ನಾವೇಕೆ ಮುನ್ಸಿಪಲ್ ಕಾರ್ಪೋರೇಟ್, ಎಮ್ ಎಸ್ ಇ ಬಿ, ಮತ್ತು ಸ್ಥಳೀಯ ಕಾರ್ಪೋರೇಟರ್ ಗಳನ್ನು ಕೋರ್ಟಿಗೆ ಎಳೆಯಬಾರದು?

 

ನಿನ್ನೆ  ತಾಣ ದೀಘಾದಲ್ಲಿ ಇಂತಹ ಸಂಕಷ್ಟಕ್ಕೆ ಒಳಗಾದ ದೇವಾಡಿಗ ಕುಟುಂಬವನ್ನು ( ಖಂಬದ ಕೋಣೆ ಮೂಲ ) ಭೇಟಿಯಾದಾಗ ವಿಷಯ ತಿಳಿದು ಮನಸ್ಸು ಭಾರವೆನಿಸಿತು....

ಮಾನ್ಯರೇ ಇತ್ತಿಚಿನ ವರ್ಷಗಳಲ್ಲಿ ಮುOಬೈ, ನವಿಮುOಬೈ, ತಾಣ ಜಿಲ್ಲೆಗಳಲ್ಲಿ ಅನಧಿಕೃತ ನಿವಾಸ ಕಟ್ಟಡಗಳನ್ನು ವಾಸ್ಥವ್ಯವಿರುವವರನ್ನು ಎಬ್ಬಿಸಿ   ಅಪಾರ್ಟ್ಮೆOಟ್ಗಳನ್ನು ನೆಲಸಮಗೊಳಿಸಿ ಅಲ್ಲಿನ ಜನತೆಯನ್ನು ಬೀದಿಗೆ ತಳ್ಳುತ್ತಿದ್ದಾರೆ. ಅಲ್ಲಿ ಕಟ್ಟಡ ಕಟ್ಟುವಾಗದಿOದ ಹಿಡಿದು, ಮುನ್ಸಿಪಲ್ ಕರ್ಪೋರೇಶನ್ ನೀರಿನ ಸOಪರ್ಕ, ವಿದ್ಯತ್ಚಕ್ತಿ ನಿಗಮದ ಕರೆOಟ್  ಸOಪರ್ಕ ವನ್ನು ಒದಗಿಸಿ ನಾಲ್ಕೈದು ವರ್ಷಗಳ ತನಕ ಅಲ್ಲಿ ನಿವಾಸಿಗಳು ಜೀವನ ನಡೆಸುತ್ತಿದ್ದಂತೆಯೇ ಕೊನೆಗೆ ಪ್ರಾಧಿಕಾರ ಆ  ಕಟ್ಟಡ ಅನಧಿಕೃತವೆOದು  ಕೆಡವಿ ಅಲ್ಲಿನವರನ್ನು ಬೀದಿಪಾಲಾಗಲು ಹೊಣೆಗಾರರಾದ ಮುನ್ಸಿಪಲ್ ಕಾರ್ಪೋರೆಶನ್, ಸ್ಥಳೀಯ ಕಾರ್ಪೋರೆಟರ್ ಹಾಗು ವಿದ್ಯುತ್ಚಕ್ತಿ ನಿಗಮದವರನ್ನು ಅದಕ್ಕೆ ಹೊಣೆಗಾರರನ್ನಾಗಿಸಿ ಅವರಿOದ ನಿವಾಸಿಗಳಿಗೆ ಅವರ ಹಣ ವಾಪಸು ಸಿಗುವOತೆ ಮಾಡಲಾಗದೆ ? ನುರಿತ ವಕೀಲರು ತಮ್ಮ ಅಭಿಪ್ರಾಯ ತಿಳಿಸಬೇಕು.

ನಿನ್ನೆ  ತಾಣ ದೀಘಾದಲ್ಲಿ ಇಂತಹ ಸOಕಸ್ಟಕ್ಕೆ ಒಳಗಾದ ದೇವಾಡಿಗ   ಕುಟುOಬವನ್ನು ( ಖOಬದ ಕೋಣೆ ಮೂಲ ) ಭೇಟಿಯಾದಾಗ ವಿಷಯ ತಿಳಿದು ಮನಸ್ಸು ಭಾರವೆನಿಸಿತು. ಮನೆ ಕಳೆದುಕೊOಡವ ಪತ್ನಿ ಈ ಆಘಾತದಿOದ ಪಕ್ಷಿವಾತಕ್ಕೆ ಒಳಗಾಗಿದ್ದಾರೆ. ಅಲ್ಲಿ ಮೂರು ನಿವಾಸದ ಕಟ್ಟಡ ನೆಲಸಮ ಮಾಡಿದ್ದೂ ಮಾತ್ರವಲ್ಲದೆ ಇನ್ನು ಮೂರು ವಸತಿ ಕಟ್ಟಡಗಳನ್ನು ನಿವಾಸಿಗಳನ್ನು ತೆರವುಗೊಳಿಸಿ ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ಅಲ್ಲಿನ ಜನತೆ ಅತ್ತ ಹಣವೂ ಇಲ್ಲದೆ ಇತ್ತ ಸೂರೂ ಇಲ್ಲದೆ ಸ್ವತಂತ್ರ ಪ್ರಜಾಪ್ರಭುತ್ವದ ನಾಡಿನಲ್ಲಿ ಬೀದಿ ಪಾಲಾಗಿದ್ದಾರೆ. ಕಟ್ಟಡ ಮೇಲೆದ್ದು ಮೂಲಭೂತ ಸೌಕರ್ಯ ಒದಗಿಸುವ ತನಕ  ಸತ್ತು ಮಲಗಿದ್ದ ಪ್ರಾಧಿಕಾರ ನಂತರ ಜನತೆಯನ್ನು ಬೀದಿ ಪಾಲು ಮಾಡುವುದು ಯಾವ ನ್ಯಾಯ?.

ಅಲ್ಲಿನ ಆ ವಸತಿ ಸOಕೀರ್ಣಗಳ ಎಮ್ ಐ ಡಿ ಸಿ  ಸೇರಿದ್ದೆOದು ಅಲ್ಲಿನ ಪ್ರಾಧಿಕಾರ ಆಲ್ಲಿನ ನಿವಾಸಿಗಳನ್ನು ಎಬ್ಬಿಸಿದ್ದಾರೆ.ಆದರೆ ಅದೇ ಜಾಗದ ಸುತ್ತ ಮುತ್ತ ಅಂಗಡಿ ಬಾರ್ ರೇಸ್ಟೋರೆOಟ್ ಗಳು ಈಗಲೂ ವ್ಯಾಪಾರ ವಹಿವಾಟು   ನಡೆಸುತ್ತಿದೆ. ಇದು ಪ್ರಾಧಿಕಾರಕ್ಕೆ ಅನಧಿಕೃತವೆOದು ತೋರದೆ ಕಣ್ಣು ಕುರುಡಾಗಿವುದು ಬಹಳ ವಿಚಿತ್ರ .   ಈ ಜಗತ್ತಿನ  ಸ್ರಸ್ಟಿಕರ್ತ ಗಾಳಿ ಬೆಳಕು ನೀರು, ಭೂಮಿಯನ್ನು ಸಮಾನ  ರೀತಿಯಲ್ಲಿ ಅನುಭವಿಸಿ ಅಂತ ಪ್ರಾಣಿ, ಪಶು ಪಕ್ಷಿ ಮಾನವನಿಗೆ  ನೀಡಿರುತ್ತಾನೆ. ಆದರೆ ಮಾನವ ತನ್ನ ಸ್ವಾರ್ಥಕ್ಕಾಗಿ ಇತರರ ಹಕ್ಕನ್ನು ಕಸಿದುಕೊಳ್ಳುವುದು ಅಧರ್ಮ. ಪ್ರಾಣಿ ಪಶು ಪಕ್ಷಿಗಳು ನೀರು ಆಹಾರಕ್ಕಾಗಿ ವಲಸೇ ಹೋದರೆ ಮಾನವ ತನ್ನ ಬದುಕನ್ನು ಕಟ್ಟಿಕೊಳ್ಳಲು ವಲಸೇ ಹೋಗುತ್ತಾರೆ. ನಗರ ಪ್ರದೇಶಗಳಲ್ಲಿ ತಮ್ಮ ತಮ್ಮ ನೌಕರಿಯನ್ನು ಮಾಡುತ್ತಾ ಅಲ್ಲೇ ಸೂರನ್ನು ಕಟ್ಟಿಕೊOಡು ತನ್ನ ಸOಸಾರ ನಡೆಸುತ್ತಾನೆ. ತನ್ನೆಲ್ಲ ಖರ್ಚುಗಳಿಗೆ ಅಂಕುಶವಿಟ್ಟು ದುಡಿದ ಹಣವನ್ನು ಉಳಿತಾಯ ಮಾಡುವುದರ ಜೊತೆಗೆ ಸ್ವಲ್ಪ ಕಡಿಮೆ ಬಿದ್ದಲ್ಲಿ ತನ್ನ ಸOಬOದಿಕರಿOದಲೋ ಯಾ ಸ್ನೇಹಿತರಿOದ ಸಾಲ ಪಡೆದು ಒಂದು ತನ್ನದೇ ಆದ ಮನೆಯನ್ನು ಮಾಡಿ ಜನ್ಮ ಸಾರ್ಥಕವಾಯಿತು ಎನ್ನುವಸ್ಟರಲ್ಲಿ ಅವನ ಮನೆ  ಅನಧಿಕೃತ ಎOದು ಎಲ್ಲಾವನ್ನೂ ಕಳಕೊOಡು ತನ್ನ ಸOಸಾರದ ಜತೆ ಬೀದಿಪಾಲಾದಾಗ ಅವನ ಮನಸ್ಥಿತಿ ಹೇಗಿರಬೇಡ. ಇಂತ ಬಡ ಜನತೆಯ ಜೊತೆಕಳ್ಳಾಟವಾಡುವ ಮುನ್ಸಿಪಲ್ ಆಫೀಸ್ ನ, ವಿದ್ಯತ್ಚಕ್ತಿ ನಿಗಮದ ಬ್ರಸ್ಟ ಅಧಿಕಾರಿಗಳು ಹಾಗು ಬಿಲ್ಡರ್ಗಳ ಹಾಗು ಇವರ ಜತೆ ಕೈಜೋಡಿಸುವ ಬ್ರಸ್ಟ ಕಾರ್ಪೋರೇಟರ್ ಗಳ ಮನೆಗಳನ್ನು ನೆಲಸಮ ಮಾಡಬೇಕು ಮತ್ತು ಅವರಿOದಲೇ ಬೀದಿ ಪಾಲಾದ ಕುಟುOಬಗಳಿಗೆ ಅವರು ಕೂಡಿಟ್ಟ ಹಣದಿOದ ಪುಣರ್ವಸತಿ ಒದಗಿಸಿ ಕೊಡಬೇಕು. ಅಲ್ಲದೆ ಇಂತಹ  ಭೃಷ್ಟರನ್ನು ಗಲ್ಲಿಗೇರಿಸಬೇಕು.

ಅಲ್ಲಿನ  ತುಳು ಕನ್ನಡಿಗರ ಬದುಕು ಇಂದು ಅತಂತ್ರವಾಗಿದೆ . ಈಗಾಗಲೇ ಬೆOಗಳೂರಿನಲ್ಲಿ ಸಾಮಾಜಿಕ ಕಾರ್ಯಕರ್ತರುಗಳಾದ ಶ್ರೀ ವೇಣುಗೋಪಾಲ್, ಶ್ರೀ ಎನ್ ಆರ್ ಮಠದ್ ,ಚಿಂತಕರಾದ ಡಾ ವಿಜಿಯಮ್ಮ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್ ಎಸ್ ದೊರೆಸ್ವಾಮಿಯವರ  ನೇತ್ರತ್ವದಲ್ಲಿ ಭೂಮಿ ,ವಸತಿ ವಂಚಿತರ ಹೋರಾಟ ಸಮಿತಿಯನ್ನು ರಚಿಸಿಕೊOಡು ನಿತ್ಯ ನೂರು ಜನರ ನಿರಂತರ ಸತ್ಯಾಗ್ರಹ ಹೋರಾಟವನ್ನು ರಾಜಧಾನಿ ಬೆOಗಳೂರಿನಲ್ಲಿ  ಹೊಮ್ಮಿಕೊOಡಿದೆ.

ಈ ಹೋರಾಟವನ್ನು ನಗರದಿOದ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುವ ಯೋಜನೆಯಿದೆ.ಆದರೆ ನನ್ನ ಪ್ರಕಾರ ಇದು ಇಡೀ ದೇಶಕ್ಕೆ ವಿಸ್ತರಿಸಬೇಕು. ಅಧಿಕಾರ ವಹಿಸಿಕೊOಡ ರಾಜಕಾರಣಿಗಳು ಬರೇ ಅವರ ಕುಟುOಬವನ್ನು, ದೊಡ್ದ ದೊಡ್ದ ಉದ್ಯಮಿಗಳನ್ನು ಉದ್ದಾರ ಮಾಡುತ್ತಿದ್ದರೆಯೇ ಹೊರತು ವಸತಿ ಹೀನರಿಗೆ ಸೂರು ಕಲ್ಪಿಸುವತ್ತ ಆಸಕ್ತರಾಗಿಲ್ಲ. ಅರಣ್ಯದ ಜಾಗವೋ ಯಾ ಸರಕಾರಿ ಜಾಗವೆOದು ಕಾರಣ ನೀಡಿ ಬಡ ಜನತೆಯನ್ನು ನಡು ಬೀದಿಗೆ ತಳ್ಳುತ್ತಿದ್ದಾರೆ. ಇದು ಮಹಾತ್ಮ ಗಾಂಧಿ ಕಂಡ ಕನಸಿನ  ಪ್ರಜಾಪ್ರಭೂತ್ವವOತು ಖಂಡಿತಾ ಅಲ್ಲ.

ಈಗ  ಮತ್ತೊOದು ಗಣರಾಜ್ಯೋತ್ಸವದ  ಆಚರಣೆಗಾಗಿ Oಬ್ರಮಿಸುತ್ತಿರುವ ಭಾರತಕ್ಕೆ  ತಮ್ಮ ಸೂರು ಹಣ ಎರಡನ್ನೂ ಕಳೆದುಕೊO ಜನತೆಯ ರೋದನವನ್ನು ಕೇಳಿಕೇಳಿಸದOತಿರುವುದು ನಾಗರಿಕ ಸಮಾಜದ  ದುರಂತವಲ್ಲವೇ ?. ಏನಂತೀರಿ ?.

ಗಣೇಶ್ ಎಸ್ ಬ್ರಹ್ಮಾವರ್ನವೀಮುOಬೈ 

9594228684

 


Share