿಂದ  ರಂಗ  ತರಬೇತಿಯನ್ನೂ  ಪಡೆದಿದ್ದಾರೆ.

 

ನಮ್ಮೂರಿನ ಹೆಮ್ಮೆ ಯೋಗೇಶ್ ಬಂಕೆಶ್ವರ್ ಅವರ  ಸಾಧನೆಯ  ಗರಿ ಇನ್ನೂ ಹೆಚ್ಚುತ  ಹೋಗಲಿ  ಎಂದು  ಹಾರೈಸೋಣ . 

ಅವರನ್ನು 9902213959 ರಲ್ಲಿ ಸಂರ್ಪಕಿಸ ಬಹುದು.

ವೈಯಕ್ತಿಕ ಪರಿಚಯ

ಹೆಸರು : ಯೋಗೇಶ್ ಬಂಕೆಶ್ವರ್

ತಂದೆಯ ಹೆಸರು :  ದುರ್ಗಯ್ಯ

ತಾಯಿಯ ಹೆಸರು  :  ಪದ್ಮಾವತಿ

ಹೆಂಡತಿಯ ಹೆಸರು  :  ಸೌಮ್ಯ

 ಮಗನ ಹೆಸರು :  ಶಮೀಕ್ ಯೋಗಿ

ಹುಟ್ಟಿದ ಊರು :  ಬೈಂದೂರು,  ಕುಂದಾಪುರ ತಾಲೂಕು.  ಉಡುಪಿ ಜಿಲ್ಲೆ.

ಜನ್ಮ ದಿನಾಂಕ: 23 - 08 -1976

ವಿಳಾಸ :  ಮನೆ ನಂಬ್ರ : 9 -218/1 'ಶಮೀಕ್' , ಕೆರೆಕಟ್ಟೆ ಹತ್ತಿರ,  ಬೈಂದೂರು - 576214, ಉಡುಪಿಜಿಲ್ಲೆ.

ಸೆಲ್ ಫೋನ್ ನಂಬ್ರ : 9902213959.

ಗೊತ್ತಿರುವ ಭಾಷೆ : ಕನ್ನಡ ,  ಹಿಂದಿ, ಇಂಗ್ಲೀಷ್.

ವಿದ್ಯಾಭ್ಯಾಸ : ಪ್ರಾಥಮಿಕ - ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು

    ಪೌಢಶಾಲೆ -  ಸರಕಾರಿ ಪೌಢಶಾಲೆ ಬೈಂದೂರು

    ಪದವಿ ಪೂರ್ವ ಕಾಲೇಜು  -  ವಿಜ್ಞಾನ ವಿಭಾಗ,  ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು

ವೃತ್ತಿ ತರಬೇತಿ  :  ರೆ.  ಫಾ.  ರೋ.  ಝಡ್ ಎಂ. ಡಿ'ಸೋಜ ಕೈಗಾರಿಕಾ ತರಬೇತಿ ಸಂಸ್ಥೆ ನಾಡಾ,  ಇಲ್ಲಿ ಮೆಕ್ಯಾನಿಕ್ ಮೋಟಾರು ವಾಹನ ವೃತ್ತಿಯಲ್ಲಿ,  ಐ. ಟಿ. ಐ. ಹಾಗೂ ಎ.  ಟಿ.  ಎಸ್ ತರಬೇತಿ.

ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ  5  ನೇ ರ್ಯಾಂಕ್

ಉದ್ಯೋಗ  : 1997 ರಿಂದ,  ರೆ. ಫಾ. ರೋ. ಝಡ್ ಎಂ. ಡಿ ಸೋಜ ಕೈಗಾರಿಕಾ ತರಬೇತಿ ಸಂಸ್ಥೆ ನಾಡಾದಲ್ಲಿ ಮೆಕ್ಯಾನಿಕ್ ಡೀಸೆಲ್ ವೃತ್ತಿಯ ಕಿರಿಯ ತರಬೇತಿ ಅಧಿಕಾರಿ.

ಕಲಾರಂಗದ ಅನುಭವ : ಸತತ 24  ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ಭಾಗಿ

 ರಂಗಭೂಮಿ : ಅಭಿನಯಿಸಿದ ನಾಟಕಗಳು: ಆಲಿಬಾಬ ಮತ್ತು ನಲವತ್ತು ಕಳ್ಳರು(1991)

2. ಏಕಲವ್ಯ(1992)

3.  ಚೋರ ಚರಣದಾಸ (1992)

4.  ಉದ್ಭವ  (1993)

5.  ಬೇಲಿ ಮತ್ತು ಹೊಲ (1994)

6.  ಕನಸಿನವರು (1994)

7.  ನಾವೆಲ್ಹೋಗಬೇಕು (1995)

8.  ಮಾವ ಮಾವ ಕತೆ ಕೇಳು (1995)

9. ರಾಘವೇಂದ್ರ ಮಹಾತ್ಮೆ(1995)

10.  ದಾರಿ ಯಾವುದಯ್ಯ ಮುಂದೆ (1996)

11.  ನಾಯೀಕತೆ (1996)

12.  ಬಾವಿ ಕಳೆದಿದೆ  (2000)

13.  ಪರಿಹಾರ  (2001)

14.  ನೆರೆಕೆರೆ (2003)

15.  ಪೊಲೀಸ್  (2003)

16.  ದೃಷ್ಟಿ  (2004)

17.  ಕರ್ನಾಟಕ ರಮಾರಮಣ  (2009)

18.  ಬದುಕಿಲ್ಲದವನ ಭಾವಗೀತೆ  (2011)

19.  ಗಂಗಾವತರಣ  (2012,  ತಂಡ :  ರಂಗಸೌರಭ ಬೆಂಗಳೂರು)

20.  ಮರಣ ಮೃದಂಗ  (2013)

21.  ಮುದ್ದಣ್ಣನ ಪ್ರಮೋಷನ್ ಪ್ರಸಂಗ  (2015)

22.  ಕಾವ್ಯರಂಗ  (2015  ತಂಡ  :  ಸುರಭಿ ಬೈಂದೂರು)

23.  ಅಕ್ಕು (2015,  ತಂಡ  :  ರಂಗ ಮಂಟಪ ಬೆಂಗಳೂರು)

 

ನಿರ್ದೇಶಿಸಿದ ನಾಟಕಗಳು :

1. ಕನಸಿನವರು  ( ಕಾಲೇಜು ವಿದ್ಯಾರ್ಥಿಗಳಿಗೆ )

2. ನಾವೆಲ್ಹೋಗಬೇಕು ( ಕಾಲೇಜು ವಿದ್ಯಾರ್ಥಿಗಳಿಗೆ )

3. ಉದ್ಭವ  ( ಕಾಲೇಜು ವಿದ್ಯಾರ್ಥಿಗಳಿಗೆ )

4.  ವೇಷಾಂತರ ಪ್ರಸಂಗ  (  ಕಾಲೇಜು ವಿದ್ಯಾರ್ಥಿಗಳಿಗೆ )

5.  ಮುದ್ದಣ್ಣನ ಪ್ರಮೋಶನ್ ಪ್ರಸಂಗ  ( ಕಾಲೇಜು ವಿದ್ಯಾರ್ಥಿಗಳಿಗೆ /  ಲಾವಣ್ಯ ಕಲಾವಿದರಿಗೆ )

6. ಓಡುವವರು  ( ಕಾಲೇಜು ವಿದ್ಯಾರ್ಥಿಗಳಿಗೆ )

7.  ಏಡ್ಸ್ ಕುರಿತು ಜಾಗೃತಿ (  ಕಾಲೇಜು ವಿದ್ಯಾರ್ಥಿಗಳಿಗೆ )

8.  ತಂತಿ  ( ಲಾವಣ್ಯದ ಕಲಾವಿದರಿಗೆ )

9.  ಬದುಕಿಲ್ಲದವನ ಭಾವಗೀತೆ ( ಲಾವಣ್ಯದ ಕಲಾವಿದರಿಗೆ )

10.  ಪುಷ್ಪರಾಣಿ  ( ಮಕ್ಕಳ ನಾಟಕ )

 

ರಂಗಗೀತೆ ಕಾರ್ಯಕ್ರಮ :

ವಿಶ್ವ ಕನ್ನಡ ಸಮ್ಮೇಳನ ಸೇರಿದಂತೆ ಹಲವಾರು ಕಡೆ ಲಾವಣ್ಯ ಬೈಂದೂರು ತಂಡ ನೀಡಿದ ರಂಗಗೀತೆ ಕಾರ್ಯಕ್ರಮದಲ್ಲಿ ಹಾಡುಗಾರನಾಗಿ ಭಾಗಿ .

 

ಕಿರುತೆರೆ ಹಾಗೂ ಚಲನಚಿತ್ರ

ಕಿರುತೆರೆಯಲ್ಲಿ ಅಭಿನಯ :

1. ಅಕ್ಕು  (2002 ರಲ್ಲಿ ಚಂದನ ವಾಹಿನಿಗಾಗಿ ಭಾರ್ಗವರವರ ನಿರ್ದೇಶನದ ಧಾರಾವಾಹಿ )

2. ಬಂಧ (2002 ರಲ್ಲಿ ಚಂದನ ವಾಹಿನಿಗಾಗಿ ಸುನೀಲ್ ಪುರಾಣಿಕ್ ರವರ ನಿರ್ದೇಶನದ ಧಾರಾವಾಹಿ )

3.  ಭಗೀರಥ (2003 ರಲ್ಲಿ ಚಂದನ ವಾಹಿನಿಗಾಗಿ ನಿಖಿಲ್ ಮಂಜೂರವರ ನಿರ್ದೇಶನದ ಧಾರಾವಾಹಿ )

4. ಏಸು ಸ್ವಾಮಿಯ ಸಾಮತಿಗಳು ( ಸ್ಥಳೀಯ ವಾಹಿನಿಗಾಗಿ ವಿನೋದ ಗಂಗೊಳ್ಳಿರವರ ನಿರ್ದೇಶನದದ ಕಿರುಚಿತ್ರ )

5.  ಯಶೋದೆ  (2014 ರಲ್ಲಿ ಈ ಟಿ . ವಿ .  ಕನ್ನಡ ವಾಹಿನಿಗಾಗಿ ವಿನೋದ್ ವಿ .  ಧೋಂಡಾಳೆಯವರ ನಿರ್ದೇಶನದ  ಧಾರಾವಾಹಿ )

6.  ಚಂದನ ಮಝೈ (2014  ಏಷ್ಯಾನೆಟ್ ಮಲಯಾಳಂ ವಾಹಿನಿಗಾಗಿ ಸುಜಿತ್ ಸುಂದರ್ ನಿರ್ದೇಶನದ ಧಾರಾವಾಹಿ )

 

ಚಲನಚಿತ್ರ ಅಭಿನಯ :

ಕುರುನಾಡು  ( ಜಿ .  ಮೂರ್ತಿ ರವರ ನಿರ್ದೇಶನದ ಕಲಾತ್ಮಕ ಕನ್ನಡ ಚಲನಚಿತ್ರ ) ದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯ.

ಹಜ್ ( ನಿಖಿಲ್ ಮಂಜೂ ರವರ ನಿರ್ದೇಶನದ ಕಲಾತ್ಮಕ ಕನ್ನಡ ಚಲನಚಿತ್ರ ) ದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಅಭಿನಯ .

ವಿಷತ ಬರ್ಸಾ ( ಅಂಬಳಿಕೆ ರವಿ ರವರ ನಿರ್ದೇಶನದ ಕಲಾತ್ಮಕ ತುಳು ಚಲನಚಿತ್ರ )  ನಾಯಕ ನಟನಾಗಿ ಅಭಿನಯ .

ಗೆರೆಗಳು  ( ನಿಖಿಲ್ ಮಂಜೂ ರವರ ನಿರ್ದೇಶನದ ಕಲಾತ್ಮಕ ಕನ್ನಡ ಚಲನಚಿತ್ರ ) ದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯ .

ಹರಿಕಥಾ ಪ್ರಸಂಗ  (  ಅನನ್ಯ ಕಾಸರವಳ್ಳಿ ರವರ ನಿರ್ದೇಶನದ ಕಲಾತ್ಮಕ ಚಲನಚಿತ್ರ ) ದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಅಭಿನಯ .

 

ಪಡೆದ ಪ್ರಶಸ್ತಿ :

ರಂಗಭೂಮಿ  ( ರಿ .)  ಉಡುಪಿ ಆಯೋಜಿಸಿದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ದೃಷ್ಟಿ ನಾಟಕದ ವಿಶ್ವಾಮಿತ್ರ ಪಾತ್ರಕ್ಕೆ (2005),  ಪೊಲೀಸ್ ನಾಟಕದ ಕೃಷ್ಣ ಪಾತ್ರಕ್ಕೆ  (2007),  ಹಾಗೂ ಮರಣ ಮೃದಂಗ ನಾಟಕದ ನರಸಿಂಹ ರಾವ್ ಪಾತ್ರಕ್ಕೆ (2013) ಶ್ರೇಷ್ಠ ನಟ ಪ್ರಶಸ್ತಿ .

 

ಸಂಘಟನೆಯಲ್ಲಿ:

1. ರಾಜ್ಯದ ಹೆಸರಾಂತ ಕಲಾಸಂಸ್ಥೆ ಲಾವಣ್ಯ ಬೈಂದೂರು ಇದರ ಕಾರ್ಯದರ್ಶಿಯಾಗಿ 2005 ರಿಂದ  2008 ರವರೆಗೆ ಕಾರ್ಯ ನಿರ್ವಹಣೆ . 2015  ರಿಂದ ಲಾವಣ್ಯ ಬೈಂದೂರು ಇದರ ಅಧ್ಯಕ್ಷ.

2. ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ಹೋಬಳಿ ಘಟಕದ ಕಾರ್ಯದರ್ಶಿಯಾಗಿ ನಿರ್ವಹಣೆ .

3. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಶ್ರೀ ರಾಜೇಂದ್ರ ಕಾರಂತರೊಂದಿಗೆ ತಾಲೂಕು ಪ್ರತಿನಿಧಿ ಸಹ ಸದಸ್ಯ ) ನಾಗಿ ಕಾರ್ಯ ನಿರ್ವಹಣೆ  (2012-13 ರ ಅವಧಿ )

4. ಲಾವಣ್ಯ ಬೈಂದೂರು ಈ ನಾಟಕ ತಂಡದೊಂದಿಗೆ ಗ್ರಾಮೀಣ ರಂಗಭೂಮಿಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ನಿರ್ವಹಣೆ .

5. ಲಾವಣ್ಯದ  20 ನೇ ವರ್ಷಾಚರಣೆ ಸಂದರ್ಭದಲ್ಲಿ 10  ದಿನಗಳ ರಾಜ್ಯಮಟ್ಟದ ನಾಟಕ ಸ್ಪರ್ಧೆ , 25 ನೇ ವರ್ಷಾಚರಣೆ ಸಂದರ್ಭದಲ್ಲಿ 16 ದಿನಗಳ ರಾಜ್ಯಮಟ್ಟದ ನಾಟಕ ಸ್ಪರ್ಧೆ , 30 ನೇ ವರ್ಷಾಚರಣೆ ಸಂದರ್ಭದಲ್ಲಿ  8  ದಿನಗಳ ನಾಟಕೋತ್ಸವ , 33 ನೇ ವರ್ಷಾಚರಣೆ ಸಂದರ್ಭದಲ್ಲಿ 12  ದಿನಗಳ ರಾಜ್ಯಮಟ್ಟದ ನಾಟಕ ಸ್ಪರ್ಧೆ ,  35 ನೇ ವರ್ಷಾಚರಣೆ ಸಂದರ್ಭದಲ್ಲಿ  5  ದಿನಗಳ ಹಾಗೂ 38 ನೇ ವರ್ಷಾಚರಣೆಯ ಸಂದರ್ಭದಲ್ಲಿ 4  ದಿನಗಳ ನಾಟಕೋತ್ಸವಗಳ ಸಂಯೋಜನೆಯಲ್ಲಿ ಸಕ್ರೀಯ ಪಾತ್ರ .

6. ಕರ್ನಾಟಕ "ನಾಟಕ ಅಕಾಡೆಮಿಯ 'ಗ್ರಾಮೀಣ ನಾಟಕೋತ್ಸವ' ವನ್ನು  2012 ರಲ್ಲಿ ಬೈಂದೂರಿನಲ್ಲಿ ಸಂಘಟನೆ .

7. ಕನ್ನಡ ಸಾಹಿತ್ಯ ಪರಿಷತ್ತಿನ 'ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನ' ದ ಸಂಘಟನೆಯಲ್ಲಿ ಪಾತ್ರ .

 

 


Share