(Updated) ಕಾರ್ಕಳ ಸಂಘದ ವಾರ್ಷಿಕೋತ್ಸವ - ಸನ್ಮಾನ - ವ್ಯವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

 

ಕಾರ್ಕಳ: ದೇವಾಡಿಗ ಸುಧಾರಕ ಸಂಘ (ರಿ) ಕಾರ್ಕಳ ಇದರ ವಾರ್ಷಿಕ ಮಹಾಸಭ ಮತ್ತು ವಾರ್ಶಿಕೋತ್ಸವ ಸಮಾರಂಭ ಸಂಘದ ಸಮುದಾಯ ಭವನದಲ್ಲಿ ತಾ.೧೭-೪-೨೦೧೬ ರಂದು ಸಂಭ್ರಮದಿಂದ ಜರುಗಿತು. ಮಹಾಸಭೆಯಲ್ಲಿ  ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

 

 

 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀಯುತ ವಾಮನ್ ಮರೋಳಿಯವರಿಂದ ಧ್ವಜಾರೋಹಣದ ಮೂಲಕ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ.

ಕಾರ್ಯಕ್ರಮ ನಿರ್ವಹಣೆ: ಶ್ರೀ ಸಂಜೀವ ದೇವಾಡಿಗ, ಪ್ರಧಾನ ಕಾರ್ಯದರ್ಶಿ.

ವಾರ್ಷಿಕಾಂಕ " ಸಂಭ್ರಮ" ಬಿಡುಗಡೆ :- ಚಂದ್ರಕಾಂತ್ ಉಡುಪಿ, ಇವರಿಂದ.

ಸ್ಯಾಕ್ಸ್ಫೋನ್ ವಿದ್ಯೆ ಕಲಿಯುವ ಅಪೇಕ್ಷೆ ಉಳ್ಳವನಾಗಿ ಸಂಘಕ್ಕೆ ಮನವಿ ಸಲ್ಲಿಸಿದಂತೆ ಸಂಘದ ಸಹ್ರದಯ ದಾನಿಗಳ ಉದಾರ ಕೊಡುಗೆಯಿಂದ ನೀಡಿದ ಸ್ಯಾಕ್ಸ್ಫೋನ್ ಸ್ವೀಕರಿಸುತ್ತಿರುವ ನಮ್ಮ ಸಮಾಜದ ಅರಳು ಪ್ರತಿಭೆ. ಸಂಜೀವ ದೇವಾಡಿಗ ಶಿರ್ಲಾಲು.


ಸಮಸ್ತ ಸಮುದಾಯದ ಸಮಾಜ ಸೇವೆಗೆ ಸಲ್ಲಿಸಿದ ಅನುಪಮ ಕೊಡುಗೆಯನ್ನು ಗುರುತಿಸಿ ಸಂಘದ ವತಿಯಿ೦ದ " ದೇವಾಡಿಗ ರತ್ನ " ಬಿರುದಿನೊಂದಿಗೆ ನೀಡಲ್ಪಟ್ಟ ಸನ್ಮಾನವನ್ನು ಸ್ವೀಕರಿಸುತ್ತಿರುವ ರಾಬರ್ಟ್ ಸಂಜೀವ ದೇವಾಡಿಗ

"ದೇವಾಡಿಗ ರತ್ನ" ಬಿರುದಿನೊಂದಿಗೆ ಸನ್ಮಾನಿತರಾದ ಅನುಕ್ರಮವಾಗಿ ಪಾರಂಪರಿಕ ವಾದ್ಯ ಸಂಗೀತವಾದ ಪಂಚವಾದ್ಯ ನುಡಿಸುವ ರೆಂಜಾಳ ನಾರಾಯಣ ದೇವಾಡಿಗ, ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ಶ್ರೀಮತಿ ಶೋಭಾ ಕುಮಾರಿ ತೆಳ್ಳಾರು, ಹೆಬ್ರಿಯ ಹೆಬ್ಬೇರಿ ಉತ್ಸವದ ರೂವಾರಿ ಅಧ್ಭುತ ಸಂಘಟಕ ಶ್ರೀಯುತ ಶೇಖರ ಹೆಬ್ರಿ, ರಂಗ ಭೂಮಿಯ ನಾನಾ ಪ್ರಾಕಾರಗಳಲ್ಲಿ ಸೈ ಎನಿಸಿದ ಶ್ರೀ ಸುಂದರ ಮೊಯ್ಲಿ , ಕೆಮ್ಮಣ್ಣು . 

ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ :

 

 


Share