ತ್ರಾಸಿ ದೇವಾಡಿಗ ಸಮುದಾಯ ಭವನಕ್ಕೆ ಸ್ಥಳವನ್ನು ಮಂಜೂರು ಮಾಡಲು ಪ್ರಯತ್ನಿಸುತ್ತೇನೆ : ಬಿ.ಎಂ ಸುಕುಮಾರ್ ಶೆಟ್ಟಿ

 

ತ್ರಾಸಿ: ದೇವಾಡಿಗ ಸಮಾಜ ಸೇವಾ ಸಂಘ(ರಿ) ತ್ರಾಸಿ ಇದರ 2ನೇ ವಾರ್ಷಿಕ ಮಹಾಸಭೆ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಅಣ್ಣಪ್ಪಯ್ಯ ಸಭಾಭವನ ತ್ರಾಸಿಯಲ್ಲಿ ನಡೆಯಿತು.

 ಕಾರ್ಯಕ್ರಮನ್ನು ಸನ್ಮಾನ್ಯ ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ದೇವಾಡಿಗ ಸಮುದಾಯ  ಭವನಕ್ಕೆ  ಬೇಕಾದ ಸ್ಥಳವನ್ನು ಮಂಜೂರು ಮಾಡಲು ಪ್ರಯತ್ನಿಸುತ್ತೇನೆ ಎಂದರು. ಅಧ್ಯಕ್ಷತೆಯನ್ನು ದೇವಾಡಿಗ ಸ.ಸೇ.ಸಂಘದ ಅಧ್ಯಕ್ಷರು ರಾಜು ದೇವಾಡಿಗ ವಹಿಸಿದರು.

 ಈ ಸಂದರ್ಭದಲ್ಲಿ ತ್ರಾಸಿ ನಿವೃತ್ತ ಸೈನಿಕರು ಚಂದ್ರ ದೇವಾಡಿಗರವರನ್ನು ಸನ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.

 

 ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ಕೊಲ್ಲೂರು ಆಡಳಿತ ಮಂಡಳಿ ಸದಸ್ಯೆ ಅಂಬಿಕಾ ಆರ್ ದೇವಾಡಿಗ, ಕುಂದಾಪುರ ಸಂಗೀತ ಭಾರತೀ ಟ್ರಸ್ಟ್ ನ ಕಾರ್ಯದರ್ಶಿ ನಾರಾಯಣ ದೇವಾಡಿಗ, ಮಹಿಳಾ ಘಟಕದ ಅಧ್ಯಕ್ಷರು ಶಾರದ ಡಿ. ಬಿಜೂರು, ಶೀನ ದೇವಾಡಿಗ , ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಡಾ| ರಾಜೇಂದ್ರ ಎಸ್. ನಾಯಕ್ ಕಾಳಾವರ, ಉಪಸ್ಥಿತರಿದ್ದರು.


Share