ನಿವೃತ್ತ ಪ್ರಾಂಶುಪಾಲ ಆದರ್ಶ ವ್ಯಕ್ತಿತ್ವದ ಹೊನ್ನ ಮಾಸ್ಟರ್ ಇನ್ನಿಲ್ಲ

ಜನನ 29/12/1931

ಮರಣ 06/07/2016

ಬಿಜೂರು: ಬೈಂದೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತ ಜೀವನ ನಡೆಸುತ್ತಿದ್ದ ಸ್ನೇಹ ಜೀವಿ ,ಸದಾ ಹಸನ್ಮುಖಿ, ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದಂತ , ಆದರ್ಶ ವ್ಯಕ್ತಿತ್ವದ ಬಿ.ಹೊನ್ನ ದೇವಾಡಿಗ (85) ಇವರು ಅಲ್ಪಕಾಲದ ಅಸ್ವಸ್ಥದಿಂದ ಬುಧವಾರ ರಾತ್ರಿ 10:30 ರ ಸಮಯದಲ್ಲಿ ನಿಧನ ಹೊಂದಿದರು.

ಕಾಲೇಜಿನಲ್ಲಿ ಸ್ಕೌಟ್ ಗೈಡ್ ಕಮಾಂಡರ್ ಆಗಿದ್ದ ಇವರು ವಿಧ್ಯಾರ್ಥಿಗಳ ನೆಚ್ಚಿನ ಹೊನ್ನ ಮಾಸ್ಟರ್ ಆಗಿದ್ದರು. ಹಾಗೆಯೇ ಬೈಂದೂರಿನಲ್ಲಿ ದೇವಾಡಿಗ ಉಪ ಸಂಘ ಸ್ಥಾಪಕರೊಬ್ಬರಾಗಿದ್ದರು. ಮದ್ರಾಸಿನ ಓ.ಎಮ್.ಸಿ ಕಾಲೇಜಿನಲ್ಲಿ N.C.C ತರಭೇತಿಯನ್ನು ಪಡೆದಿರುವ ಇವರು ಬೈಂದೂರಿನ ದೇವಾಡಿಗ ಸಂಘದ ಅಧ್ಯಕ್ಷರಾಗಿ ದುಡಿಯುವುದರ ಜೊತೆಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದು ಅಪಾರ ಶಿಷ್ಯವರ್ಗವನ್ನು ಅಗಲಿರುತ್ತಾರೆ.

ಅವರ ಆತ್ಮಕ್ಕೆ ಶಾಂತಿ - ಸದ್ಗತಿ ಸಿಗಲು ಎಂದು ನಮ್ಮ ಪ್ರಾರ್ಥನೆ


Share