ಸಪ್ತಸ್ವರ ವಿವಿದ್ದೋದ್ದೇಶ ಸಹಕಾರಿ ಸಂಘ(ರಿ) ತಲ್ಲೂರು - ವಿದ್ಯಾರ್ಥಿವೇತನ ವಿತರಣಾ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ

 

ತಲ್ಲೂರು:  ಭಾರತೀಯ ಜೀವವಿಮಾ ನಿಗಮ ಇವರ ಶಿಕ್ಷಾ ಆಯೋಗ ಯೋಜನಾ ಅನ್ವಯ ನೀಡಲ್ಪಡುವ ವಿದ್ಯಾರ್ಥಿ ವೇತನವನ್ನು ಅರ್ಹ ೫೫ ವಿದ್ಯಾರ್ಥಿಗಳಿಗೆ ಜಯದುರ್ಗಾ ಮಾತಾ ಸಭಾಭವನದಲ್ಲಿ ಜರುಗಿದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ೬೬,೦೦೦ ( ಅರವತ್ತಾರು ಸಾವಿರ ರೂಪಾಯಿ ) ವಿದ್ಯಾರ್ಥಿ ವೇತನ ವಿತರಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಪ್ತಸ್ವರ ಸಹಕಾರಿ ಸಂಘದ ಅಧ್ಯಕ್ಷರಾದ ಎಮ್. ಸಂಜೀವ ದೇವಾಡಿಗ ತಲ್ಲೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ. ಏಕನಾಥೇಶ್ವರೀ ಟ್ರಸ್ಟ್ ರಿಜಿಸ್ಟಡ್ ಬಾರ್ಕೂರು ಇದರ ಮ್ಯಾನೇಜಿಂಗ್ ಟ್ರಸ್ಟಿಯಾದ ಅಣ್ಣಯ್ಯ ಸೇರಿಗಾರ್ ಬಾರ್ಕೂರು, ಯುವ ಸಾಹಿತಿ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಪುರಸ್ಕ್ರತರು ಹಾಗೂ ವಿಶ್ವಮಾನ್ಯ ಅಗ್ರ ಕನ್ನಡಿಗ ಪ್ರಶಸ್ತಿ ವಿಜೇತರಾದ ಜ್ಯೋತಿ ಎಸ್. ದೇವಾಡಿಗ ( ಶಯ ದೇವಿಸುತ ) ಮರವಂತೆ, ಸುಳ್ಸೆ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಮಂಜು ದೇವಾಡಿಗ ಸುಳ್ಸೆ, ಶಾರದಾ ದೇವಾಡಿಗ ಚಿತ್ರಾಡಿ ನಾಗೂರು ಮತ್ತು ಸಪ್ತಸ್ವರ ಸಹಕಾರಿ ಸಂಘದ ನಿರ್ದೇಶಕರಾದ ಬಸವ ದೇವಾಡಿಗ ಉಪ್ಪಿನಕುದ್ರು, ರಾಜೇಶ್ ದೇವಾಡಿಗ ತ್ರಾಸಿ, ರಾಘವೇಂದ್ರ ದೇವಾಡಿಗ ಹೊಸ್ಕಳಿ ಮತ್ತು ಸಂಘದ ಸಿಬ್ಬಂದಿಯಾದ ಕೃಷ್ಣ ದೇವಾಡಿಗ ಹೆಮ್ಮಾಡಿ, ಮುಡಾಡಿ ನಾಗದೇವತೆ ಸ್ವರಸಿಂಚನ ಸ್ವಸಹಾಯ ಸಂಘದ ಅಧ್ಯಕ್ಷರಾದ ಶ್ರೀಲತಾ ದೇವಾಡಿಗ ಹೆಮ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.

 ಸಪ್ತಸ್ವರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿ ದೇವಾಡಿಗ ಉಪ್ಪಿನಕುದ್ರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

 


Share