ಬಹು ನಿರೀಕ್ಷಿತ ಅದ್ದೂರಿ ಸಮಾರಂಭ 'ದೇವಾಡಿಗ ವೈಭವ 2016'ರ ದಿನ ನಿಗದಿ; ದೇವಾಡಿಗರ ಶಕ್ತಿ ಪ್ರದರ್ಶನಕ್ಕೆ ಭದ್ರ ಕೋಟೆ ಬೈಂದೂರಿನಲ್ಲಿ ವೇದಿಕೆ ಸಜ್ಜು

 

ದೇವಾಡಿಗ ವೈಭವ - 2016: ಪೂರ್ವಭಾವಿ ಸಭೆ

ಬೈಂದೂರಿನಲ್ಲಿ  ದೇವಾಡಿಗ ರಿಗೆ   ನೃತ್ಯ - ಫ್ಯಾಶನ್ ಶೋ ಸ್ಪರ್ಧೆ ,ಸಾಧಕರಿಗೆ ಸನ್ಮಾನ ಹಾಗು  ವಿದ್ಯಾರ್ಥಿವೇತನ  ಸಮಾರಂಭ

ದೇವಾಡಿಗ ವೈಭವ ಕಲ್ಚರಲ್ ಕ್ಲಬ್ , ದೇವಾಡಿಗರ ಒಕ್ಕೂಟ (ರೀ) ಬೈಂದೂರು ಹಾಗು  ದೇವಾಡಿಗ ವೆಲ್ಫೇರ್  ಅಸೋಸಿಯೇಷನ್  (ರೀ) ಮುಂಬೈ  ಇವರ ಜಂಟಿ ಆಶ್ರಯದಲ್ಲಿ  ದೇವಾಡಿಗ ವೈಭವ - 2016 ಕಾಯ೯ಕ್ರಮವನ್ನು  ಮೇ 21  ಶನಿವಾರದಂದು ಬೈಂದೂರಿನ ಜೆ.ಏನ್ .ಆರ್ ಕಲಾಮಂದಿರದಲ್ಲಿ ಆಯೋಜಿಸುವ  ತೀರ್ಮಾನವನ್ನು ದೇವಾಡಿಗ ವೈಭವ 2016  ಕಾಯ೯ಕಾರಿ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಯಿತು.

 

ಗೌರವಾದ್ಯಕ್ಷರಾದ ನೀತ್ ರಾಜ್  ಬೈಂದೂರ್ , ಅಧ್ಯಕ್ಷರಾದ ಕಿರಣ್ ಬೈಂದೂರ್, ಕಾರ್ಯದರ್ಶಿಯಾದ  ಚರಣ್ ಬೈಂದೂರ್ ಹಾಗು ಜೊತೆ ಕಾರ್ಯದರ್ಶಿ ಅವಿನಾಶ್  ದೇವಾಡಿಗ ಹಾಗು ಇತರೇ ಸದಸ್ಯರುಗಳು ಉಪಸ್ಥಿತರಿದ್ದರು.

 

ಈ ಕೆಳಗಿನ ಸ್ಪರ್ದೆಗಳನ್ನು ಮತ್ತು ಫ್ರತಿಭಾ ಪುರಸ್ಕಾರಯೋಜನೆಯನ್ನು ಹಮ್ಮಿಕೊಳ್ಳಳು ನಿರ್ಧರಿಸಲಾಯಿತು.

*ಎಸ್.ಎಸ್.ಎಲ್,ಸಿ ಹಾಗು ದ್ವಿತೀಯ ಪಿ.ಯು.ಸಿ ಯಲ್ಲಿ ಶೇಕಡಾ 80% ಅಂಕ ಪಡೆದಿರುವ  ಬೈಂದೂರು ಪ್ರದೇಶದ ದೇವಾಡಿಗ  ಸಮಾಜದ  ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ.

*ವ್ರತ್ತಿ ಶಿಕ್ಷಣ ಪಡೆಯುತ್ತಿರುವ ಬೈಂದೂರು ಪ್ರದೇಶದ ದೇವಾಡಿಗ  ಸಮಾಜದ  ಅರ್ಹ ಬಡ ವಿದ್ಯಾರ್ಥಿಗಳಿಗೆ  ಗೌರವ ಧನ ವಿತರಣೆ 

*ಸಮಾಜದ  ಅರ್ಹ ಬಡ ವಿದ್ಯಾರ್ಥಿಗಳಿಗೆ  ನೋಟ್ ಪುಸ್ತಕ ವಿತರಣೆ 

*ಸಮಾಜದ ಸಾಧಕರಿಗೆ ಗೌರವ ಸನ್ಮಾನ  

 

*ದೇವಾಡಿಗ ಟ್ರಾನ್ಸ್ ಮೇನಿಯ ನೃತ್ಯ ಸ್ಪರ್ದೆ (ಪ್ರತ್ಯೇಕ  ಹಾಗು ಗುಂಪು )

*ದೇವಾಡಿಗ ದೇಸಿ ಧಶಕ್ (ಗ್ರೂಪ್ ಫ್ಯಾಷನ್ ಶೋ )

*ಸಂಗೀತ ರಸ ಸಂಜೆ 

 

ದೇವಾಡಿಗ ಟ್ರಾನ್ಸ್ ಮೇನಿಯ ನೃತ್ಯ   (ಪ್ರತ್ಯೇಕ ) ಸ್ಪರ್ದೆಗೆ ಪ್ರಥಮ  ಬಹುಮಾನ   8000 , ದ್ವಿತಿಯ  ಬಹುಮಾನ  7000 , ತ್ರತೀಯ ಬಹುಮಾನ 6000 .  ದೇವಾಡಿಗ ಟ್ರಾನ್ಸ್ ಮೇನಿಯ ನೃತ್ಯ  (ಗುಂಪು) ಸ್ಪರ್ದೆಗೆ ಪ್ರಥಮ  ಬಹುಮಾನ   12000 , ದ್ವಿತಿಯ  ಬಹುಮಾನ  10000 , ತ್ರತೀಯ ಬಹುಮಾನ 8000 .ದೇವಾಡಿಗ ದೇಸಿ ಧಶಕ್ (ಗ್ರೂಪ್ ಫ್ಯಾಷನ್ ಶೋ )  ಸ್ಪರ್ದೆಗೆ ಪ್ರಥಮ  ಬಹುಮಾನ   12000 , ದ್ವಿತಿಯ  ಬಹುಮಾನ  10000 , ತ್ರತೀಯ ಬಹುಮಾನ 8000 , ಈ ಬಾರಿಯ  ದೇವಾಡಿಗ ದೇಸಿ ಧಶಕ್ ಗ್ರೂಪ್  ಸ್ಪರ್ದೆ ಆಗಿದ್ದು ಪ್ರತಿ ತಂಡದಲ್ಲೂ 8  ಜನರನ್ನು ಹೊಂದಿರಬೇಕು , ಈ  ಸ್ಪರ್ದೆಗಳು ಮುಕ್ತವಾಗಿದ್ದು ವಿಶ್ವದಾದ್ಯಂತ ನೆಲೆಸಿರುವ ದೇವಾಡಿಗ ಸಮಾಜ ಭಾಂದವರು ಭಾಗವಹಿಸಬಹುದು.

 

ಸ್ಪರ್ದೆಗಳ ನೊಂದಾವಣೆ ಆರಂಭವಾಗಿದ್ದು  ಜನವರಿ  31 ಕೊನೆಯ ದಿನವಾಗಿರುತ್ತದೆ. ಅತಿ ಹೆಚ್ಚಿನಸಂಖ್ಯೆಯಲ್ಲಿ ದೇವಾಡಿಗ ಸಮಾಜ ಭಾಂದವರು  ಈ  ಕಾಯ೯ಕ್ರಮದಲ್ಲಿ ಭಾಗವಹಿಸಬೇಕಾಗಿ ಕಾರ್ಯದರ್ಶಿ  ಚರಣ್ ಬೈಂದೂರ್  ಪತ್ರಿಕಾ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಮಾಹಿತಿಗಾಗಿ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ :

 

ಚರಣ್ ಬೈಂದೂರ್: 9964605360

ಕಿರಣ್ ಬೈಂದೂರ್: 7829915202

ನೀತ್ ರಾಜ್  ಬೈಂದೂರ್ :8123333032

ಅವಿನಾಶ್ ಬಿ  ದೇವಾಡಿಗ:09769216405


Share