ಕುಂದಾಪುರ: ಆಲೂರಿನ ಹೊಂದಿಕೊಡಲು ಗ್ರಾಮದ ಉದಯ ದೇವಾಡಿಗರಿಗೆ ದೇವಾಡಿಗ ಅಕ್ಷಯ ಕಿರಣದಿಂದ ’ ಗಾಲಿ ಕುರ್ಚಿ ’ ದಾನ

 

ಕುಂದಾಪುರದ ಆಲೂರಿನ ಹೊಂದಿಕೊಡಲು ಗ್ರಾಮದ ಶೀನ ದೇವಾಡಿಗರ ಪುತ್ರ ಉದಯ ದೇವಾಡಿಗರು ಸೊಂಟದ ಕೇಳಗೇ ಸ್ವಾಧೀನ ಇಲ್ಲದೇ ಸುಮಾರು ಐದಾರು ವರ್ಷಗಳಿಂದ ಬಳಲುತ್ತಿದ್ದು ವೀಲ್ ಚಯರ್ ಗಾಗಿ ದೇವಾಡಿಗ ಅಕ್ಷಯ ಕಿರಣಕ್ಕೆ ಮನವಿ ಮಾಡಿದ್ದು ಇಂದು ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಆದ ಶ್ರೀ ರಾಮ ದೇವಾಡಿಗರು, ಶ್ರೀ ಶಂಕರ್ ಅಂಕದ ಕಟ್ಟೆ, ಶ್ರೀ ಪುರುಷೋತ್ತಮ್ ದಾಸ್ ಉಪ್ಪುಂದ, ಶ್ರೀ ಜಗದೀಶ್ ದೇವಾಡಿಗ ಉಪ್ಪುಂದ, ಶ್ರೀ ಮಹಾಲಿಂಗ ದೇವಾಡಿಗ ಬೈಂದೂರು,  ಶ್ರೀ ಮಂಜು ದೇವಾಡಿಗ ಚಿತ್ತೂರು, ಶ್ರೀ ಸುರೇಶ್ ದೇವಾಡಿಗ, ಶ್ರೀ ಜಗದೀಶ್ ದೇವಾಡಿಗ ಚಿತ್ತೂರು ಇವರು ಆಲೂರು ಶ್ರೀ ಶೀನ ದೇವಾಡಿಗರ ಮನೆಗೆ ಭೇಟಿ ನೀಡಿ ವೀಲ್ ಚಯರ್ (ರೋಗಿಗಳು ಬಳಸುವ ಗಾಲಿಕುರ್ಚಿ) ಹಸ್ತಾಂತರಿಸಿದರು.


Share