ದೇವಾಡಿಗ ಅಕ್ಷಯ ಕಿರಣ ದ ಸೇವಾ ಯಜ್ಣ !

 

ಸುಖ ಅನುಕೂಲವಿದ್ದಾಗ ಶ್ರೀಮತಿಕೇ ಇದ್ದಾಗ ನೆಂಟಟರು, ಭಂದು ಮಿತ್ರರು ಎಲ್ಲರೂ ಹತ್ತಿರ ಬರುತ್ತಾರೇ, ಇರುತ್ತಾರೇ! ಆದರೇ ಕಸ್ಟಗಳು, ಅನಾರೋಗ್ಯ ಪೀಡಿತವಾಗಿ ಕಂಗಾಲಾದಾಗ ಯಾರೂ ಹತ್ತಿರ ಸುಳಿಯರು!!.

ಇದಕ್ಕೇ ಸಾಕ್ಷಿಯಾದದ್ದು ಸುರತ್ಕಲ್ ಸಮೀಪದ ಕಾಟಿಪಳ್ಳ ನಿವಾಸಿಗಳಾದ ದoಪತಿ ಶ್ರೀ ಚಂದ್ರಹಾಸ ದೇವಾಡಿಗ ಮತ್ತು ದಯಾವತಿ ದೇವಾಡಿಗ. ಮೂರು ವರ್ಷಗಳ ಹಿಂದೇ ಚಂದ್ರಹಾಸ ದೇವಾಡಿಗರು  ಬ್ರೈನ್ ಸ್ಟ್ರೋಕ್ ಆಗೀ ತನ್ನ ಬಲ ಕಡೇಯ ಸ್ವಾಧೀನ ಕಳಕೊಂಡು ಇಂದಿನ ತನಕ ಹಾಸಿಗೇಯಲ್ಲಿ ಜೀವನ ಕಳೇಯುತೀದ್ದಾರೇ. ಆಂದು ಚಿಕಿತ್ಸೇಗಾಗಿ ಎರಡು ಲಕ್ಷ ರೂ ಗಳನ್ನು ಹೋಂದಿಸಲಾಗದೇ ಇಂದಿನ ತನಕ ಸಂಘರ್ಷದ ಹಾದಿಯಲ್ಲಿ ದಿನ ಕಳೇಯುತಿದ್ದಾರೇ. ಇದು ಒಂದು ಕಡೇ ಆದರೇ ಕಳೇದ ಹದಿನೈದು ವರ್ಷಗಳಿಂದ ಎರಡು ಸೇಂಟ್ಸ್ ಸರಕಾರಿ  ಜಾಗದಲ್ಲಿ ಸಣ್ಣ ಒಂದು ಕೋಟಡಿಯಲ್ಲಿ ವಾಸೀಸುತೀದ್ದರೂ ಜಾಗ ಅವರ ಹೇಸರಿಗೇ ಇನ್ನೂ ನೋಂದಣಿ ಆಗದೇ ಪಡಿತರ ಚೀಟಿ ಪಡೇಯಲು ಅಸಾದ್ಯವಾಗಿದೇ. ಹಾಗಾಗಿ ಯಾವ ಸರಕಾರಿ ಸೌಲಭ್ಯವು ಇವರಿಗೇ ಸಿಗುತ್ತಿಲ್ಲ.

ಕಳೆದ ವಾರ ಮಾಹಿತಿ ಸಿಕ್ಕಿದ ತಕ್ಷಣ  ದೇವಾಡಿಗ ಅಕ್ಷಯ ಕಿರಣದ ಮುಂ ಬೈ ಸೇವಾದಾರರಾದ ಶ್ರೀ ಗಣೇಶ್ ಶೇರಿಗಾರ್ ಮತ್ತು ದಯಾನಂದ್  ದೇವಾಡಿಗರು  ತಕ್ಷಣ ಕಾರ್ಯ ಪ್ರವತ್ತ ರಾಗಿ ತಾರೀಕು 21 ರಂದು ಕಾಟಿಪಳ್ಳದ ಅವರ ಮನೇಗೇ ಸೇವಾದಾರರಾದ  ಶ್ರೀ ಸುದೀಪ್ ದೇವಾಡಿಗ, ಶ್ರೀ ಕೇಶವ ಮೊಯಿಲಿ, ಶ್ರೀ ಗಣೇಶ್ ದೇವಾಡಿಗ ಉಜಿರೇ ಮತ್ತು ಶ್ರೀ ಜಗದೀಶ್ ದೇವಾಡಿಗ ಉಪ್ಪುಂದ ಅವರುಗಳ ಜತೇ ಗೂಡಿ ಭೇಟಿ ನೀಡಿ ಸುಮಾರು 30,000/ ರೂ ವೈದ್ಯಕೀಯ ನೇರವು  ನೀಡಿದರು .

ಅಲ್ಲದೇ ವಸತಿ ಹಕ್ಕು ಹೋರಾಟ ಸಮಿತಿಯ ಮಂಗಳೂರು ವಲಯದ  ಕಾರ್ಯಕರ್ತರಾದ ಶ್ರೀಮತಿ ಸ್ವರ್ಣ ಭಟ್ ಅವರ ಸಂಪರ್ಕ ಸಾಧಿಸಿ ಅವರ ಜತೇ ಗೂಡಿ ಮಂಗಳೂರು ಜಿಲ್ಲಾಧಿಕಾರಿಗೆ ಸಂಬಂದಿತರ ವಸತಿ ಹಕ್ಕಿಗಾಗಿ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಯವರು ಮುಂಬೈ ಮೂಲಕ ಇಲ್ಲಿನ ಈ ಗಂಭೀರ ವಿಷಯ ಪ್ರಸ್ತಾವವಾದುದಕ್ಕಾಗಿ ಸ್ವತಃ ಆಶ್ಚರ್ಯ ವ್ಯಕ್ತ ಪಡಿಸಿ ಶೀಘ್ರದಲ್ಲಿ ವಸತಿ ಹಕ್ಕು ಪತ್ರ ನೀಡುವುದಾಗಿ ಆಶ್ವಾಸನೇ ಇತ್ತರು.


Share