ದೇವಾಡಿಗ ಸಂಘ ಬೆಂಗಳೂರು ಇದರ ಅಧ್ಯಕ್ಷರಾಗಿ ಕಂಕನಾಡಿ ಶ್ರೀ ಚಂದ್ರಶೇಕರ್ ದೇವಾಡಿಗ ಆಯ್ಕೆ

 

ಬೆಂಗಳೂರು: ದೇವಾಡಿಗ ಸಂಘ ಬೆಂಗಳೂರು ಇದರ ಅಧ್ಯಕ್ಷರಾಗಿ  ಕಂಕನಾಡಿ   ಶ್ರೀ ಚಂದ್ರಶೇಕರ್ ದೇವಾಡಿಗರು   ಇಂದು ಆಯ್ಕೆ ಯಾದರು. 

ಸ್ಪಟಿಕದಂತೆ  ಸದಾ ಹಸನ್ಮುಖಿಯಾಗಿರುವ ಲವಲವಿಕೆಯಿಂದ ಇರುವ ಶ್ರೀಯುತರು ದೇವಾಡಿಗ ಸಮಾಜದ  ಅಜಾತಶತ್ರು ಎಂದರೆ ತಪ್ಪಲ್ಲ. ಕರ್ಣಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು ಇದರ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿರುವ ಇವರು ಸಮಾಜದ  ಸಂಘಟನಾ ಕ್ರಮವನ್ನು ಮೊದಲೇ ಕಾರ್ಯಗತ ಮಾಡಿಕೊಂಡವರು. ಕಳೆದ 12 ವರ್ಷಗಳಿಂದ ಬೆಂಗಳೂರ್ ದೇವಾಡಿಗ ಸಂಘದ ಆಡಳಿತ ಮಂಡಳಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ , ಉಪಾಧ್ಯಕ್ಷರಾಗಿ ಸೇವೆಗೈದ ಶ್ರೀ ಚಂದ್ರ ಶೇಕರ್ ದೇವಾಡಿಗ ಸ್ನೇಹಮಯೀ ವ್ಯಕ್ತಿತ್ವವುಳ್ಳ ಪ್ರಗತಿಪರ ಚಿಂತನಕಾರ.

ಇವರ ಘನ ಅಧ್ಯಕ್ಷತೆಯಲ್ಲಿ ಬೆಂಗಳೂರು ದೇವಾಡಿಗ ಸಂಘ ಐತಿಹಾಸಿಕ ಮೈಲುಗಳನ್ನು ತಲುಪಲಿ ಎನ್ನುವುದೇ ನಮ್ಮ ಹಾರೈಕೆಗಳು. 


Share