ದೇವಾಡಿಗ ಸ.ಸೇ. ಸಂಘ ಕುಂದಾಪುರ: ಮಹಾಸಭೆ

ಕುಂದಾಪುರ: ನಮ್ಮ ಮಕ್ಕಳಿಗೆ ಸಮಾಜದ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಲು ಪ್ರೇರಣೆ ನೀಡುವ ಕೆಲಸವನ್ನು  ಪೋಷಕರು  ಮಾಡುವ ಮೂಲಕ ಸಂಘದ ಅಭಿವೃದ್ಧಿಯಲ್ಲಿ ಪಾತ್ರ ವಹಿಸಬೇಕು ಎಂದು ಮುಂಬಯಿ ಉದ್ಯಮಿ ಸುರೇಶ್‌ ಡಿ. ಪಡುಕೊಣೆ ಹೇಳಿದರು.

ಅವರು ಕುಂದಾಪುರ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ  ನಡೆದ ದೇವಾಡಿಗ ಸಮಾಜ ಸೇವಾ ಸಂಘ (ರಿ.) ಕುಂದಾಪುರ  ಇದರ ವಾರ್ಷಿಕ ಮಹಾಸಭೆಯಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ವಾಸು ಎಸ್‌. ದೇವಾಡಿಗ, ಪುಣೆಯ ಉದ್ಯಮಿ ಬಾರಕೂರು ಅಣ್ಣಯ್ಯ ಶೇರಿಗಾರ್‌, ಉಡುಪಿ ಜಿ.ಪಂ. ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಮುಂಬಯಿ  ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಗೋಪಾಲ ಮೊಲಿ, ಶ್ರೀ ಏಕನಾಥೇಶ್ವರೀ ದೇವಸ್ಥಾನದ ಪ್ರಚಾರ ಸಮಿತಿಯ  ಕಾರ್ಯದರ್ಶಿ ಜನಾರ್ದನ ದೇವಾಡಿಗ, ಕೋಟೇಶ್ವರ  ದೇವಾಡಿಗ ಸಂಘದ ಅಧ್ಯಕ್ಷ ಚಂದ್ರ ದೇವಾಡಿಗ, ಬೈಂದೂರು ದೇವಾಡಿಗ ಸಂಘದ ಅಧ್ಯಕ್ಷ  ನಾರಾಯಣ ದೇವಾಡಿಗ, ಚಿತ್ತರಂಜನ್‌ ಕುಮಾರ್‌ ದೇವಾಡಿಗ, ಸಂಸ್ಥೆಯ ಗೌರವಾಧ್ಯಕ್ಷ ದತ್ತಾತ್ರೇಯ ದೇವಾಡಿಗ, ಗಣೇಶ್‌  ಕೆ., ಮಹಿಳಾ ಸಂಘದ ಅಧ್ಯಕ್ಷೆ ಲೀಲಾ ಜಗನ್ನಾಥ, ಉದಯ ಹೇರಿಕೆರೆ, ಉದಯ ಡಿ. ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ  ಕಾರ್ಯದರ್ಶಿ ಆಲೂರು  ರಘುರಾಮ ದೇವಾಡಿಗ, ಉಡುಪಿ ಜಿಲ್ಲಾ ಪಂಚಾಯತ್‌  ಶಿಕ್ಷಣ ಮತ್ತು ಆರೋಗ್ಯ  ಸ್ಥಾಯಿಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಯಕ್ಷಗಾನ ಮದ್ದಳೆಗಾರ ಶ್ರೀಧರ ಭಂಡಾರಿ ಕಮಲಶಿಲೆ, ವಾದ್ಯ ಕಲಾವಿದ ಕೊರಗ ದೇವಾಡಿಗ, ಅಂತಾರಾಷ್ಟ್ರೀಯ ಪವರ್‌ ಲಿಫ್ಟರ್‌ ಸುರೇಶ್‌ ಪಡುಕೋಣೆ, ಹಿರಿಯರ ವಿಭಾಗದ ಅಂತಾರಾಷ್ಟ್ರೀಯ ಪವರ್‌ ಲಿಪ್ಟರ್‌ ಕೃಷ್ಣ ದೇವಾಡಿಗ ಸಾಸ್ತಾನ ಅವರನ್ನು  ಸಮ್ಮಾನಿಸಲಾಯಿತು.

ಸಮಸ್ಥೆಯ ಅಧ್ಯಕ್ಷ ನಾರಾಯಣ ದೇವಾಡಿಗ ಸ್ವಾಗತಿಸಿದರು.

ಕಾರ್ಯದರ್ಶಿ ರಾಜಾ ದೇವಾಡಿಗ ಹಾಗೂ ಮಹಿಳಾ  ಘಟಕದ ಕಾರ್ಯದರ್ಶಿ ಅನಿತಾ ಅಶೋಕ್‌  ವರದಿ ವಾಚಿಸಿದರು.

ಕೋಶಾಧಿಕಾರಿ ಜಯರಾಮ ದೇವಾಡಿಗ ಲೆಕ್ಕಪತ್ರ ಮಂಡಿಸಿದರು.

ಶಿಕ್ಷಕ ರಾಮ ದೇವಾಡಿಗ  ಹಾಗೂ ಪತ್ರಕರ್ತ ನಾಗರಾಜ ರಾಯಪ್ಪನ ಮಠ ಕಾರ್ಯಕ್ರಮ ನಿರೂಪಿಸಿದರು.

 


Share