ಆಯ೯ಭಟ ಇಂಟರ್‌ನ್ಯಾಷನಲ್ ಅವಾರ್ಡ್ಸ್ ಸ್ವೀಕರಿಸಿದ ದಿನೇಶ್ ಚಂದ್ರಶೇಖರ್ ದೇವಾಡಿಗ ನಾಗೂರು

 

ಬೆಂಗಳೂರು: ದುಬೈ ಯ ಕದಂ ಕುಂದಾಪುರ ದೇವಾಡಿಗ ಮಿತ್ರ  ಇದರ ಸ್ಫಾಪಕ ಅಧ್ಯಕ್ಷರಾಗಿರುವ   ನಮ್ಮ ಕುಂದಾಪುರ ಕನ್ನಡ ಬಳಗದ ಇದರ ಉಪಾಧ್ಯಕ್ಷರಾಗಿರುವ ಶ್ರೀಯುತ  ದಿನೇಶ್ ಚಂದ್ರಶೇಖರ್ ದೇವಾಡಿಗ ನಾಗೂರು ಇಂದು ಸಂಜೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಆಯ೯ಭಟ ಇಂಟರ್‌ನ್ಯಾಷನಲ್ ಅವಾರ್ಡ್ಸ್ ನ್ನು ತಮ್ಮ ಮುಡಿಗೇರಿಸಿ ಕೊಂಡರು...

ತಮ್ಮ  ಸ್ವಂತ ಚಿಂತೆಯ ಜೊತೆ ಸಮಾಜದ ಚಿಂತೆಯನ್ನು ಮಾಡಲಾರಂಭಿಸಿದಾಗ ಆತ ಸಮಾಜದಲ್ಲಿ ಒಬ್ಬ ಸುಸಂಸ್ಕೃತ   ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ಹಾಗೆಯೇ ತಂದೆ ತಾಯಿಯ ಪ್ರೀತಿ ಆಸರೆ ಇದ್ದರೆ ಮಾತ್ರ  ವ್ಯಕ್ತಿ ಸಮಾಜದಲ್ಲಿ  ಅಭಿವೃದ್ಧಿಯ ಹೊಂದಲು  ಸಾಧ್ಯ ಹಾಗೆಯೇ ದಿನೇಶ್ ರವರ ಇಷ್ಟೊಂದು ಯಶಸ್ವಿ ವ್ಯಕ್ತಿಯಾಗಲು ಅವರು ಬೆಳೆದುಬಂದ ದಾರಿ ಮೂಲ ಕಾರಣ ಅವರಲ್ಲಿನ ಸರಳತೆ ಮನೋಭಾವನೆ... ಸಹಾಯ ಮಾಡುವ ಇಚ್ಛಾಶಕ್ತಿ ...ಸಂಸ್ಥೆ ಹಾಗು ಸಂಘಟನೆಯಿಂದ ಸಮಾಜಮುಖಿ  ಕೆಲಸಕ್ಕೆ ಕೈಜೋಡಿಸಿದಾಗ ಮಾತ್ರ ಸಮಾಜಿಕ ಅಭಿವೃದ್ಧಿ ಸಾಧ್ಯವೇಂಬುದು ಇವರ ಮೂಲ  ಧ್ಯೇಯ ..

 " ಸೇವೆ ಎಂಬುದು ಅಕ್ಷಯ ಪಾತ್ರೆ "

ಇದು ಯಾವತ್ತಿಗೂ ಬರಿದಾಗದು ನೀವೂ ಮಾಡುವಸೇವೆಗೆ ಹಲವು ಅಡೆತಡೆಗಳು ಬಂದರು ನೀವು ಮಾಡುವಂತಹ ಪುಣ್ಯದ ಕೆಲಸದ ಮುಂದೆ ಅದು ಶೂನ್ಯ.. ನಿಮ್ಮ  ಈ ಸೇವಾ ಮನೋಭಾವವೆ ಎಲ್ಲಾ ಯುವಶಕ್ತಿಗೆ ಪ್ರೇರಕವಾಗಲಿ ಯಾವುದೆ ಸ್ವಾಥ೯ವಿಲ್ಲದೆ ಪ್ರತಿಫಲ ಅಪೇಕ್ಷೆಯಿಲ್ಲದೆ ನಿಮ್ಮ  ಈ ಸಮಾಜಮುಖಿ ಕೆಲಸಕ್ಕೆ ಇಂದು ರಾಜ್ಯವೇ ಗುರುತಿಸಿ ನಿಮಗೆ ಆಯ೯ಭಟ ಇಂಟರ್‌ನ್ಯಾಷನಲ್ ಪ್ರಶಸ್ತಿ ನೀಡಿ  ಗೌರವವಿಸಿದೆ ನಿಮಗೆ ಪ್ರಪಂಚದಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಾಹಾಪೂರ ಹರಿದು ಬರುತಿದೆ

ಶ್ರೀಯುತ ದಿನೇಶ್ ಚಂದ್ರಶೇಖರ್ ದೇವಾಡಿಗ ನಾಗೂರು ಇವರಿಗೆ ಅಭಿನಂದನೆ ಸಲ್ಲಿಸಿದ ಪ್ರತಿಯೊಬ್ಬರಿಗೂ ದೇವಾಡಿಗ.ಕಾಮ್ ಹಾಗೂ  ಕದಂ ಕುಂದಾಪುರ ದೇವಾಡಿಗ ಮಿತ್ರವತಿಯಿಂದ ಅನಂತ ಅನಂತ ಧನ್ಯವಾದಗಳು.


Share