ಮೆಟ್ಟಿನಹೊಳೆ ಶಾಲೆಯ ಶಿಕ್ಷಕ ಮಂಜುನಾಥ ದೇವಾಡಿಗ ಅವರಿಗೆ “ಜ್ಞಾನ ಜ್ಯೋತಿ” ಪ್ರಶಸ್ತಿ

 

ಬೈಂದೂರು ಡಿ.18 : ಶಿಕ್ಷಣ ಜ್ಞಾನ -ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು “ಶ್ರೀ ತರಳಬಾಳು ಜಗದ್ಗುರು ಕಲ್ಯಾಣ ಮಂಟಪದ ಬೀರೂರು ಚಿಕ್ಕಮಗಳೂರು ಇಲ್ಲಿ ನಡೆಯಿತು.ಬೈಂದೂರು ಡಿ.18 : ಶಿಕ್ಷಣ ಜ್ಞಾನ -ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು “ಶ್ರೀ ತರಳಬಾಳು ಜಗದ್ಗುರು ಕಲ್ಯಾಣ ಮಂಟಪದ ಬೀರೂರು ಚಿಕ್ಕಮಗಳೂರು ಇಲ್ಲಿ ನಡೆಯಿತು.


ರಾಜ್ಯದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಹಲವು ಸಾಧಕರನ್ನು ವಿವಿಧ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಗೆ ಆಯ್ಕೆ ಮಾಡುವಾಗ ಯಾವುದೇ ಅರ್ಜಿಗಳನ್ನು ಆಹ್ವಾನಿಸದೆ ತಾವೇ ಗುರುತಿಸಿ ಪ್ರಶಸ್ತಿ ನೀಡಿರುವುದು ವಿಶೇಷವಾಗಿತ್ತು.

ಉಡುಪಿ ಜಿಲ್ಲೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬೈಂದೂರು  ವಲಯದ ಮೆಟ್ಟಿನಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಅಧ್ಯಾಪಕರಾದ  ಮಂಜುನಾಥ ದೇವಾಡಿಗ ರಿಗೆ “ಜ್ಞಾನ ಜ್ಯೋತಿ “ಪ್ರಶಸ್ತಿ ಯನ್ನು ಬೀರೂರು ಶ್ರೀಮದ್ ರಂಭಾಪುರಿ ಮಠಾಧೀಶರಾದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗಳು ,ಬೀರೂರಿನ ಶಾಸಕರಾದ ಶ್ರೀ ಕೆ .ಬಿ .ಮಲ್ಲೀಕಾರ್ಜುನರವರು, ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ  ಎಸ್ .ದೊಡ್ಡಮಲ್ಲಪ್ಪನವರ ಉಪಸ್ಥಿತಿಯಲ್ಲಿ ಹೈ ಕೋರ್ಟ್ ನ ನಿವೃತ್ತ ನ್ಯಾಯಾಧೀಶರ ಎಚ್ .ಬಿಲ್ಲಪ್ಪನವರು ಪ್ರದಾನ ಮಾಡಿದರು.

http://www.devadiga.com/special/news-makers/384-2016-06-22-07-47-45

 

 


Share