ಧರ್ಮಪಾಲ ದೇವಾಡಿಗರಿಗೆ ಮಾತೃ ವಿಯೋಗ: Dharmapal U Devadiga's mother passes

ಧರ್ಮಪಾಲ ದೇವಾಡಿಗರಿಗೆ ಮಾತೃ ವಿಯೋಗ

ಮುಂಬಯಿ, ಎ.01: ಮುಂಬಯಿ ಪ್ರಸಿದ್ಧ ಸಮಾಜ ಸೇವಕ, ಕೈಗಾರಿಕೋದ್ಯಮಿ, ದೇವಾಡಿಗರ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ, ಅಖಿಲ ಭಾರತ ತುಳು ಒಕ್ಕೂಟ ಹಾಗೂ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಅವರ ಮಾತೃಶ್ರೀ ಶ್ರೀಮತಿ ಅಪ್ಪಿ ಉಮ್ಮಣ್ಣ ದೇವಾಡಿಗ (78.) ಅವರು ಇಂದಿಲ್ಲಿ ಶುಕ್ರವಾರ (01.04.2016) ಅಪರಾಹ್ನ ಅಲ್ಪಕಾಲಿಕ ಅನಾರೋಗ್ಯದಿಂದ ಉಡುಪಿ ಕಾಪು ಅಲ್ಲಿನ ಶ್ರೀಸತ್ಯ ನಿವಾಸದ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಕಾಪು ದಿವಂಗತ ಉಮ್ಮಣ್ಣ ದೇವಾಡಿಗ ಅವರ ಧರ್ಮಪತ್ನಿಯಾಗಿದ್ದು, ನಾಲ್ಕು ಗಂಡು, ಮೂರು ಹೆಣ್ಣು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದಿಲ್ಲಿ ಶುಕ್ರವಾರ ರಾತ್ರಿ ಸ್ವನಿವಾಸದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.


Share