ಉಪ್ಪುಂದದಲ್ಲಿ ಯಶಸ್ವಿಯಾಗಿ ಜರುಗಿದ ಬೃಹತ್ ರಕ್ತದಾನ ಶಿಬಿರ

 

ಉಪ್ಪುಂದ : ದೇವಾಡಿಗ ಸಂಘ (ರಿ.) ಉಪ್ಪುಂದ, ಲಯನ್ಸ್ ಕ್ಲಬ್ ಬೈಂದೂರು, ಉಪ್ಪುಂದ, ಜೆಸಿಐ ಉಪ್ಪುಂದ, ಶ್ರೀ ಮೂಕಾಂಬಿಕ ಗ್ರಾಮೀಣಾಭಿವೃದ್ಧಿ ಟ್ರಸ್ಟ್ (ರಿ.) ಉಪ್ಪುಂದ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತನಿಧಿ ಕುಂದಾಪುರ ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಉಪ್ಪುಂದ ಮಾತೃಶ್ರೀ ಸಭಾಭವನ, ಶಾಲೆಬಾಗಿಲಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಡಿಗ ಸಂಘದ ಅಧ್ಯಕ್ಷ ಬಿ.ಎ. ಮಂಜು ದೇವಾಡಿಗ ಅವರು ವಹಿಸಿಕೊಂಡಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಡಾ ಎಚ್.ಎಸ್. ಮಲ್ಯ ರವರು ಮಾತನಾಡಿ ನಾವು ಕುಂದಾಪುರದ ಸರ್ಕಾರಿ ಆಸ್ಪತ್ರೆಯ ಬಡರೋಗಿಗಳಿಗೆ ಧಮಾರ್ಥವಾಗಿ ರಕ್ತವನ್ನು ನೀಡುವ ವವ್ಯಸ್ಥೆಯನ್ನು ಮಾಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಸಿಐ ಉಪ್ಪುಂದದ ಅದ್ಯಕ್ಷ ಪ್ರಶಾಂತ್ ಪೂಜಾರಿ, ಜಯಕರ ಶೆಟ್ಟಿ, ಎ.ಪಿ.ಎಮ್.ಸಿ ಸದಸ್ಯ  ಮಂಜು ದೇವಾಡಿಗ ಉಪಸ್ಥಿತರಿದ್ದರು.

ಜೆಸಿಐನ ದಿವಾಕರ ಶೆಟ್ಟಿ ಸ್ವಾಗತಿಸಿದರು, ರವಿಂದ್ರ ಎಚ್ ನಿರೂಪಿಸಿದರು, ದೇವಾಡಿಗ ಸಂಘದ ಮಂಜುನಾಥ ದೇವಾಡಿಗ ವಂದಿಸಿದರು.


Share